ETV Bharat / state

ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ಖಂಡನೆ: ರಾಜ್ಯಾದ್ಯಂತ ಪ್ರತಿಧ್ವನಿಸಿದ ಹನುಮಾನ್ ಚಾಲೀಸಾ ಪಠಣ

ಬಜರಂಗದಳ ನಿಷೇಧ ಪ್ರಸ್ತಾಪ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಗುರುವಾರ ಸಂಜೆ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ನಡೆಯಿತು.

condemnation-of-bajrang-dal-ban-mass-chanting-of-hanuman-chalice-across-the-state
ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ಖಂಡನೆ: ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸ್ ಪಠಣ..!
author img

By

Published : May 4, 2023, 11:07 PM IST

ಬೆಂಗಳೂರು : ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗದಳ ನಿಷೇಧ ಪ್ರಸ್ತಾಪ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಗುರುವಾರ ಸಂಜೆ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ನಡೆಯಿತು. ಇದರಲ್ಲಿ ಬಿಜೆಪಿ ನಾಯಕರು ಪಾಲ್ಗೊಳ್ಳುವ ಮೂಲಕ ಬಜರಂಗದಳಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಜರಂಗ ದಳ ನಿಷೇಧ ಮಾಡುವ ಪ್ರಸ್ತಾಪ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ವಿರುದ್ದ ಹೋರಾಟ ತೀವ್ರಗೊಂಡಿದೆ. ವಿಹೆಚ್​ಪಿ ಕರೆ ಮೇರೆಗೆ ಇಂದು ಸಂಜೆ ಏಕಕಾಲಕ್ಕೆ ರಾಜ್ಯದ ರಾಮಮಂದಿರ, ಆಂಜನೇಯ ದೇಗುಲಗಳಲ್ಲಿ ಸಾಮೂಹಿಕ ಹನುಮಾನ್ ಚಾಲೀಸ್ ಪಾರಾಯಣ ಮಾಡಲಾಯಿತು. ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಇರುವ ಶ್ರೀರಾಮ ದೇವಸ್ಥಾನದಲ್ಲಿ ನಡೆದ ಹನುಮಾನ್ ಚಾಲೀಸ್ ಪಠಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದರು‌.

ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಹೆಸರಲ್ಲಿ ಅರ್ಚನೆ ಮಾಡಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಂತರ ಚಾಲೀಸಾ ಪಠಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಇಂದು ನಾವು ಹನುಮಾನ್ ಚಾಲೀಸಾ ಪಠಿಸಿ ನಮ್ಮ ಭಕ್ತಿ ತೋರಿಸಿದ್ದೇವೆ. ಯಾರೋ ರಾಮನ ವಿರೋಧಿಗಳು ನಮಗೆ ಸವಾಲು ಹಾಕಿದ್ದರು. ನಿಮಗೆ ಹನುಮಾನ್ ಚಾಲೀಸ್ ಬರುತ್ತಾ..? ಎಂದಿದ್ದರು. ಆಂಜನೇಯನ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದರು, ಇವರೆಲ್ಲಾ ಆಂಜನೇಯ ಹಾಗೂ ರಾಮನ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.

ಆಂಜನೇಯನ ತಂದೆ, ತಾಯಿ ಯಾರು ಅಂತ ಗೊತ್ತಿಲ್ಲದವರು ಇಂದು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಎಸ್ ಡಿ ಎಫ್ ಖುಷಿ ಪಡಿಸಲು ಆಂಜನೇಯ ಹಾಗೂ ಬಜರಂಗಿಯನ್ನು ಚುನಾವಣೆಗೆ ತೆಗೆದುಕೊಂಡು ಬಂದಿದ್ದಾರೆ. ಆಂಜನೇಯ ನಮಗೆ ವೋಟಿನ ಸರಕು ಅಲ್ಲ. ನಮ್ಮ ಧರ್ಮ ಉಳಿಸಿದ್ದಕ್ಕಾಗಿ, ಮಠ-ಮಂದಿರ ಉಳಿಸಿದ್ದಕ್ಕಾಗಿ ಪೂಜೆ ಮಾಡುತ್ತೇವೆ. ಕಾಂಗ್ರೆಸ್‌ಗೆ ಇದು ಮತ ಬ್ಯಾಂಕ್ ಎಂದು ಕಿಡಿಕಾರಿದರು. ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಸೇರಿ ಹಿಂದೂ ಸಂಘಟನೆಗಳ ಜೊತೆ ನಾವು ಇರುತ್ತೇವೆ ಎಂದು ಕೇಂದ್ರ ಸಚಿವರ ಭರವಸೆ ನೀಡಿದರು.

ಶಿರಸಿಯಲ್ಲಿ ಸ್ಪೀಕರ್​ ಕಾಗೇರಿ ಹನುಮಾನ್​ ಚಾಲೀಸಾ ಪಠಣೆ : ಶಿರಸಿಯಲ್ಲಿಯೂ ಬಿಜೆಪಿ ನಾಯಕರು ನಗರದ ಶಿರಸಿಯ ನಿತ್ಯಾನಂದ ಮಠದ ಶ್ರೀರಾಮಚಂದ್ರ ದೇವಾಲಯದಲ್ಲಿ ಹನುಮಾನ್​ ಚಾಲೀಸಾ ಪಠಣ ಮಾಡಿದರು. ಈ ವೇಳೆ ವಿಧಾನಸಭಾಧ್ಯಕ್ಷ ಹಾಗೂ ಶಿರಸಿ - ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹನುಮಾನ್ ಚಾಲೀಸಾ ಪಠಣ ಮಾಡಿದರು.

ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ರಾಜಕೀಯವಾಗಿ ಅವರಿಗೆ ಅಂತ್ಯಕಾಲ. ಜನರನ್ನು ಒಡೆದು ಆಳುವಂತಹ ನೀತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆದ್ದರಿಂದಲೇ ಬಹುಸಂಖ್ಯಾತರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಕಾಂಗ್ರೆಸ್ ಇದನ್ನು ಕಾಲ ಕಾಲಕ್ಕೆ ಮಾಡಿಕೊಂಡು ಬಂದು, ಈಗ ಪುನಃ ಬಜರಂಗ ದಳ ನಿಷೇಧ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಆದರೆ ಬಜರಂಗದಳ ನಮ್ಮ ಧರ್ಮ, ಸಂಸ್ಕೃತಿ ಭಾವನೆಗಳನ್ನು ರಕ್ಷಿಸುವ ರಚನಾತ್ಮಕ ಸಂಘಟನೆ. ಇಂತಹ ಸಂಘಟನೆಯನ್ನು ನಿಷೇಧಿಸುವ ಹೇಳಿಕೆ ಅವರ ಶವಪೆಟ್ಟಿಗೆಗೆ ಕೊನೆ ಮೊಳೆ ಇಟ್ಟಂತೆ ಎಂದು ಪ್ರತಿಕ್ರಿಯಿಸಿದರು.

ಮೈಸೂರಿನಲ್ಲಿ ಕಾಂಗ್ರೆಸ್​ ವಿರುದ್ಧ ಆಕ್ರೋಶ : ಮೈಸೂರಿನ ವಿದ್ಯಾರಣ್ಯಪುರದಲ್ಲಿರುವ ಗುರುದೇವಾಶ್ರಮದಲ್ಲಿ ಹಿಂದೂ ಕಾರ್ಯಕರ್ತರು ಹನುಮ ಭಜನೆ ಮಾಡಿ ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸಿ, ಬಿಜೆಪಿ ನೇತೃತ್ವದ ಸರ್ಕಾರ ಈಗಾಗಲೇ ಪಿಎಫ್​ಐ ಭಯೋತ್ಪಾದಕ ಸಂಘಟನೆ ನಿಷೇಧಿಸಿ ಅವರ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುತ್ತಿದ್ದರೂ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿಎಫ್​ಐ ಅನ್ನು ನಿಷೇಧಿಸುವುದಾಗಿ ಹೇಳಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಮಹಿಳಾ ಸಮಾಜದಿಂದ ಹನುಮಾನ್​ ಚಾಲೀಸಾ ಪಠಣ : ಅಂಬಾಭವಾನಿ ಮಹಿಳಾ ಸಮಾಜದವರು ಚಾಮುಂಡಿ ಬೆಟ್ಟದ ಪಾದದಲ್ಲಿರುವ ಅಂಬಾಭವಾನಿ ಮಹಿಳಾ ಸಮಾಜದ ಕಚೇರಿಯಲ್ಲಿ ಮಹಿಳೆಯರು ಸಾಮೂಹಿಕವಾಗಿ ಹನುಮಾನ್ ಚಾಲೀಸ್ ಪಠಣ ಮಾಡಿದರು. ಈ ವೇಳೆ ಅಂಬ ಭವಾನಿ ಮಹಿಳಾ ಸಮಾಜದ ಅಧ್ಯಕ್ಷ ಸವಿತಾ ಘಾಟ್ಕೆ, ರೂಪ ರಾಘವೇಂದ್ರ, ನಳಿನ ತಮ್ಮಯ್ಯ, ವಕೀಲಾದ ಜಯಶ್ರೀ ,ರತ್ನ ,ಶಶಿ, ಪಾರ್ವತಿ, ಗೀತಾಗಣೇಶ್ ಹಲವರು ಉಪಸ್ಥಿತರಿದ್ದರು.

ವಿಜಯನಗರದಲ್ಲಿ ಹನುಮಾನ್​ ಚಾಲೀಸಾ ಪಠಣ : ವಿಜಯನಗರದ ಹೊಸಪೇಟೆಯ ವಡಕರಾಯ ದೇಗುಲದಲ್ಲಿ ಬಜರಂಗದಳದ ವತಿಯಿಂದ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಆರ್​​ಎಸ್​ಎಸ್ ಮುಖಂಡ ನರಸಿಂಹ ಮೂರ್ತಿ​, ರಾಜಕೀಯಕ್ಕೂ, ಬಜರಂಗದಳಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.

ಚಾಮರಾಜನಗರದ ನಾಲ್ಕು ಕಡೆ ಹನುಮಾನ್ ಚಾಲೀಸಾ ಪಠಣ : ಚಾಮರಾಜನಗರದ ರಾಘವೇಂದ್ರ ಮಠ, ಶ್ರೀರಾಮ ಮಂದಿರ ,ಚಿಕ್ಕ ಅಂಗಡಿ ಬೀದಿ ಶ್ರೀರಾಮ ಮಂದಿರ, ಕೋರ್ಟ್ ರಸ್ತೆಯ ಗಣೇಶನ ಗುಡಿಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.

ಇದನ್ನೂ ಓದಿ : ಬಜರಂಗದಳ ನಿಷೇಧ : ಡ್ಯಾಮೇಜ್ ಕಂಟ್ರೋಲ್​ಗೆ ಕೈ ಕಸರತ್ತು, ಚುನಾವಣೆ ಲಾಭಕ್ಕೆ ಬಿಜೆಪಿ ತಂತ್ರಗಾರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.