ಬೆಂಗಳೂರು: ಎರಡನೇ ಹಂತದ ಕೋವಿಡ್ ವ್ಯಾಕ್ಸಿನೇಷನ್ ಮುಂದುವರೆದಿದ್ದು, ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ಲಸಿಕೆ ಪಡೆಯಲಿದ್ದಾರೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ಹಾಕುವ ಎರಡನೇ ಹಂತದ ಕೋವಿಡ್ ವ್ಯಾಕ್ಸಿನೇಷನ್ಗೆ ಚಾಲನೆ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ವಜುಭಾಯಿ ವಾಲಾ ಸೇರಿದಂತೆ ಹಿರಿಯ ರಾಜಕೀಯ ನಾಯಕರುಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಸಿಕೆ ಪಡೆಯಲಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ಸಿಎಂ ಕೊರೊನಾ ಲಸಿಕೆ ಹಾಕಿಸಿಕೊಳ್ಳಲಿದ್ದು, 28 ದಿನಕ್ಕೆ ಎರಡನೇ ಡೋಸೇಜ್ ಪಡೆದುಕೊಳ್ಳಲಿದ್ದಾರೆ.
ಓದಿ: ಬಿಜೆಪಿ ದೂರ ಇಡೋಕೆ ಯತ್ನಿಸುತ್ತಿದ್ದೇವೆ, ಜೆಡಿಎಸ್ ಟಾರ್ಗೆಟ್ ಮಾಡುತ್ತಿಲ್ಲ: ಡಿಕೆಶಿ
ಈಗಾಗಲೇ ಕೊರೊನಾ ಸೋಂಕಿಗೆ ಸಿಲುಕಿದ್ದ ಸಿಎಂ ಯಡಿಯೂರಪ್ಪನವರು ಹಳೆ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.