ಬೆಂಗಳೂರು: ಅಣ್ಣಾವ್ರ ಕಿರಿಮಗ ಸ್ಯಾಂಡಲ್ವುಡ್ ದೊಡ್ಮನೆ ಮಗ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಅನ್ನೋ ವಿಷಯ ಅವರ ಕೋಟ್ಯಂತರ ಅಭಿಮಾನಿಗಳಿಗೆ ಅತೀವ ದುಃಖವನ್ನುಂಉಟು ಮಾಡಿದೆ. ನೆಚ್ಚಿನ ನಟ ಪವರ್ ಸ್ಟಾರ್ ಅಕಾಲಿಕ ನಿಧನ ಎಲ್ಲರಿಗೂ ಆಘಾತ ನೀಡಿದೆ.
ತಮ್ಮ ನೆಚ್ಚಿನ ನಟನ ಮುಖವನ್ನ ಕೊನೆಯ ಬಾರಿ ನೋಡಲು ಕಂಠೀರವ ಸ್ಟುಡಿಯೋದತ್ತ ಜನಸಾಗರವೇ ಹರಿದುಬರುತ್ತಿದ್ದರೆ, ಇತ್ತ ನಗರದ ಗಲ್ಲಿ ಗಲ್ಲಿಯಲ್ಲೂ ಪುನೀತ್ ಅವರಿಗೆ ಶ್ರದ್ಧಾಂಜಲಿಯ ಕಟ್ಔಟ್ ಹಾಕಲಾಗಿದೆ. ಯಾವುದೇ ಏರಿಯಾಕ್ಕೆ ಹೋದರೂ ಪ್ರತಿ ಸಿಗ್ನಲ್ನಲ್ಲಿಂದ ಹಿಡಿದು, ಮೆಜೆಸ್ಟಿಕ್ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಆಟೋ ಸ್ಟ್ಯಾಂಡ್ ಹೀಗೇ ಎಲ್ಲ ಕಡೆಯಲ್ಲೂ ನಗು ಮುಖದ ಪುನೀತ್ ಫೋಟೊಗಳೇ ಕಾಣುತ್ತಿವೆ.
ಆ ರಸ್ತೆಯಲ್ಲಿ ಹಾದುಹೋಗುವಾಗ ಆ ಫೋಟೋವನ್ನ ನೋಡಿ ಜನರ ಮುಖದಲ್ಲೊಂದು ಬೇಸರದ ಛಾಯೆ ಎದ್ದು ಕಾಣ್ತಿತ್ತು. ಇಂಡಸ್ಟ್ರಿಯಲ್ ಟೌನ್ ಕಾರ್ಖಾನೆಗಳ ಮುಂದೆ ಅಂಗಡಿ ಮುಂಗಟ್ಟು, ಮಾಲ್ಗಳ ಮುಂದೆ ಹಾಗೂ ಹೋಟೆಲ್ಗಳ ಮುಂದೆ ಬ್ಯಾನರ್ ಹಾಕಿ ಅದಕ್ಕೊಂದು ಹೂವಿನ ಹಾರ ಹಾಕಿ ಎಲ್ಲರೂ ಅಗಲಿದ 'ಅಪ್ಪು'ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಣ್ಣಾವ್ರ ತಂಗಿಗೆ ಪುನೀತ್ ಅಚ್ಚುಮೆಚ್ಚು: ಪ್ರೀತಿಯ ಸೋದರತ್ತೆಗೆ ತಿಳಿದಿಲ್ಲ ಅಪ್ಪು ಅಗಲಿಕೆ ವಿಚಾರ