ETV Bharat / state

ಆಸ್ಕರ್, ಸಂಚಾರಿ ವಿಜಯ್​​ಗೆ ಪರಿಷತ್​​ನಲ್ಲಿ ಸಂತಾಪ: ಕಲಾಪ ನಾಳೆಗೆ ಮುಂದೂಡಿಕೆ - Oscar Fernandez is no more

ಇಹಲೋಕ ತ್ಯಜಿಸಿದ ರಾಜಕಾರಣಿ ಆಸ್ಕರ್ ಫರ್ನಾಂಡೀಸ್ ಹಾಗೂ ಖ್ಯಾತ ನಟ ಸಂಚಾರಿ ವಿಜಯ್​​ಗೆ ಪರಿಷತ್​​ನಲ್ಲಿ ಸಂತಾಪ ಸೂಚಿಸಲಾಯಿತು. ಈ ವೇಳೆ ಅವರ ಸಾಧನೆಗಳ ಬಗ್ಗೆ ರಾಜಕೀಯ ಮುಖಂಡರು ಗುಣಗಾನ ಮಾಡಿದರು.

condolences to Sanjay Vijay and Oscar Fernandez in vidhana parishad
ಆಸ್ಕರ್ ಫರ್ನಾಂಡೀಸ್, ಸಂಚಾರಿ ವಿಜಯ್​​ಗೆ ಪರಿಷತ್​​ನಲ್ಲಿ ಸಂತಾಪ
author img

By

Published : Sep 13, 2021, 6:04 PM IST

ಬೆಂಗಳೂರು: ಇಂದು ನಿಧನರಾದ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್​​ಗೆ ವಿಧಾನ ಪರಿಷತ್​​ನಲ್ಲಿ ಸಂತಾಪ ಸೂಚಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸಂದೇಶದಲ್ಲಿ ಆಸ್ಕರ್ ಅವರ ಗುಣಗಾನ ಮಾಡಿದರು.

ಮಾಜಿ ಕೇಂದ್ರ ಸಚಿವರು, ಮಾಜಿ ಲೋಕಸಭೆಯ ಸದಸ್ಯರು ಹಾಗೂ ಹಾಲಿ ರಾಜ್ಯಸಭೆಯ ಸದಸ್ಯರಾಗಿದ್ದ ಆಸ್ಕರ್ ಸರಳ ಸಜ್ಜನಿ ವ್ಯಕ್ತಿತ್ವದ ಧೀಮಂತ ನಾಯಕರಾಗಿದ್ದರು. ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಕೇಂದ್ರದಲ್ಲಿ ಸಾಂಖ್ಯಿಕ ಮತ್ತು ಕಾರ್ಯಕ್ರಮ ಇಲಾಖೆಯ ರಾಜ್ಯ ಸಚಿವರಾಗಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವರಾಗಿ, ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಸಚಿವರಾಗಿ ಹಾಗೂ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಾಗಿ ಆಪಾರ ಸೇವೆಯನ್ನು ಸಲ್ಲಿಸಿದ್ದರು. ಫರ್ನಾಂಡಿಸ್ ನಿಧನದಿಂದಾಗಿ ರಾಜ್ಯ ಹಾಗೂ ರಾಷ್ಟ್ರವು ಹಿರಿಯ ಸರಳ ಸಜ್ಜನ ವ್ಯಕ್ತಿತ್ವದ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.

ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಇತ್ತೀಚೆಗೆ ಅವರನ್ನು ಭೇಟಿಯಾಗಿದ್ದೆ. ಸಜ್ಜನ ರಾಜಕಾರಣಿಗೆ ಉತ್ತಮ ಉದಾಹರಣೆಯಾಗಿದ್ದರು. ಸಾರ್ವಜನಿಕ ಬದುಕಿನಲ್ಲಿ ಉತ್ತಮ ಹೆಸರು ಹೊಂದಿದ್ದರು. ಮುಂದೇನಾಗಬೇಕು, ರಾಜ್ಯದ ಜನ ಜೀವನ ಹೇಗೆ ಸಾಗಬೇಕು ಎಂಬ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರು.‌ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯುತ್ತಿದ್ದರು. ನಮ್ಮ ಸಮಕಾಲೀನ ಆದರ್ಶಪ್ರಾಯವಾದ ರಾಜಕಾರಣಿಯಾಗಿದ್ದರು. ಕೇಂದ್ರ ಮಟ್ಟದಲ್ಲಿ ರಾಜ್ಯದ ಗೌರವಯುತ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದರು ಎಂದು ಸ್ಮರಿಸಿದರು.

ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಸತ್ಯ, ಸಜ್ಜನ, ನಿಷ್ಠಾವಂತ ರಾಜಕಾರಣಿಯಾಗಿ ಆಸ್ಕರ್ ಫರ್ನಾಂಡೀಸ್ ಗುರುತಿಸಿಕೊಂಡಿದ್ದರು. ಒಂದು ಪಕ್ಷದ ನಾಯಕರಾಗಿ ಇರದೇ, ಸರ್ವ ಪ್ರಗತಿಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅತ್ಯುನ್ನತ ಹೆಸರು ಮಾಡಿದ್ದ ರಾಜ್ಯದ ನಾಯಕರಾಗಿದ್ದರು. ಕೇಂದ್ರ, ರಾಜ್ಯದ ನಡುವಿನ ಸಂಪರ್ಕ ಸೇತು ಆಗಿದ್ದರು ಎಂದರು.

ಸಂಚಾರಿ ವಿಜಯ್​​ಗೆ ಸಂತಾಪ:

ಸಂತಾಪ ಸಂದೇಶದ ಸಂದರ್ಭದಲ್ಲಿ ಬಿಟ್ಟು ಹೋಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರನ್ನು ಸೇರಿಸುವಂತೆ ಜೆಡಿಎಸ್ ಸದಸ್ಯ ಬೋಜೇಗೌಡ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಭಾಪತಿಗಳು ಮಧ್ಯಾಹ್ನದ ನಂತರ ಆಸ್ಕರ್ ಫರ್ನಾಂಡಿಸ್ ಅವರಿಗೆ ಸಂತಾಪ ಸೂಚಿಸಿದ ಸಂದರ್ಭದಲ್ಲಿಯೇ ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದರು.

ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸಂತಾಪ ಸೂಚಿಸಿದರು. ಅಗಲಿದ ಗಣ್ಯರಿಗೆ ಒಂದು ನಿಮಿಷ ಮೌನ ಆಚರಿಸಿದ ನಂತರ ಕಲಪನ ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.