ಬೆಂಗಳೂರು: ನೀರಿಗಿಳಿದು ಜಲಸಮಾಧಿಯಾದ ಏಳು ಜನರ ಕುಟುಂಬಕ್ಕೆ ಮುಖ್ಯಮಂತ್ರಿಗಳ ತುರ್ತು ಪರಿಹಾರ ನಿಧಿಯಿಂದ ಪರಿಹಾರದ ಹಣ ಬಿಡುಗಡೆಗೊಳಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಜನರು ನೀರಿಗೆ ಬಿದ್ದು ಮೃತಪಟ್ಡಿದ್ದಾರೆ. ಅದರಲ್ಲಿ
ನಾಗಮಂಗಲ ತಾಲೂಕಿನ ಬೀರನಹಳ್ಳಿಯ ಗೀತಾ, ಸವಿತಾ, ಸೌಮ್ಯ ಅವರ ಕುಟುಂಬಕ್ಕೆ ತಲಾ ಐದು ಲಕ್ಷದಂತೆ 15 ಲಕ್ಷ ರೂ.ಗಳನ್ನು ಕೊಟ್ಟಿದ್ದಾರೆ.
ಇನ್ನು ನಾಗಮಂಗಲ ತಾಲೂಕಿನ ಚೋಳಸಂದ್ರ ಗ್ರಾಮದ ರಶ್ಮಿ, ಇಂಚರಾ, ಕೆ.ಆರ್.ಪೇಟೆ ತಾಲೂಕಿನ ಹುಳಿಗಂಗನ ಹಳ್ಳಿಯ ಅಭಿಷೇಕ್ ಮತ್ತು ಕೆ.ಆರ್.ಪೇಟೆ ತಾಲೂಕಿನ ಆದಿಹಳ್ಳಿ ಗ್ರಾಮದ ಕುಮಾರ್ ಕುಟುಂಬಕ್ಕೆ ತಲಾ 2 ಲಕ್ಷದಂತೆ 8 ಲಕ್ಷ ಸೇರಿ ಒಟ್ಟು 23 ಲಕ್ಷ ರೂ.ಗಳನ್ನು ಸಿಎಂ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.