ETV Bharat / state

ಉಪಚುನಾವಣೆ ಮಧ್ಯೆ ಅನರ್ಹ ಶಾಸಕರಿಗೆ ಮತ್ತೊಂದು ಸಂಕಷ್ಟ

ಅನರ್ಹ ಶಾಸಕರು ಬಿರುಸಿನ ಪ್ರಚಾರದಲ್ಲಿ ತೊಡಗಿರುವ ವೇಳೆ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೇಶದ್ರೋಹದ ಆರೋಪದಲ್ಲಿ 17 ಅನರ್ಹ ಶಾಸಕರು ಹಾಗೂ ಇತರರ ವಿರುದ್ಧ ಹಿರಿಯ ವಕೀಲ ಬಾಲನ್​ ಎಂಬುವರು ಎನ್​ಐಎ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದಾರೆ.

ಅನರ್ಹ ಶಾಸಕರು
author img

By

Published : Nov 25, 2019, 12:16 PM IST

ಬೆಂಗಳೂರು: ಈಗಾಗಲೇ ಉಪಚುನಾವಣಾ ಕಾವು ರಂಗೇರಿದ್ದು, ಎಲ್ಲ ಅನರ್ಹ ಶಾಸಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಅನರ್ಹ ಶಾಸಕರ ವಿರುದ್ಧ ಖಾಸಗಿ ದೂರೊಂದು ದಾಖಲಾಗಿದೆ. ಎನ್​ಐಎ ಕೋರ್ಟ್​ನಲ್ಲಿ ಈ ದೂರು ದಾಖಲಾಗಿದೆ.

ಹೌದು, ದೇಶದ್ರೋಹದ ಆರೋಪದಲ್ಲಿ 17 ಅನರ್ಹ ಶಾಸಕರು ಹಾಗೂ ಇತರರ ವಿರುದ್ಧ ಹಿರಿಯ ವಕೀಲ ಬಾಲನ್​ ಎಂಬುವರು ಈ ದೂರನ್ನು ದಾಖಲಿಸಿದ್ದಾರೆ. ಅಪರೇಷನ್ ಕಮಲಕ್ಕೆ ಸಾವಿರಾರು‌ ಕೋಟಿ ರೂಪಾಯಿ ಹಣ ವೆಚ್ಚ ಮಾಡಲಾಗಿದೆ. ಎಲ್ಲ 17 ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿ ಸೇರಿದ್ದಾರೆ. ಅಪರೇಷನ್ ಕಮಲಕ್ಕೆ ಅಕ್ರಮ ಹಣ ಬಳಸಲಾಗಿದೆ ಎಂದು ಆರೋಪಿಸಿ ವಕೀಲ್​ ಬಾಲನ್​ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಅಲ್ಲದೆ, ಈ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಯಬೇಕು. ಸಿಎಂ ಯಡಿಯೂರಪ್ಪ ಅನರ್ಹ ಶಾಸಕರಿಂದ ಸರ್ಕಾರ ಬಂತು ಎಂದು ಹೇಳಿಕೆ ನೀಡಿದ್ದಾರೆ. ಅನರ್ಹ ಶಾಸಕರು ಬಿಜೆಪಿ ಸೇರಿದ ಕೂಡಲೇ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ ಎಂಬ ಆರೋಪವಿದೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಖಾಸಗಿ ದೂರನ್ನು ವಕೀಲ ಬಾಲನ್ ಸಲ್ಲಿಸಿದ್ದಾರೆ.

Intro:Body:

Disqualified MLAs case 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.