ETV Bharat / state

ಕೊರೊನಾ ಸಂಕಷ್ಟದ ಮಧ್ಯೆ ಕೆಲಸದಿಂದ ವಜಾ ಮಾಡಿದ ಕಂಪನಿ: ಪ್ರತಿಭಟನೆಗಿಳಿದ ಸಿಬ್ಬಂದಿ

author img

By

Published : Jul 24, 2020, 1:40 PM IST

ಬೆಂಗಳೂರಿನ ಎಂ. ಜಿ. ರಸ್ತೆಯ ಬಳಿ ಇರುವ ಖಾಸಗಿ ಮಾಧ್ಯಮ ಸಂಸ್ಥೆಯೊಂದರಲ್ಲಿ ಬಹುತೇಕರನ್ನ ಕೆಲಸದಿಂದ ತೆಗೆಯಲಾಗಿದೆ. ಇನ್ನೂ ಕೆಲವರನ್ನು ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

Company fired staff amid Corona hardship: staff protest
ಕೊರೊನಾ ಸಂಕಷ್ಟದ ಮಧ್ಯೆ ಕೆಲಸದಿಂದ ವಜಾ ಮಾಡಿದ ಕಂಪೆನಿ: ಪ್ರತಿಭಟನೆಗಿಳಿದ ಸಿಬ್ಬಂದಿ

ಬೆಂಗಳೂರು: ನಗರದ ಎಂ. ಜಿ. ರಸ್ತೆಯ ಬಳಿ ಇರುವ ಖಾಸಗಿ ಮಾಧ್ಯಮ ಸಂಸ್ಥೆಯೊಂದರಲ್ಲಿ ಬಹುತೇಕರನ್ನ ಕೆಲಸದಿಂದ ತೆಗೆದಿದ್ದು, ಇನ್ನೂ ಕೆಲವರನ್ನು ವರ್ಗಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಕೊರೊನಾ ಸೋಂಕು‌‌ ಹೆಚ್ಚಾಗುತ್ತಿದ್ದಂತೆ ಬಹಳಷ್ಟು ಮಂದಿ‌ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ‌ ಸಿಲುಕಿದ್ದಾರೆ. ಈ ಮಧ್ಯೆ ಖಾಸಗಿ ಮಾಧ್ಯಮ ಸಂಸ್ಥೆಯೊಂದರಲ್ಲಿ ಬಹುತೇಕರನ್ನ ಕೆಲಸದಿಂದ ತೆಗೆದಿದ್ದಾರೆ. ಹಾಗೆಯೇ ಇನ್ನೂ ಕೆಲವರನ್ನ ಕೆಲಸದಿಂದ ತೆಗೆಯಲು ಪಟ್ಟಿ ಸಿದ್ಧ ಮಾಡಿ ರಾಜೀನಾಮೆ ಕೊಡುವಂತೆ ಹೇಳಿದ್ದಾರೆ. ಈ ವೇಳೆ ನಿರಾಕರಣೆ ಮಾಡಿದವರನ್ನು ದಿಢೀರನೆ ಚೆನ್ನೈ ಹಾಗೂ ಹೈದರಾಬಾದ್ ಗೆ ವರ್ಗಾವಣೆ ಮಾಡಿದ್ದಾರೆ.

ಸದ್ಯ ಇದರಿಂದ ನೊಂದ ನೌಕರರು ತಮಗೆ ಮೂಲಭೂತ ಸೌಲಭ್ಯ ನೀಡಬೇಕು. ಹಾಗೆ ವರ್ಗಾವಣೆ ರದ್ದು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಸಿದ್ದಾರೆ. ಆದರೆ, ಕಂಪನಿಯವರು ಇನ್ನೂ ಯಾವುದೇ ಭರವಸೆ ನೀಡಿಲ್ಲವೆಂದು ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.