ETV Bharat / state

ಚುನಾವಣಾ ಚೆಕ್ ಪೋಸ್ಟ್ ಸಿಬ್ಬಂದಿ ವಿರುದ್ಧ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗರಂ - karnataka assembly election 2023

ಗಡಿಭಾಗದ ಚೆಕ್ ಪೋಸ್ಟ್​​ನಲ್ಲಿನ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ಜೊತೆ ಪೊಲೀಸ್​​ ಆಯುಕ್ತ ಪ್ರತಾಪ್​ ರೆಡ್ಡಿ ಗರಂ ಆಗಿದ್ದು, ಈ ಬಗ್ಗೆ ಮಹತ್ವದ ಸಭೆ ನಡೆಸಿ ಖಡಕ್​ ಸೂಚನೆ ರವಾನಿಸಿದ್ದಾರೆ.

commissioner-of-police-pratap-reddy-has-warned-election-check-post-is-staffs
ಚುನಾವಣಾ ಚೆಕ್ ಪೋಸ್ಟ್ ಸಿಬ್ಬಂದಿ ವಿರುದ್ಧ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗರಂ
author img

By

Published : Apr 13, 2023, 5:14 PM IST

ಚುನಾವಣಾ ಚೆಕ್ ಪೋಸ್ಟ್ ಸಿಬ್ಬಂದಿ ವಿರುದ್ಧ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗರಂ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಈಗಾಗಲೇ ನಗರದ ಗಡಿಭಾಗದಲ್ಲಿ ಚೆಕ್ ಪೋಸ್ಟ್​​ಗಳನ್ನ ಹಾಕಲಾಗಿದೆ. ಆದರೆ, ಆ ಚೆಕ್ ಪೋಸ್ಟ್​​ನಲ್ಲಿನ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್​ ರೆಡ್ಡಿ ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.

ನಗರದ ಕೆಲವು ಕಡೆ ನಗದು, ಕುಕ್ಕರ್, ಚಿನ್ನಾಭರಣ ಸೇರಿದಂತೆ ಮತದಾರರಿಗೆ ಆಮಿಷ ಒಡ್ಡುವ ವಸ್ತುಗಳು ಪತ್ತೆಯಾಗುತ್ತಲೇ ಇದೆ. ಅದು ಕೆಲ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಥವಾ ಮಾಹಿತಿದಾರರ ಮಾಹಿತಿ ಆಧರಿಸಿ ವಾಹನ ಪರಿಶೀಲನೆ ಮಾಡಿದಾಗ ಮಾತ್ರ ಸಿಗುತ್ತಿದೆ ಎಂದು ತಿಳಿದು ಬಂದ ಹಿನ್ನೆಲೆ ಪೊಲೀಸ್ ಆಯುಕ್ತರು ಎಲ್ಲಾ ವಿಭಾಗದ ಡಿಸಿಪಿ, ಎಸಿಪಿ, ಇನ್ಸ್​​ಪೆಕ್ಟರ್​ಗಳ​ ಜೊತೆ ಸಭೆ ನಡೆಸಿದ್ದಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಸ್ವತಃ ಹಿರಿಯ ಅಧಿಕಾರಿಗಳು ಓಡಾಡುವ ಸ್ಥಳದಲ್ಲಿಯೇ ವಾಹನಗಳ ಪರಿಶೀಲನೆ ನಡೆಯುತ್ತಿರಲಿಲ್ಲ. ಇದನ್ನ ಗಮನಿಸಿದ್ದ ಅಧಿಕಾರಿಗಳೇ ನಗರ ಪೊಲೀಸ್​ ಆಯುಕ್ತರ ಗಮನಕ್ಕೆ ತಂದಿದ್ದಾರೆ. ತಮ್ಮ ಮೇಲಧಿಕಾರಿಗಳು ಬಂದ ಬಳಿಕ ಒಂದಷ್ಟು ವಾಹನಗಳ ಪರಿಶೀಲನೆ ನಡೆಸಿ ಅವರು ತೆರಳಿದ ಬಳಿಕ ಮತ್ತದೇ ವರ್ತನೆ ಚೆಕ್​ ಪೋಸ್ಟ್​ನಲ್ಲಿರುವ ಪೊಲೀಸರದ್ದಾಗಿತ್ತು.

ಇವೆಲ್ಲವನ್ನು ಗಮನಿಸಿದ್ದ ನಗರ ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿ ಆಯಾ ವಿಭಾಗದ ಅಧಿಕಾರಿಗಳನ್ನ ಕರೆದು ಸಭೆ ನಡೆಸುತ್ತಿದ್ದಾರೆ. ಇನ್ನು ಸಭೆಯಲ್ಲಿ ಆಯಾ ವಿಭಾಗದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದು, ವಾಹನ ಪರಿಶೀಲನೆ ನಡೆಸದೇ ಸುಮ್ಮನೆ ಇರುತ್ತಾರೆ, ಹೀಗೇ ಆದರೆ, ಅಕ್ರಮವಾಗಿ ಬರುವ ವಸ್ತುಗಳು ಅನಾಯಾಸವಾಗಿ ನಗರಕ್ಕೆ ಬರುತ್ತದೆ. ಇವೆಲ್ಲವನ್ನು ಮಾನಿಟರ್​ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ನಗರದ ಎಲ್ಲ ಚೆಕ್​ ಪೋಸ್ಟ್​​​ಗಳಲ್ಲಿ ಮೂರ್ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಸಲಾಗಿದೆ ಹಾಗೂ ಅದನ್ನ ಹಿರಿಯ ಅಧಿಕಾರಿಗಳು ನೇರವಾಗಿ ಮಾನಿಟರ್​ ಮಾಡಬಹುದಾಗಿದೆ. ಇನ್ನು ಟ್ರಾಫಿಕ್​ ಜ್ಯಾಂ ಆಗದ ರೀತಿಯಲ್ಲಿ ವಾಹನವನ್ನ ಪರಿಶೀಲನೆ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, "ಪ್ರತಿ ನಾಮಪತ್ರ ಸಲ್ಲಿಸುವ ಕೇಂದ್ರಗಳಲ್ಲಿ ಸಹಾಯಕ ಪೊಲೀಸ್​ ಆಯುಕ್ತರನ್ನು (ಎಸಿಪಿ) ನೋಡಲ್​ ಅಧಿಕಾರಿಯನ್ನಾಗಿ ನೇಮಕ ಮಾಡಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ​​ ಮಾಡಲಾಗಿದೆ" ಎಂದು ತಿಳಿಸಿದರು.

ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ: ಇಂದಿನಿಂದ ಏಪ್ರಿಲ್ 20ರವೆರೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ನಾಮಪ್ರತ ಸಲ್ಲಿಕೆ ಪ್ರಕ್ರಿಯೆ ಸಂಬಂಧಿಸಿದಂತೆ ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಿದ್ದಾರೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಏಪ್ರಿಲ್ 24 ರಂದು ಕೊನೆಯ ದಿನವಾಗಿದೆ. ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: KPSC ನೇಮಕಾತಿ: ಸಹಕಾರ ಸಂಘಗಳಲ್ಲಿ ನಿರೀಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.