ETV Bharat / state

ಹಣಕಾಸು ಕೊರತೆ ಇಲ್ಲ: ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಶುದ್ಧ ನೀರು ಪೂರೈಕೆಗೆ ಬದ್ಧವೆಂದ ಈಶ್ವರಪ್ಪ

ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಶಾಲೆ ಹಾಗು ಅಂಗನವಾಡಿಗಳಿಗೆ ಗ್ರಾಮ ‌ಪಂಚಾಯತ್​ನಿಂದ ನೀರನ್ನು ಪೂರೈಸುವ ಬಗ್ಗೆ ಈಗಾಗಲೇ ಸರ್ಕಾರದ ಆದೇಶವಾಗಿದೆ. ಗ್ರಾಮೀಣ ಭಾಗದ ಎಲ್ಲ ಅಂಗನವಾಡಿ, ಶಾಲೆಗಳಿಗೆ ನಳದ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

KS Eshwarappa
ಸಚಿವ ಕೆಎಸ್​ ಈಶ್ವರಪ್ಪ
author img

By

Published : Mar 23, 2021, 2:06 PM IST

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಶಾಲಾವರಣಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್​ನ ಗಮನ ಸೆಳೆಯುವ ಸೂಚನೆ ಕಲಾಪದಲ್ಲಿ ಅಂಗನವಾಡಿ ಮತ್ತು ಶಾಲೆಗಳಿಗೆ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಕುರಿತು ಕೆ.ಎ. ತಿಪ್ಪೇಸ್ವಾಮಿ ಸರ್ಕಾರದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ, ಕೇಂದ್ರ ಜಲಶಕ್ತಿ ಮಂತ್ರಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ 100 ದಿನಗಳ ಅಭಿಯಾನದಡಿ ರಾಜ್ಯದಲ್ಲಿ ಗ್ರಾಮೀಣ ಭಾಗದ ಶಾಲೆಗಳು, ಅಂಗನವಾಡಿಗಳು, ಆಶ್ರಮ ಶಾಲೆಗಳಿಗೆ ನಳದ ಮೂಲಕ ಕುಡಿಯುವ ನೀರು, ಅಡುಗೆ ಮಾಡಲು, ಶೌಚಾಲಯಕ್ಕೆ ಹಾಗು ಕೈ ತೊಳೆಯಲು ನೀರನ್ನು ಒದಗಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಂದು ವೇಳೆ ಅಂಗನಾಡಿ ಕೇಂದ್ರವು ಖಾಸಗಿ ಕಟ್ಟಡದಲ್ಲಿದ್ದರೆ ನಳದ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಅದಕ್ಕೆ ತಗುಲುವ ವೆಚ್ಚವನ್ನು ಕಟ್ಟಡ ಮಾಲೀಕರಿಗೆ ಸಲ್ಲಿಸುವ ಬಾಡಿಗೆ ಹಣದಲ್ಲಿ ವಸೂಲಿ ಮಾಡಲು ಸೂಚಿಸಿದೆ ಎಂದರು.

ವಿಧಾನ ಪರಿಷತ್ ಕಲಾಪ

ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಶಾಲೆ ಹಾಗು ಅಂಗನವಾಡಿಗಳಿಗೆ ಗ್ರಾಮ‌ ಪಂಚಾಯತ್​ನಿಂದ ನೀರನ್ನು ಪೂರೈಸುವ ಬಗ್ಗೆ ಈಗಾಗಲೇ ಸರ್ಕಾರದ ಆದೇಶವಾಗಿದೆ. ಗ್ರಾಮೀಣ ಭಾಗದ ಎಲ್ಲ ಅಂಗನವಾಡಿ, ಶಾಲೆಗಳಿಗೆ ನಳದ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಂಗನಾಡಿ,ಶಾಲೆಗಳಿಗೆ ಕುಡಿಯುವ ನೀರು ಪೂರೈಸಲು ಇಡೀ ರಾಜ್ಯದಲ್ಲಿ ಎಷ್ಟೇ ಹಣ ಬೇಕಿದ್ದರೂ ಭರಿಸಲಾಗುತ್ತದೆ, ಹಣಕಾಸಿನ ಕೊರತೆ ಇಲ್ಲದೆ ಎಲ್ಲಾ ಅಂಗನವಾಡಿ ಮತ್ತು ಶಾಲೆಗೆ ಕುಡಿಯಿವ ನೀರು ಶೌಚಾಲಯ ವ್ಯವಸ್ಥೆ ಮಾಡಲಾಗುತ್ತದೆ, ಕಾಂಪೌಂಡ್ ಅನ್ನು ನರೇಗಾದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸರ್ಕಾರದ ಉತ್ತರದ ಪ್ರತಿಯಲ್ಲಿ ಅಳವಡಿಸಿದ್ದ ದಾಖಲೆಗಳು ಕಪ್ಪಾಗಿರುವ ಬಗ್ಗೆ ಪ್ರಶ್ನಿಸಿದರು. ದಾಖಲೆಗಳನ್ನು ಇಷ್ಟೊಂದು ನಿರ್ಲಕ್ಷ್ಯದಿಂದ ಒದಗಿಸುವ ಅಧಿಕಾರಿಗಳ ವಿರುದ್ಧ ಕ್ರಮ ಅಗತ್ಯ ಎಂದರು. ಸದನಕ್ಕೆ ಏನು ಬೇಕಾದರೂ ಹೇಗೆ ಬೇಕಾದರೂ ಉತ್ತರ ವಹಿಸಬೇಕು ಅಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ನನಗೂ ಓದಲು ಸಾಧ್ಯವಾಗಲಿಲ್ಲ. ‌ಪ್ರತಿಪಕ್ಷ ಸದಸ್ಯರು ಕಪ್ಪು ಕಪ್ಪಾಗಿ ಕೊಡಲಾಗಿದ್ದ ದಾಖಲೆಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ- ಇಬ್ರಾಹಿಂ ಬಣ್ಣದ ಪ್ರಸ್ತಾಪ:

ಈ ವೇಳೆ ಕಾಂಗ್ರೆಸ್ ‌ಸದಸ್ಯ ಸಿ.ಎಂ ಇಬ್ರಾಹಿಂ ಈ ದಾಖಲೆ ನೋಡಿದರೆ ಕುಡಿಯುವ ನೀರು ಯಾವ ಬಣ್ಣದ್ದಾಗಿದೆ ಎಂದು ಗೊತ್ತಾಗಲಿದೆ ಎಂದು ಈಶ್ವರಪ್ಪ ಅವರ ಕಾಲೆಳೆದರು. ಈ ವೇಳೆ ಪರಸ್ಪರರ ಬಣ್ಣದ ಬಗ್ಗೆ ಪ್ರಸ್ತಾಪವಾಯಿತು. ಇಬ್ಬರೂ ಒಟ್ಡಿಗೆ ನಿಲ್ಲೋಣ ಯಾರು ಹೆಚ್ಚು ಬಿಳಿಯಾಗಿದ್ದಾರೆ ಎಂದು ಸದನದಲ್ಲಿ ಮತಕ್ಕೆ ಹಾಕೋಣ ಎಂದರು. ಆಗ ಸದನ ನಗೆಗಡಲಲ್ಲಿ ತೇಲಿತು. ನಂತರ ಮಾತನಾಡಿದ ಸಚಿವ ಈಶ್ವರಪ್ಪ, ನಮ್ಮ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಸರಿಯಾಗಿ ದಾಖಲೆ ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ನಗರ ಪ್ರದೇಶದ ಶಾಲೆಗಳು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರಲ್ಲ. ಆದರೂ ನಾವು ನಗರ ಪ್ರದೇಶದ ಶಾಲೆಗಳಿಗನ್ನೂ ಅಭಿವೃದ್ಧಿ ಮಾಡಿದ್ದೇವೆ, ನಗರ ಪ್ರದೇಶಗಳ ಸರ್ಕಾರಿ ಶಾಲೆಗಳು ಯಾವಾಗಲೂ ಅನಾಥವಾಗಿವೆ, ಅಲ್ಲಿ ಖಾಸಗಿಯ ಶಾಲೆಗಳು ಅಭಿವೃದ್ಧಿ ಆದರೆ ಸರ್ಕಾರಿ ಶಾಲೆಗಳು ಮಾತ್ರ ಅನಾಥವಾಗಿವೆ. ನಾವು ನಮ್ಮ ಜಿಲ್ಲೆಯಲ್ಲಿ ದೇಣಿಗೆ ಪಡೆದು ಅಭಿವೃದ್ಧಿ ಮಾಡಿದ್ದೇವೆ, ಇತರರು ಕೂಡ ಮಾಡಬೇಕು. ಸರ್ಕಾರ ಯಾಕೆ ನಗರ ಪ್ರದೇಶದಲ್ಲಿ ಶಾಲೆಗಳ ಅಭಿವೃದ್ಧಿ ಮಾಡುವ ದೃಷ್ಟಿಯಲ್ಲಿ ಯೋಚಿಸುತ್ತಿಲ್ಲ ಅನ್ನೋದು ಗೊತ್ತಿಲ್ಲ ಎಂದರು.

ಗ್ರಾಮೀಣ ಪ್ರದೇಶದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.