ETV Bharat / state

ಸುಲಿಗೆ ಮಾಡಿ ಧರ್ಮದೇಟು ತಿಂದ ಕಳ್ಳತನದ ಆರೋಪಿಯಿಂದಲೇ ಪೊಲೀಸ್ ಠಾಣೆಗೆ ದೂರು - Bangalore theft case

ಸುಲಿಗೆ ಮಾಡಿದ್ದ ಆರೋಪ ಹೊತ್ತಿರುವ ಖದೀಮನೇ ಈಗ ಸದಾಶಿವನಗರ ಠಾಣೆಯಲ್ಲಿ ತಾನು ಥಳಿತಕ್ಕೊಳಗಾದ ಬಗ್ಗೆ ದೂರು ಸಲ್ಲಿಸಿದ್ದಾನೆ.

Complaint to the sadashivanagara police station from thief in Bangalore
ಸುಲಿಗೆ ಮಾಡಿ ಧರ್ಮದೇಟು ತಿಂದ ಕಳ್ಳನಿಂದಲೇ ಪೊಲೀಸ್ ಠಾಣೆಗೆ ದೂರು
author img

By

Published : Jul 2, 2022, 2:47 PM IST

ಬೆಂಗಳೂರು: ಚಾಕು ತೋರಿಸಿ ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿಯೇ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದಲ್ಲಿ ನಡೆದಿದೆ. ಸದಾಶಿವನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Complaint to the sadashivanagara police station from thief in Bangalore
ದೂರು ನೀಡಿದ ಆರೋಪಿ ತಬ್ರೇಜ್

ಜೂನ್ 24ರಂದು ರಾತ್ರಿ ಆರೋಪಿಗಳಾದ ತಬ್ರೇಜ್ ಹಾಗೂ ತೌಸೀಫ್ ಎಂ.ಎಸ್. ರಾಮಯ್ಯ ನಗರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಆತನ ಮೊಬೈಲ್‌ ಹಾಗೂ ಬೈಕ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಖದೀಮರನ್ನು ಬೆನ್ನಟ್ಟಿ ಹಿಡಿದಿದ್ದ ಬೈಕ್ ಮಾಲೀಕ ಅವರನ್ನು ಥಳಿಸಿದ್ದಾರೆ. ಇದೇ ವೇಳೆ ಸಾರ್ವಜನಿಕರು ಸಹ ಆರೋಪಿಗಳಿಗೆ ಥಳಿಸಿ ನಂತರ ಸ್ಥಳಕ್ಕೆ ಬಂದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಸುಳ್ಯ - ಕೊಡಗು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ ಮಾಹಿತಿ ಇಲ್ಲ: ವದಂತಿ ಹಬ್ಬಿಸದಂತೆ ಅಧಿಕಾರಿಗಳಿಂದ ಮನವಿ

ಆದರೆ ಆರೋಪಿ ತಬ್ರೇಜ್ ತನ್ನನ್ನು ಹಿಡಿದುಕೊಟ್ಟ ಸಾರ್ವಜನಿಕರ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಮೂವರು ಅಪರಿಚಿತರು ತನ್ನನ್ನು ಥಳಿಸಿ ಹಲ್ಲೆ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸದಾಶಿವನಗರ ಠಾಣೆಗೆ ದೂರು ನೀಡಿದ್ದು ಕೋರ್ಟ್ ಅನುಮತಿ ಮೇರೆಗೆ ಸದಾಶಿವನಗರ ಠಾಣಾ ಪೊಲೀಸರು ಬಂಧಿತ ನೀಡಿರುವ ದೂರನ್ನು ಸಹ ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.