ETV Bharat / state

ಸದನದಲ್ಲಿ ಶರ್ಟ್​ ಕಳಚಿ ಪ್ರತಿಭಟನೆ: ಹಕ್ಕು ಬಾಧ್ಯತೆ ಸಮಿತಿ ಮುಂದೆ ಬಿ.ಕೆ.ಸಂಗಮೇಶ್ ವಿಷಾದ - ಈಟಿವಿ ಭಾರತ ಕನ್ನಡ

ಸದನದಲ್ಲಿ ಚರ್ಚೆ ವೇಳೆ ಶರ್ಟ್​ ಕಳಚಿ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್​ ಶಾಸಕ ಸಂಗಮೇಶ್​ ಅವರ ಪ್ರಕರಣವನ್ನು ಹಕ್ಕು ಬಾಧ್ಯತೆ ಸಮಿತಿ ಮುಕ್ತಾಯಗೊಳಿಸುವಂತೆ ಶಿಫಾರಸು ಮಾಡಿದೆ.

KN_BNG_13_A
ಶಾಸಕ ಬಿ.ಕೆ.ಸಂಗಮೇಶ್
author img

By

Published : Sep 21, 2022, 10:41 AM IST

ಬೆಂಗಳೂರು: ಸದನದಲ್ಲಿ ಶರ್ಟ್ ಕಳಚಿ ಪ್ರತಿಭಟನೆ ನಡೆಸಿದ ಘಟನೆಗೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ವಿಷಾದ ವ್ಯಕ್ತಪಡಿಸಿದ್ದು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಹಕ್ಕುಬಾಧ್ಯತೆಗಳ ಸಮಿತಿ ಶಿಫಾರಸು ಮಾಡಿದೆ.

ಹಕ್ಕು ಬಾಧ್ಯತೆಗಳ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು ವಿಧಾನಸಭೆಯಲ್ಲಿ ವರದಿ ಮಂಡಿಸಿದರು. 2021ರ ಮಾರ್ಚ್ 4 ರಂದು ವಿಧಾನಸಭೆಯಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ವಿಶೇಷ ಚರ್ಚೆ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾವಿಕ ಭಾಷಣವನ್ನು ಮಾಡಿದ ವೇಳೆ ಅದನ್ನು ವಿರೋಧಿಸಿ ಬಿ.ಕೆ.ಸಂಗಮೇಶ್ ಅವರು ಶರ್ಟ್ ಕಳಚಿ ಪ್ರತಿಭಟನೆ ನಡೆಸಿದ್ದರು. ಇದನ್ನು ಅಶಿಸ್ತಿನಿಂದ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಈ ರೀತಿಯ ವರ್ತನೆ ಇಡೀ ಸದನಕ್ಕೆ ಗೌರವ ತರುವಂಹದ್ದಲ್ಲ ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದ್ದರು.

ಶಾಸಕರನ್ನು ಸದನದಿಂದ ಒಂದು ವಾರಗಳ ಕಾಲ ಸ್ಪೀಕರ್ ಅಮಾನತಿನಲ್ಲಿಟ್ಟಿದ್ದರು. ಇದರ ವಿರುದ್ಧವೂ ಸಂಗಮೇಶ್ ಟೀಕಾಪ್ರಹಾರ ನಡೆಸಿದ್ದರು. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಸ್ತಾಪಿಸಿದ್ದರು. ಆಗ ಕಾಂಗ್ರೆಸ್ ಸದಸ್ಯರು ಧರಣಿ ಮಾಡಿ ಚರ್ಚೆಗೆ ಅವಕಾಶ ನೀಡದ ಕಾರಣ ಪ್ರಕರಣವನ್ನು ಹಕ್ಕುಬಾಧ್ಯತೆಗಳ ಸಮಿತಿಗೆ ಕಳುಹಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹಕ್ಕು ಬಾಧ್ಯತೆ ಸಮಿತಿ ಮುಂದೆ ಸಂಗಮೇಶ್ ಹಾಜರಾಗಿ ವಿಷಾದ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸ್ಟೇಟಸ್: ಶಿಕ್ಷಣ ಇಲಾಖೆ ನಿರ್ದೇಶಕ ಎತ್ತಂಗಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.