ಬೆಂಗಳೂರು: ರಾಜ್ಯಾದ್ಯಂತ ಜುಲೈ 19 ರಿಂದ ಶುರುವಾಗಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಶಿಕ್ಷಣ ಇಲಾಖೆ ಅಂತಿಮ ತಯಾರಿಯಲ್ಲಿದ್ದು, ಕೆಲವೊಂದು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ದೊರೆಯದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿಯೇ, ಜುಲೈ 14 ರಿಂದ ಇಲಾಖೆ ಸುತ್ತೋಲೆಯನ್ನ ಹೊರಡಿಸಿತ್ತು. ಪರೀಕ್ಷೆಗೆ ನೋಂದಾಯಿಸಿಕೊಂಡ ಯಾವುದೇ ವಿದ್ಯಾರ್ಥಿಗೆ ಪ್ರವೇಶ ಪತ್ರ ಸಕಾಲದಲ್ಲಿ ದೊರೆಯದೇ ಇದ್ದರೆ ಮಂಡಳಿಯನ್ನು ಸಂಪರ್ಕಿಸಲು ಸೂಚಿಸಿತ್ತು.
ಅದರಂತೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬೆಂಗಳೂರು ದಕ್ಷಿಣ ವಲಯದಲ್ಲೇ ಸುಮಾರು 30 ದೂರುಗಳು ಬಂದಿವೆ. ರಾಜ್ಯದಲ್ಲಿ ಅಂದಾಜು 12 ಸಾವಿರಕ್ಕೂ ಹೆಚ್ಚು ಮಕ್ಕಳಿಂದ ಹಾಲ್ ಟಿಕೆಟ್ ಗಾಗಿ ದೂರು ಬಂದಿವೆ ಎನ್ನಲಾಗುತ್ತಿದೆ.
ಬ್ಲಾಕ್ | ದೂರುಗಳ ಸಂಖ್ಯೆ |
ಬೆಂಗಳೂರು ದಕ್ಷಿಣ ವಲಯ | 2 - 04 |
ಬೆಂಗಳೂರು ದಕ್ಷಿಣ ವಲಯ | 3 - 10 |
ಬೆಂಗಳೂರು ದಕ್ಷಿಣ ವಲಯ | 4 |
ಆನೇಕಲ್ | 6 |
ಬೆಂಗಳೂರು ದಕ್ಷಿಣ ವಲಯ | 1 - 10 ದೂರುಗಳು |
ಒಟ್ಟಾರೆ, ಬೆಂಗಳೂರು ದಕ್ಷಿಣ ವಲಯ ಬ್ಲಾಕ್ ವ್ಯಾಪ್ತಿಯಲ್ಲಿ 30 ವಿದ್ಯಾರ್ಥಿಗಳು ದೂರು ನೀಡಿದ್ದು, ಸದ್ಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ಪ್ರವೇಶ ಪತ್ರ( ಹಾಲ್ ಟಿಕೆಟ್ ) ಕೊಡಿಸಲಾಗಿದೆ.