ETV Bharat / state

ಸಹಪಾಠಿಯ ಜನ್ಮ ದಿನಾಂಕ ಹೇಳದ ಸ್ನೇಹಿತನ ಮೇಲೆ ಹಲ್ಲೆ : ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮಾರಾಮಾರಿ

ಸಹಪಾಠಿಯ ಜನ್ಮದಿನಾಂಕವನ್ನು ಹೇಳದಿದಕ್ಕೆ ವಿದ್ಯಾರ್ಥಿನಿ ಮತ್ತು ಆಕೆಯ ಸಹಚರರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮಾರಾಮಾರಿ
ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮಾರಾಮಾರಿ
author img

By

Published : Aug 4, 2023, 11:39 AM IST

ಬೆಂಗಳೂರು: ಸಹಪಾಠಿಯ ಜನ್ಮದಿನಾಂಕವನ್ನ ಹೇಳಲು ನಿರಾಕರಿಸಿದ ಎಂಬ ಕಾರಣಕ್ಕೆ ಗುಂಪು‌ಕಟ್ಟಿಕೊಂಡು ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿರುವ ಘಟನೆ ಜೆ.ಪಿ.ನಗರ ಮೂರನೇ ಹಂತದ ಖಾಸಗಿ ಕಾಲೇಜು ಬಳಿ ನಡೆದಿದೆ. ದ್ವಿತೀಯ ಪಿಯು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಆತನ ಕಿರಿಯ ವಿದ್ಯಾರ್ಥಿ‌ನಿ, ಆಕೆಯ ಸಹೋದರ ಮತ್ತು ಆತನ ಸ್ನೇಹಿತರು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರ ವಿದ್ಯಾರ್ಥಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಅದೇ ಕಾಲೇಜಿಗೆ ಪ್ರಥಮ ಪಿಯುಸಿಗೆ ದೂರುದಾರನ ಸ್ನೇಹಿತ ಸಹ ಪ್ರವೇಶ ಪಡೆದಿದ್ದ. ಜುಲೈ 22ನೇ ತಾರೀಖು ಕಾಲೇಜಿನಲ್ಲಿ ನಡೆದ ಹೊಸ ವಿದ್ಯಾರ್ಥಿಗಳ ಆಹ್ವಾನ ಸಮಾರಂಭದಲ್ಲಿ ಆರೋಪಿ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ಜುಲೈ 24ರಂದು ದೂರುದಾರ ವಿದ್ಯಾರ್ಥಿಯನ್ನ ಕರೆದೊಯ್ದಿದ್ದ. ಈ ವೇಳೆ, ಆರೋಪಿ ವಿದ್ಯಾರ್ಥಿನಿ ದೂರುದಾರನ ಸ್ನೇಹಿತನ ಜನ್ಮ ದಿನಾಂಕದ ಬಗ್ಗೆ ಕೇಳಿದ್ದರು. ಆದರೆ 'ತನಗೆ ಗೊತ್ತಿಲ್ಲ' ಎಂದು ದೂರುದಾರ ವಿದ್ಯಾರ್ಥಿ ಆಕೆಗೆ ತಿಳಿಸಿದ್ದ. ಈ ವೇಳೆ, 'ನಿನ್ನ ಸ್ನೇಹಿತನ ಜನ್ಮ ದಿನಾಂಕ ಹೇಳಲಿಲ್ವಲ್ಲಾ, ನಾನು ಯಾರು ಅಂತಾ ತೋರಿಸ್ತೀನಿ' ಅಂತಾ ಆರೋಪಿ ವಿದ್ಯಾರ್ಥಿನಿ ಬೆದರಿಸಿದ್ದಳು. ಮಾರನೇ ದಿನ ತನ್ನ ಸಹೋದರ ಸೇರಿದಂತೆ ಐವರನ್ನ ಕಾಲೇಜು ಬಳಿ ಕರೆಸಿ ಹಿರಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿಸಿದ್ದಾಳೆ. ಬಳಿಕ ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿ ತೆರಳಿದ್ದಾರೆ‌ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ದೂರಿದ್ದಾನೆ.

ಸದ್ಯ ಘಟನೆ ಸಂಬಂಧ ಗಾಯಾಳು ವಿದ್ಯಾರ್ಥಿ ನೀಡಿರುವ ದೂರಿನನ್ವಯ ಜೆ.ಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ : ಇತ್ತೀಚೆಗಷ್ಟೇ ಬೆಂಗಳೂರಲ್ಲಿ ಯುವತಿಗಾಗಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿತ್ತು. ಜೂನಿಯರ್ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರ ಬೀಸಿದ್ದ ಏಳು ಜನ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದರು. ವಿದ್ಯಾರ್ಥಿ ಸಾಹಸ್ ಗೌಡ ಸೇರಿದಂತೆ 7 ವಿದ್ಯಾರ್ಥಿಗಳನ್ನು ಅರೆಸ್ಟ್​ ಮಾಡಲಾಗಿತ್ತು. ನಾಗರಭಾವಿಯ ಖಾಸಗಿ‌ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ದರ್ಶನ್ ಎಂಬ ವಿದ್ಯಾರ್ಥಿಯ ಮೇಲೆ ಆರೋಪಿಗಳು ಮಾರಕಾಸ್ತ್ರ ಬೀಸಿದ್ದರು.

ಯುವತಿಯ ವಿಚಾರಕ್ಕೆ ಗಲಾಟೆ : ನಾಗರಭಾವಿಯ ಖಾಸಗಿ‌ ಕಾಲೇಜಿನಲ್ಲಿ ದೂರುದಾರ ದರ್ಶನ್ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಇದೇ ಕಾಲೇಜಿನಲ್ಲಿ ಆರೋಪಿ ಸಾಹಸ್ ಗೌಡ ಮತ್ತು ಆತನ ಸಹಚರರು ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ವೇಳೆ, ದರ್ಶನ್​ ಎಂಬುವವರಿಗೆ ಯುವತಿಯೊಬ್ಬಳ ಪರಿಚಯವಾಗಿತ್ತು. ಈ ವಿಚಾರವಾಗಿ ದರ್ಶನ್ ಸ್ನೇಹಿತರು ಮತ್ತು ಸಾಹಸ್ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದರು. ಆಗ ದರ್ಶನ್ ಮೇಲೆ ಸಾಹಸ್ ಹಲ್ಲೆಗೆ ಮುಂದಾದಾಗ ದರ್ಶನ್ ಅಲ್ಲಿಂದ ಎಸ್ಕೇಪ್ ಆಗಿದ್ದ. ನಂತರ ದರ್ಶನ್​ ಅನ್ನು ಹೊಡೆಯುತ್ತೇನೆ ಎಂದು ಸಾಹಸ್​ ತನ್ನ ಸ್ನೇಹಿತರ ಬಳಿ‌ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದರು. ಈ ಕುರಿತು ಅನ್ನಪೂರ್ಣೇಶ್ವರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Mangalore crime: ಚರಸ್ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.