ETV Bharat / state

ಮನೆಕೆಲಸಕ್ಕಾಗಿ ಬಾಲಕಿಯ ನೇಮಿಸಿ ಹಲ್ಲೆ: ಟೆಕ್ಕಿ ದಂಪತಿ ವಿರುದ್ಧ ದೂರು - ಮಹದೇವಪುರದ ಅನುಗ್ರಹ ಅಪಾರ್ಟ್​​ಮೆಂಟ್

ಲಾಕ್​​ಡೌನ್​ ವೇಳೆ ಮನೆಯಲ್ಲಿ ಅಪ್ರಾಪ್ತೆಯನ್ನು ಕೆಲಸದಾಳಾಗಿ ದುಡಿಸಿಕೊಂಡಿರುವುದಲ್ಲದೆ, ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

complaint-registerd-against-techie-couple-for-allegidly-appoint-minors-for-work
ಬಾಲಕಿಯ ಮನೆಗೆಲಸಕ್ಕೆ ನೇಮಿಸಿಕೊಂಡು ಹಲ್ಲೆ
author img

By

Published : Mar 16, 2021, 8:35 PM IST

ಬೆಂಗಳೂರು: ಮನೆಗೆಲಸ ಮಾಡುತ್ತಿದ್ದ 15 ವರ್ಷದ ಬಾಲಕಿಯನ್ನು ಗೃಹ ಬಂಧನದಲ್ಲಿರಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ‌ ಆರೋಪದಡಿ ಟೆಕ್ಕಿ ದಂಪತಿ ವಿರುದ್ಧ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೋಷಕರ ಸಮ್ಮುಖದಲ್ಲಿ ಬಾಲಕಿ ನೀಡಿದ ದೂರಿನ ಮೇರೆಗೆ ಅಮಿತ್ ಸಿಂಗ್, ಪತ್ನಿ ಸಂಜು ಸಿಂಗ್ ಎಂಬುವರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಉತ್ತರ ಭಾರತ ಮೂಲದ‌ ಬಾಲಕಿಯ ಕುಟುಂಬ ನಗರದಲ್ಲಿ ವಾಸವಾಗಿತ್ತು. ಯುವತಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕೊರೊನಾ ಬಿಕ್ಕಟ್ಟಿನಿಂದ ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಪೋಷಕರ ಸೂಚನೆ ಮೇರೆಗೆ ಮಹದೇವಪುರದ ಅನುಗ್ರಹ ಅಪಾರ್ಟ್​​ಮೆಂಟ್​​​ನ ಅಮಿತ್ ಸಿಂಗ್ ಎಂಬುವರ ಮನೆಯಲ್ಲಿ ಹಲವು ತಿಂಗಳಿಂದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು.

ವೃತ್ತಿಯಲ್ಲಿ ಸಾಫ್ಟ್​​​ವೇರ್ ಇಂಜಿನಿಯರ್ ಆಗಿರುವ ಅಮಿತ್ ಸಿಂಗ್ ದಂಪತಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಲಾಕ್​ಡೌನ್ ಬಳಿಕ ಊರಿಗೆ ಹೋಗಿದ್ದ ಬಾಲಕಿ ಪೋಷಕರು ಡಿಸೆಂಬರ್​ನಲ್ಲಿ ಬೆಂಗಳೂರಿಗೆ ಬಂದಿದ್ದರು‌. ಅಲ್ಲಿಯ ತನಕ ಬಾಲಕಿ ಮಾಲೀಕರ ಮನೆಯಲ್ಲಿ‌ ಕೆಲಸ‌‌ ಮಾಡುತ್ತಿದ್ದಳು.

ಈ ನಡುವೆ ಮನೆಯಲ್ಲಿ ಸಣ್ಣ ತಪ್ಪು ಮಾಡಿದರೂ ಅಥವಾ ಕೆಲಸ‌ ನಿಧಾನ ಮಾಡಿದರೂ ಉಗುರುಗಳಿಂದ ಪರಚುವುದು, ಹಿಂಸೆ ನೀಡುವ ಕಾರ್ಯ ಮಾಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಪತಿಯಿಂದ ಅನುಮಾನ, ನಿತ್ಯ ಕಿರುಕುಳ: ಮನನೊಂದು ಮಹಿಳೆ ಅತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.