ETV Bharat / state

2000 ಪರಿಹಾರ ನೀಡಲು ಕಾರ್ಮಿಕರಿಂದ 200 ರೂ. ಕಮಿಷನ್: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ತಾಕೀತು - ಕಾರ್ಮಿಕರಿಗೆ ಕೋವಿಡ್ ನೆರವು

ಲಾಕ್​ಡೌನ್ ಹಿನ್ನೆಲೆ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ನೀಡಲು ಕಮಿಷನ್​ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್​ ಆದೇಶಿಸಿದೆ. ಅಲ್ಲದೇ 2 ಸಾವಿರ ರೂಪಾಯಿಯಷ್ಟು ಸಣ್ಣ ಪರಿಹಾರದ ಹಣ ಪಡೆದುಕೊಳ್ಳಲು ಕಮಿಷನ್ ಕೊಡಬೇಕಾಗಿ ಬಂದಿರುವುದು ನಿಜಕ್ಕೂ ಶೋಚನೀಯ ಎಂದು ಬೇಸರ ಹೊರಹಾಕಿದೆ.

commission to provide covid assistance to workers
ಹೈಕೋರ್ಟ್
author img

By

Published : Jul 1, 2021, 7:07 PM IST

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ ಸರ್ಕಾರ ಘೋಷಿಸಿದ್ದ 2 ಸಾವಿರ ರೂಪಾಯಿ ಪರಿಹಾರಧನ ಪಡೆಯಲು ಅರ್ಜಿ ಸಲ್ಲಿಸುವ ಕಾರ್ಮಿಕರಿಂದ ಕಮಿಷನ್ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕಾನೂನು ಸೇವಾ ಪ್ರಾಧಿಕಾರ ನೀಡಿರುವ ವರದಿ ಆಧರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಗೃಹ ಕಾರ್ಮಿಕರಿಗೆ ಕೋವಿಡ್ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಹಾಗೆಯೇ, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಹಲವಾರು ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಪೂರೈಸಲು ಫಲಾನುಭವಿ ಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಷರತ್ತುಗಳನ್ನು ಮಾರ್ಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಕರಣ ಹಿನ್ನೆಲೆ:

ಹಿಂದಿನ ವಿಚಾರಣೆ ವೇಳೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಸರ್ಕಾರ ಕೋವಿಡ್ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಕಾರ್ಮಿಕರಿಗೆ ತಲಾ 2000 ನೀಡಲು ಮುಂದಾಗಿದೆ. ಈ ಹಣ ಪಡೆದುಕೊಳ್ಳಲು ಕಾರ್ಮಿಕರು ಸೇವಾ ಸಿಂಧು ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ತೆರಳಿದಾಗ ಅರ್ಜಿ ಪ್ರೊಸೆಸ್ ಫೀ, ಕಮಿಷನ್ ಎಂದು ತಲಾ 150 ರಿಂದ 200 ರೂಪಾಯಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ ಪ್ರಾಧಿಕಾರಗಳಿಗೂ ಈ ಮಾಹಿತಿ ಖಚಿತವಾಗಿದೆ.

ಆದ್ದರಿಂದ ಕಾರ್ಮಿಕರು ನೆರವು ಹಣ ಪಡೆದುಕೊಳ್ಳಲು ಷರತ್ತು ಹಾಗೂ ನಿಯಮಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ತಿಳಿಸಿತ್ತು. ಕಾರ್ಮಿಕರು ಹಣ ಪಡೆದುಕೊಳ್ಳಲು ಕಮಿಷನ್ ನೀಡಬೇಕಾದ ವಿಚಾರವಾಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದ ಸಿಜೆ ನೇತೃತ್ವದ ವಿಭಾಗೀಯ ಪೀಠ, 2 ಸಾವಿರ ರೂಪಾಯಿಯಷ್ಟು ಸಣ್ಣ ಪರಿಹಾರದ ಹಣ ಪಡೆದುಕೊಳ್ಳಲೂ ಕಮಿಷನ್ ಕೊಡಬೇಕಾಗಿ ಬಂದಿರುವುದು ನಿಜಕ್ಕೂ ಶೋಚನೀಯ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಅರ್ಹ ಫಲಾನುಭವಿಗಳಿಗೆ ಯಾವುದೇ ಸಮಸ್ಯೆಯಾಗದೆ ಪರಿಹಾರ ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತ್ತು.

ಇದನ್ನೂ ಓದಿ:ಕಡ್ಡಾಯ ಗ್ರಾಮೀಣ ಸೇವೆ: ಹೈಕೋರ್ಟ್​ನಿಂದ ವೈದ್ಯರಿಗೆ ಸಿಕ್ತು ತಾತ್ಕಾಲಿಕ ರಿಲೀಫ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.