ಬೆಂಗಳೂರು: ಬೀದಿ ನಾಟಕದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದ ಕಾರಣ ಡೇಟ್ಸ್ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡಿರುವೆ ಎಂದು ಸೀಸನ್ 1 ರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿ ಮುತ್ತುರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಮುತ್ತುರಾಜ್ ರಾಜಲಕ್ಷ್ಮೀ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ರಿಲೀಸ್ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುವ ವೇಳೆ ತಮಗೆ ಸಿಕ್ಕ ಅವಕಾಶಗಳನ್ನು ಕಳೆದುಕೊಂಡಿರುವ ಬಗ್ಗೆ ಹೇಳಿಕೊಂಡರು. ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ನಂತರ ನನಗೆ ಒಂದು ಒಳ್ಳೆ ಅವಕಾಶ ಸಿಕ್ಕಿತು ಎಂದರು. ನಾನು ಹೆಚ್ಚು ಬೀದಿ ನಾಟಕದಲ್ಲಿ ನಟಿಸುವ ಕಾರಣ ನನ್ನ ದಿನಾಂಕ ಪ್ರಾಬ್ಲಂ ಆಗಿ ಕೆಜಿಎಫ್ ಹಾಗೂ ದರ್ಶನ್ ಅವರ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಿರುವೆ ಎಂದು ಮುತ್ತುರಾಜ್ ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಸಾಕಷ್ಟು ದೊಡ್ಡ ಚಿತ್ರಗಳಲ್ಲಿ ನಟಿಸುವ ಅವಕಾಶ ನನ್ನ ಕೈ ತಪ್ಪಿ ಹೋದವು ಎಂದು ಮುತ್ತುರಾಜ್ ಬೇಸರ ವ್ಯಕ್ತಪಡಿಸಿದರು.