ಬೆಂಗಳೂರು: ಭ್ರಷ್ಟಾಚಾರ ಆರೋಪ ಮಾಡಿ ಎಸಿಬಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ವಿರುದ್ಧ ದೂರು ದಾಖಲಿಸಿದ್ದಾರೆ.
ಪಂಕಜ್ ಕುಮಾರ್ ಪಾಂಡೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. 108 ಆರೋಗ್ಯ ಕವಚ ಯೋಜನೆಯಲ್ಲಿ ಗೋಲ್ಮಾಲ್ ಮಾಡಿರುವುದಾಗಿ ಆರೋಪಿಸಿದ್ದಾರೆ. 108 ಸರ್ವಿಸ್ ಅನ್ನು ಖಾಸಗಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು.. GVK - EMRI ಜೊತೆ ಒಪ್ಪಂದ ಯೋಜನೆ ಮಾಡಿಕೊಳ್ಳಲಾಗಿತ್ತು.. 14/8/2008 ರಿಂದ 13/8/2018ರ ತನಕ ಒಪ್ಪಂದ ಮಾಡಿಕೊಳ್ಳಲಾಗಿತ್ತು.. ಇತ್ತೀಚೆಗೆ ಕಂಪನಿ ನಕಲಿ ಬಿಲ್ಸ್ ಮತ್ತು ಸುಳ್ಳು ದಾಖಲೆ ನೀಡಿ ಕ್ಲೈಮ್ ಮಾಡ್ತಿದೆ.. ಆಗಿರುವ ಒಪ್ಪಂದದ ನಿಯಮಗಳನ್ನು ಸಂಪೂರ್ಣ ಉಲ್ಲಂಘನೆ ಮಾಡಿದೆ.. ಅದು 2017 ರಿಂದ 2019 ರ ಅವಧಿಯಲ್ಲಿ ಅಕ್ರಮ ಎಸೆಗಿದೆ.. ಇತ್ತ ಜಿವಿಕೆ ಕಂಪನಿ ಒಪ್ಪಂದ ಮುರಿದು ಕಳಪೆ ಮಟ್ಟದ ಸರ್ವಿಸ್ ನೀಡುತ್ತಿದೆ ಜೊತೆಗೆ ಅನೇಕ ಬಾರಿ ಅವರಿಗೆ ರೋಗಿಗಳಿಗೆ ರೀಚ್ ಆಗದೇ ಶೋಕಾಸ್ ನೋಟಿಸ್ ಪಡೆದಿದ್ದಾರೆ.
ಇಂತಹ ಕಳಪೆ ಮಟ್ಟದ ಸರ್ವಿಸ್ನ ಕಳೆದ 8 ವರ್ಷಗಳು ನೀಡಿಲ್ಲ.. ಇಷ್ಟಾದರೂ ಅವರಿಗೆ ಶೇ.100ರಷ್ಟು ಹಣ ಬಿಡುಗಡೆಯಾಗಿದೆ. ಆದರೆ ಮೊದಲ ಬಾರಿಗೆ ಅವರಿಂದ ದಂಡ ವಸೂಲಿ ಮಾಡಲಾಗಿದೆ. ನಕಲಿ, ಅಕ್ರಮ ದಾಖಲೆ ಬಿಲ್ ಮಾಡಿರುವ ಕಾರಣಕ್ಕೆ 135 ಕೋಟಿ ರಿಕವರಿ ಮಾಡಲಾಗಿದೆ.. ಆದರೆ, ಈಗೀಗ ಮತ್ತೆ ಭ್ರಷ್ಟರನ್ನ 108 ಹೆಚ್ಓಡಿ ಮಾಡಲಾಗಿದೆ.. ಅಲ್ಲದೇ ಅಕ್ರಮಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ.. ಇದರಲ್ಲಿ ಪಂಕಜ್ ಕುಮಾರ್ ಪಾಂಡೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ.. ಅಲ್ಲದೇ ಭ್ರಷ್ಟಾಚಾರದಲ್ಲಿ ಅವರು ಸಹ ಭಾಗಿಯಾಗಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕೇಸ್ ದಾಖಲಿಸಲು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂ... ದ್ವಿವೇದಿಗೆ ಜೈಲೇ ಗತಿ!