ಬೆಂಗಳೂರು: ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಐಪಿಎಲ್ ಕುರಿತು ಕಾರು ಓಡಿಸಿಕೊಂಡು ಫೇಸ್ಬುಕ್ ಲೈವ್ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಈತ ನಿತ್ಯ ಖಾಸಗಿ ಮಾದ್ಯಮಗಳಲ್ಲಿ ಕಾಣಿಸುತ್ತಾನೆ. ಐಪಿಎಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂದು ಹೇಳುತ್ತಾನೆ. ನಿತ್ಯ ತನ್ನ ಕಾರಿನಲ್ಲಿ ಫೇಸ್ಬುಕ್ ಲೈವ್ ಮಾಡಿಕೊಂಡು ಗಾಡಿ ಓಡಿಸಿಕೊಂಡು ಎಲ್ಲರೊಂದಿಗೂ ಮಾತನಾಡಿ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದಾನೆ ಎಂದು ಆರ್ಮಿ ಫೋರಂ ಎನ್ನುವ ಸಂಸ್ಥೆಯ ಮುಖ್ಯಸ್ಥ ಶಶಾಂಕ್ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ವ್ಯಕ್ತಿ ಕಾರು ಚಾಲನೆ ಮಾಡುತ್ತಾ ಫೇಸ್ಬುಕ್ ಲೈವ್ ಮಾಡಿ ಜನರ ಪ್ರಾಣದ ಜೊತೆ ಆಟ ಆಡುತ್ತಿದ್ದಾನೆ . ಈ ಕೂಡಲೇ ಈ ವ್ಯಕ್ತಿ ವಿರುದ್ದ ಕಾನೂನು ಕ್ರಮ ಆಗಲೇಬೇಕು ಎಂದು ಒತ್ತಾಯಿಸಲಾಗಿದೆ. ಹಿಂದೊಮ್ಮೆ ಖ್ಯಾತ ನಟಿ ಒಬ್ಬರಿಗೆ ಬೆಂಗಳೂರು ಪೊಲೀಸರು ಬುದ್ದಿ ಹೇಳಿ ದಂಡ ಹಾಕಿದ್ದರು, ಹಾಗೆಯೇ ಈತನ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.