ETV Bharat / state

ಮೊದಲು ವಿಶ್ವಾಸ ಮತಯಾಚನೆ, ನಂತರ ಹಣಕಾಸು ವಿಧೇಯಕ ಮಂಡನೆ: ಸಿಎಂ ಬಿಎಸ್​ವೈ - ಬಿಬಿಎಂಪಿ ಆಯುಕ್ತ

ಶಾಸಕಾಂಗ ಪಕ್ಷದ ಸಭೆ ಬಳಿಕ ಮಾತನಾಡಿದ ಸಿಎಂ ಬಿ.ಎಸ್​.ಯಡಿಯೂರಪ್ಪ, ವಿಶ್ವಾಸಮತ ಸಾಬೀತಾದ ಮೇಲೆ ಹಣಕಾಸು ವಿಧೇಯಕ ಮಂಡನೆ ಮಾಡಲಾಗುತ್ತದೆ. ನಾಳೆ ಯಾವ ರೀತಿ ಸದನದಲ್ಲಿ ಇರಬೇಕು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಸಿಎಂ ಬಿ.ಎಸ್​. ಯಡಿಯೂರಪ್ಪ
author img

By

Published : Jul 28, 2019, 10:58 PM IST

Updated : Jul 28, 2019, 11:10 PM IST

ಬೆಂಗಳೂರು: ನಾಳೆ ವಿಶ್ವಾಸಮತ ಸಾಬೀತುಪಡಿಸಿದ ನಂತರ ಹಣಕಾಸು ವಿಧೇಯಕಕ್ಕೆ ಸದನದ ಒಪ್ಪಿಗೆ ಪಡೆದು, ಮಧ್ಯಾಹ್ನ ವಿಧಾನ ಪರಿಷತ್​​​ನಲ್ಲಿ ಅಂಗೀಕಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ. ವಿಶ್ವಾಸಮತ ಅನುಮೋದನೆ ಆದ ಮೇಲೆ ಹಣಕಾಸು ವಿಧೇಯಕ ಮಂಡನೆ ಮಾಡಲಾಗುತ್ತದೆ. ನಾಳೆ ಯಾವ ರೀತಿ ಸದನದಲ್ಲಿ ಇರಬೇಕು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

ಸಿಎಂ ಬಿ.ಎಸ್​. ಯಡಿಯೂರಪ್ಪ

ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಭೀಕರ ಬರಗಾಲ ಇದೆ. ನಾನು ದ್ವೇಷದ ರಾಜಕಾರಣ ಮಾಡಲ್ಲ. ಕಾಂಗ್ರೆಸ್-ಜೆಡಿಎಸ್ ಎಲ್ಲರ ಸಹಕಾರ ಪಡೆದು ರಾಜ್ಯದ ಅಭಿವೃದ್ಧಿಗೆ ವಿಶೇಷ ಗಮನ ಕೊಡುತ್ತೇನೆ ಎಂದರು.

ಈಗಷ್ಟೇ ಬಿಬಿಎಂಪಿ ಆಯುಕ್ತರನ್ನು ಕರೆಸಿ ಮೂರು ದಿನಗಳೊಳಗೆ ಕಸ ವಿಲೇವಾರಿ ಮಾಡಿಸಲು ಸೂಚನೆ ಕೊಟ್ಟಿದ್ದೇನೆ. ಬೆಂಗಳೂರು ಅಭಿವೃದ್ಧಿ, ಬಿಡಿಎ, ಬಿಬಿಎಂಪಿಯಲ್ಲಿ ಯಾವ ಕೆಲಸ ಆಗ್ತಿದೆ ಎಂದು ಪರಿಶೀಲನೆ ಮಾಡುತ್ತೇನೆ ಎಂದರು.

Intro:

ಬೆಂಗಳೂರು:ಬಹುಮತ ಸಾಬೀತು ಹಾಗು ಹಣಕಾಸು ವಿಧೇಯಕ ಸದನದಲ್ಲಿ ಅಂಗೀಕಾರಗೊಳ್ಳುವವರೆಗೆ ಪ್ರತಿಪಕ್ಷಗಳ ಯಾವುದೇ ಟೀಕೆಗೂ ಪ್ರತಿಕ್ರಿಯೆ ನೀಡದೇ ಶಾಂತಿಯುತವಾಗಿ ಕಲಾಪದಲ್ಲಿ ಇರಬೇಕು ಎನ್ನುವ ನಿರ್ಧಾರವನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗಿದೆ.

ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್,
ನಾಳೆ ಬಿಜೆಪಿ ಬಹುಮತ ಸಾಬೀತುಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ಆಗಿದೆ‌ ನಾಳೆ ಬೆಳಿಗ್ಗೆ ಮತ್ತೊಮ್ಮೆ 10.30 ಕ್ಕೆ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಸಲಾಗುತ್ತದೆ ನಂತೆ 11 ಗಂಟೆಯೊಳಗೆ ಸದನಕ್ಕೆ ತಲುಪಲು ಶಾಸಕರಿಗೆ ಸೂಚಿಸಲಾಗಿದೆ.ಮಧ್ಯಾಹ್ನ 1 ಗಂಟೆಯೊಳಗೆ ಬಿಜೆಪಿಯ ಎಲ್ಲಾ ಶಾಸಕರು ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು ಸುಮಾರು 12 ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ನಾಳೆಯೇ ಹಣಕಾಸು ವಿಧೇಯಕವನ್ನು ಸದನದಲ್ಲಿ ಮಂಡನೆ ಮಾಡಲಾಗುತ್ತದೆ, ಹಣಕಾಸು ವಿಧೇಯಕ ಅಂಗೀಕಾರಕ್ಕೆ ಸಹಕರಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿರ್ಧಾರದ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಯಿತು, ಸ್ಪೀಕರ್ ನಿರ್ಧಾರ ಏಕ ಪಕ್ಷೀಯವಾಗಿದೆ ಅವರ ನಿರ್ಧಾರವನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಖಂಡಿಸಿದೆ ಎಂದರು.

ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಕುರಿತ ವಿಷಯ ಸಂಬಂಧ ಇಂದಿನ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಆದರೆ ಜೆಡಿಎಸ್ ವರುಷ್ಠರು ಮೊದಲು ನಿರ್ಧಾರ ಕೈಗೊಂಡ ನಂತರ ಬಿಜೆಪಿ ಚರ್ಚೆ ನಡೆಸಲಿದೆ ಎಂದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ, ಅಭಿವೃದ್ಧಿ ಕಾರ್ಯಗಳ ಕುರಿತು ಆಗಸ್ಟ್ 2 ರಂದು ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೂರು ದಿನದ ನಂತರ ಎಲ್ಲಾ ಶಾಸಕರು ಬಿಜೆಪಿಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದಾರೆ. ಆಗಸ್ಟ್ 11 ರವರೆಗೂ ಸದಸ್ಯತ್ವ ಅಭಿಯಾನ ನಡೆಸಿ ನಿರೀಕ್ಷಿತ ಗುರಿ ತಲುಪಲು ಸಹಕಾರಿಯಾಗಲಿದ್ದಾರೆ ಎಂದು ರವಿಕುಮಾರ್ ತಿಳಿಸಿದರು.
Body:ಪ್ರಶಾಂತ್ ಕುಮಾರ್Conclusion:
Last Updated : Jul 28, 2019, 11:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.