ETV Bharat / state

ಡ್ರೋನ್​ ಪ್ರತಾಪ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು

author img

By

Published : Jul 17, 2020, 3:06 PM IST

ಡ್ರೋನ್ ಪ್ರತಾಪ್ ಸುಳ್ಳು ಹೇಳಿಕೊಂಡು ಸಕಾರ್ರದಿಂದ ಹಣ ಪಡೆದಿದ್ದಲ್ಲದೇ, ಶಿಕ್ಷಣ ಸಂಸ್ಥೆಗಳಿಗೆ ಹೋಗಿ ತಪ್ಪು ಸಂದೇಶ ರವಾನಿಸಿದ್ದಾನೆ ಎಂದು ಆರೋಪಿಸಿ ನಗರ ಪೊಲೀಸ್​ ಆಯುಕ್ತರಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

Complaint to City Police Commissioner against Drone Pratap
ಪೊಲೀಸ್​ ಆಯುಕ್ತರಿಗೆ ಸಲ್ಲಿಸಿದ ದೂರಿನ ಪ್ರತಿ

ಬೆಂಗಳೂರು : ಸದ್ಯ ಎಲ್ಲೆಡೆ ಸುದ್ದಿಯಾಗಿರುವ ಡ್ರೋನ್​​ ಪ್ರತಾಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್​​​ ವಕೀಲ ಸುನೀಲ್ ಕುಮಾರ್ ನೇತೃತ್ವದಲ್ಲಿ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್​ ಅವರಿಗೆ ದೂರು ನೀಡಿದ್ದಾರೆ.

ಡ್ರೋನ್ ಪ್ರತಾಪ್ ಮಂಡ್ಯ ಮೂಲದವನಾಗಿದ್ದು, 87 ದೇಶ ಸುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಈವರೆಗೆ 300 ಕಡೆ ಭಾಷಣ ಮಾಡಿದ್ಧೇನೆ. ವಿದೇಶದಲ್ಲಿ ನಡೆದ ಡ್ರೋನ್​ ಎಕ್ಸ್​ಪೋದಲ್ಲಿ ಚಿನ್ನದ ಪದಕ ಪಡೆದಿದ್ದೇನೆ ಎಂದು ಹೇಳಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣ ಪಡೆದಿದ್ದಾನೆ. ಅಲ್ಲದೇ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ತಪ್ಪು ಸಂದೇಶ ನೀಡಿದ್ದಾನೆ ಎಂದು ಆಯಕ್ತರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ, ರಾಜ್ಯದಲ್ಲಿ ಹಗಲಿರುಳು ಶ್ರಮಪಡುವ ಅನೇಕ ವಿಜ್ಞಾನಿಗಳಿದ್ದಾರೆ. ಪ್ರತಾಪ್ ತೆಗೆದುಕೊಂಡಿರುವ ಹಣವನ್ನು ವಾಪಸ್​​​​ ಪಡೆದು ವಿಜ್ಞಾನಿಗಳಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.