ETV Bharat / state

ವಿಧಾನ ಪರಿಷತ್ ಕಲಾಪ ಆರಂಭ: ಅಗಲಿದ ಗಣ್ಯರಿಗೆ ಸಂತಾಪ ಸೂಚನೆ..!

ಬೆಳಗ್ಗೆ 11.10 ನಿಮಿಷಕ್ಕೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮೊದಲನೇ ದಿನದ ಕಲಾಪಕ್ಕೆ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮೊದಲಿಗೆ ಮಾಜಿ ಶಾಸಕರು, ಮಾಜಿ ಸಂಸದರು, ಕಲಾವಿದರು ಸೇರಿ ಅಗಲಿದ ಗಣ್ಯರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ನಿಲುವಳಿ ಮಂಡಿಸಿದರು.

ವಿಧಾನ ಪರಿಷತ್ ಕಲಾಪ ಆರಂಭ
ವಿಧಾನ ಪರಿಷತ್ ಕಲಾಪ ಆರಂಭ
author img

By

Published : Sep 13, 2021, 12:48 PM IST

Updated : Sep 13, 2021, 1:32 PM IST

ಬೆಂಗಳೂರು: 10 ದಿನಗಳ ಮಳೆಗಾಲದ ಅಧಿವೇಶನ ಆರಂಭಗೊಂಡಿದ್ದು, ವಿಧಾನ ಪರಿಷತ್​​​ನ ಮೊದಲ ದಿನದ ಕಲಾಪದಲ್ಲಿ ಇತ್ತೀಚೆಗೆ ಅಗಲಿದ 24 ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಮಂಡಿಸಿದ ಸಂತಾಪ ಸೂಚಕ ನಿಲುವಳಿಗೆ ಸದನ ಸಹಮತ ವ್ಯಕ್ತಪಡಿಸಿತು.

ಬೆಳಗ್ಗೆ 11.10 ನಿಮಿಷಕ್ಕೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮೊದಲನೇ ದಿನದ ಕಲಾಪಕ್ಕೆ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮೊದಲಿಗೆ ಮಾಜಿ ಶಾಸಕರು, ಮಾಜಿ ಸಂಸದರು, ಕಲಾವಿದರು ಸೇರಿ ಅಗಲಿದ ಗಣ್ಯರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ನಿಲುವಳಿ ಮಂಡಿಸಿದರು.

ಅಗಲಿದ ಗಣ್ಯರಿಗೆ ಸಂತಾಪ ಸೂಚನೆ

ಮಾಜಿ ಪರಿಷತ್ ಸದಸ್ಯ ಕೆಬಿ ಶಾಣಪ್ಪ, ಮಾಜಿ ಸಚಿವ ಡಾ‌. ಮುಮ್ತಾಜ್ ಅಲಿ ಖಾನ್, ನಿಂಗಯ್ಯ, ಪರಿಷತ್ ಮಾಜಿ ಸದಸ್ಯ ಎಸ್.ಎಂ ಆನಂದ್, ಶಾಸಕ ಸಿಎಂ ಉದಾಸಿ, ಮಾಜಿ ಸ್ಪೀಕರ್ ಕೃಷ್ಣ, ಮಾಜಿ ಸಚಿವ ಜಿ ಮಾದೇಗೌಡ, ಮಾಜಿ ಸಂಸದ ಬಸಪ್ಪ ಸಿದ್ನಾಳ್, ಮಾಜಿ ಸಂಸದ ಎಂ.ರಾಜಗೋಪಾಲ್, ಮಾಜಿ ಶಾಸಕ ಬಿ.ಆರ್‌.ಪಾಟೀಲ್, ಮಾಜಿ ಶಾಸಕ ಎ.ಕೆ ಅಬ್ದುಲ್ ಸಮದ್, ನಿಘಂಟು ತಜ್ಞ ಜಿ ವೆಂಕಟಸುಬ್ಬಯ್ಯ, ಕವಿ ಸಿದ್ದಲಿಂಗಯ್ಯ, ಕವಿ ಜರಗನಹಳ್ಳಿ ಶಿವಶಂಕರ್, ನಟ ಅರವಿಂದ, ಕಲಾವಿದೆ ಕನಕ, ವಿದ್ವಾಂಸ ಡಾ.ಲಕ್ಷ್ಮಿ ತಾತಾಚಾರ್, ನೃತ್ಯ ಕಲಾವಿದೆ ಬಿ ಭಾನುಮತಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ, ಶಿಕ್ಷಣ ತಜ್ಞ ಪ್ರೊ. ಎಂ.ಐ ಸವದತ್ತಿ, ಲೇಖಕಿ ಡಾ.ಹೆಚ್.ಗಿರಿಜಮ್ಮ, ಡಾ.ಅಶೋಕ್ ರಾಮಣ್ಣ ಸೊನ್ನದ್, ಪ್ರೊ.ವಸಂತ ಕುಷ್ಠಗಿ, ನಟಿ ಜಯಂತಿ ಅವರಿಗೆ ಸಂತಾಪ ಸೂಚಿಸಲಾಯಿತು.

ಸಭಾನಾಯಕ, ಪ್ರತಿಪಕ್ಷ ನಾಯಕರಿಂದ ಸಂತಾಪ

ಅಗಲಿದ ಗಣ್ಯರಿಗೆ ಸಂತಾಪ ಸೂಚನೆ

ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಕೆಲ ಸದಸ್ಯರು ಸಂತಾಪ ಸೂಚನೆ ಬೆಂಬಲಿಸಿ ಮಾತನಾಡಿದರು. ಅಗಲಿದ ಗಣ್ಯರು ಸಮಾಜಕ್ಕೆ ನೀಡಿರುವ ಕೊಡುಗೆ ಸ್ಮರಿಸಿದರು‌.

ಸಂತಾಪ ಸೂಚನೆ ವಿಷಯದ ನಂತರ ಕೋವಿಡ್ ವಿಷಯ ಪ್ರಸ್ತಾಪಿಸಿದ ಎಸ್.ಆರ್.ಪಾಟೀಲ್​​, ಮೂರನೇ ಅಲೆಯ ಹೊಸ್ತಿಲಲ್ಲಿ ಇದ್ದೇವೆ, ಎರಡನೇ ಅಲೆಯಲ್ಲಿ ರೋಗಿಗಳಿಗೆ ಎದುರಾದಂತೆ ಮೂರನೇ ಅಲೆಯ ವೇಳೆ ರೋಗಿಗಳು ವೈದ್ಯಕೀಯ ಸೌಲಭ್ಯ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ಕೊರೊನಾ ವಾರಿಯರ್ಸ್‌ ಸೇವೆ ಬಹಳ ಮುಖ್ಯ, ವೈದ್ಯರು ಕೂಡ ಅಪಾಯದ ನಡುವೆ ಉತ್ತಮ ಕೆಲಸ ಮಾಡಿದ್ದಾರೆ, ಅವರಿಗೂ ಧನ್ಯವಾದಗಳನ್ನು ಸಲ್ಲಿಸಬೇಕು ಎಂದರು.

ಈ ವೇಳೆ, ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ, ಒಂದು ಗಂಟೆಗಳ ಕಾಲ ಸಂತಾಪ ಸೂಚಿಸಿ ದೇಶದ ಕಂಡ ಮಹಾನ್ ನಾಯಕ ಎಂದು ಹೇಳುವ ಬದಲು ಅವರ ಮನೆಯಲ್ಲಿ ತಿನ್ನಲು ಇದೆಯಾ, ಅವರ ಕುಟುಂಬದ ಪರಿಸ್ಥಿತಿ ನೋಡಿ, ಸಾಕಷ್ಟು ಜನ ತಜ್ಞರು, ಕಲಾವಿದರು, ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ, ಅವರ ಮಕ್ಕಳಿಗೆ ಊಟಕ್ಕೆ, ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು, ಆಯ್ದ ನಿಷ್ಠಾವಂತರಿಗೆ ಮಾಸಾಶನ ಕೊಡುವ ವ್ಯವಸ್ಥೆ ಮಾಡಿದರೆ ಸಂತಾಪ ಸೂಚಿಸಿದ್ದಕ್ಕೆ ಸಾರ್ಥಕವಾಗಲಿದೆ ಎಂದು ಸದನದ ಗಮನ ಸೆಳೆದರು.

ಸಿಎಂ ಇಬ್ರಾಹಿಂ ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರ ಸೂಕ್ತವಾಗಿ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು. ನಂತರ ಸಂತಾಪ ಸೂಚನೆ ನಿಲುವಳಿಯನ್ನು ಅಂಗೀಕರಿಸಿ ಒಂದು ನಿಮಿಷ ಮೌನವನ್ನು ಆಚರಿಸಿ ಗೌರವ ಸಲ್ಲಿಕೆ ಮಾಡಲಾಯಿತು.

ಸದಸ್ಯರ ಗೈರು: ಕಲಾಪ ಆರಂಭಗೊಂಡಾಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸದಸ್ಯರು ಹಾಜರಾಗಿದ್ದರು, 15 ಜನ ಆಡಳಿತ ಬಿಜೆಪಿ ಪಕ್ಷದ ಸದಸ್ಯರು ಹಾಜರಿದ್ದರೆ, 6 ಜನ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಹಾಗೂ ಕೇವಲ ಇಬ್ಬರು ಜೆಡಿಎಸ್ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಸದಸ್ಯರ ಗೈರಿನಲ್ಲೇ ಸಭಾಪತಿಗಳು ಕಲಾಪ ಆರಂಭಿಸಿದರು. ನಂತರ ಇತರ ಸದಸ್ಯರು ತಡವಾಗಿ ಆಗಮಿಸಿ ಸದನದಲ್ಲಿ ಭಾಗಿಯಾದರು.

ಇದನ್ನೂ ಓದಿ : ಸದನದ ಕೊನೆಯ ಸಾಲಿನಲ್ಲಿ ಕುಳಿತು ಚರ್ಚೆ ಆಲಿಸುತ್ತಿರುವ ಮಾಜಿ ಸಿಎಂ BSY

Last Updated : Sep 13, 2021, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.