ಬೆಂಗಳೂರು: ಸಿಎಂ ಆಪ್ತ ಸಲಹೆಗಾರರಾಗಿ ನೇಮಕಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮಿನಾರಾಯಣ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಪೂರ್ವಾನುಮತಿ ನೀಡುವಂತೆ ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಿದೆ.
![Bangalore](https://etvbharatimages.akamaized.net/etvbharat/prod-images/3998891_thumjpg.jpg)
ನಮ್ಮ ಬೆಂಗಳೂರು ಪ್ರತಿಷ್ಠಾನವು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಅವರು ಐಪಿಸಿ 1960ರ ಪ್ರಕಾರ ಎಸಗಿರುವ ಅಪರಾಧದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಪೂರ್ವಾನುಮತಿ ನೀಡಬೇಕೆಂದು ಕೋರಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜು. 30ಕ್ಕೆ ಮನವಿ ಸಲ್ಲಿಸಿತ್ತು.
![Bangalore](https://etvbharatimages.akamaized.net/etvbharat/prod-images/kn-bng-01-laxminarayan-cscomplaint-video-720195_31072019153236_3107f_1564567356_293.jpg)
ಎಂ.ಲಕ್ಷ್ಮಿನಾರಾಯಣ್ ಕೋರಮಂಗಲದ ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ ಪ್ರಾರಂಭಿಸಲು ವ್ಯಾಪಾರ ಪರವಾನಗಿ ನೀಡಿರುವ ಆರೋಪ ಎದುರಿಸುತ್ತಿದ್ದು, ಇವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಲಹೆಗಾರರನ್ನಾಗಿ ನೇಮಿಸಿದ 24 ಗಂಟೆಗಳಲ್ಲೇ ನಮ್ಮ ಬೆಂಗಳೂರು ಪ್ರತಿಷ್ಠಾನ ಈ ಮನವಿ ಸಲ್ಲಿಸಿದೆ.
![Bangalore](https://etvbharatimages.akamaized.net/etvbharat/prod-images/kn-bng-01-laxminarayan-cscomplaint-video-720195_31072019153236_3107f_1564567356_152.jpg)
ಇದಕ್ಕೂ ಮುನ್ನ ನಮ್ಮ ಬೆಂಗಳೂರು ಪ್ರತಿಷ್ಠಾನ ಕರ್ನಾಟಕ ಮುಖ್ಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಮೇ 29, 2019ರ ತೀರ್ಪಿನಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಆರೋಪಿಗೆ ನಿರ್ಬಂಧ ಹೇರಲು ಸಂಬಂಧಪಟ್ಟ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ದೂರು ಸಲ್ಲಿಸಬಹುದೆಂದು ಆದೇಶಿಸಿದೆ. ಅದರಂತೆ ಪ್ರತಿಷ್ಠಾನವು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದೆ ಎಂದು ತಿಳಿಸಿದೆ.