ಬೆಂಗಳೂರು: ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕಲ್ಲಹಳ್ಳಿ ಮತ್ತು ರಾಜಶೇಖರ ಮುಲಾಲಿ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಓದಿ: ಜಮೀನಿನಲ್ಲಿ ಚಿನ್ನ ಸಿಕ್ಕಿದೆ ಎಂದು ನಕಲಿ ಚಿನ್ನ ಮಾರುತ್ತಿದ್ದ ಆರೋಪಿಗಳ ಬಂಧನ
ನೊಂದ ಯುವತಿಯ ವಿರುದ್ದ ಮಾನಹಾನಿಕಾರಕ ರೀತಿಯಲ್ಲಿ ಇಬ್ಬರೂ ಸೇರಿ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಯುವತಿಗೆ ಬೆದರಿಕೆ ಇದ್ದರೆ ದಿನೇಶ್ ಕರೆದುಕೊಂಡು ದೂರು ನೀಡಬಹುದಿತ್ತು. ಏಕೆ ಕರೆತಂದಿಲ್ಲ? ಇವರು ಏಕೆ ಬರುತ್ತಿಲ್ಲ..? ಹೆಣ್ಣು ಮಕ್ಕಳಿಗೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜಶೇಖರ್ ಮುಲಾಲಿ ಇನ್ನೂ ಕೆಲ ಸಿಡಿಗಳಿವೆ ಎಂದಿದ್ದಾರೆ. ಇಬ್ಬರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದು ಮಾನವ ಹಕ್ಕುಗಳ ಸೇವಾ ಸಮಿತಿ ಮಂಡ್ಯ ಅಧ್ಯಕ್ಷೆ ಇಂದಿರಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.