ETV Bharat / state

ತುಂಬು ಗರ್ಭಿಣಿ ನಿತ್ಯ 120 ಕಿ.ಮೀ ಪ್ರಯಾಣಿಸಿ ಕರ್ತವ್ಯ... ಈ ಕೊರೊನಾ ವಾರಿಯರ್‌ಗೆ ಸಿಎಂ ಹೀಗಂದರು.. - ಬೆಂಗಳೂರು

ನಿಜಕ್ಕೂ ಇವತ್ತು ತಾಯಿಯಂದಿರ ದಿನ ಸಾರ್ಥಕತೆಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ತಾಯಿ ಆಗ್ತಿರುವ ಗರ್ಭಿಣಿ ನರ್ಸ್‌ವೊಬ್ಬರು ಇದರ ಮಧ್ಯೆಯೂ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿಭಾಯಿಸ್ತಿದ್ದಾರೆ. ಅದಕ್ಕೆ ಸ್ವತಃ ಸಿಎಂ ಸಾಹೇಬರೇ ಭೇಷ್‌ ತಾಯಿ ಅಂತಾ ಶ್ಲಾಘಿಸಿದ್ದಾರೆ..

CM Yediyurappa congratulated to the nurse
ನರ್ಸ್​ ಅಭಿನಂದನೆ ಸಲ್ಲಿಸಿದ ಸಿಎಂ
author img

By

Published : May 10, 2020, 11:53 AM IST

ಬೆಂಗಳೂರು: ಒಂಬತ್ತು ತಿಂಗಳ ಗರ್ಭಿಣಿ ಆಗಿದ್ದರೂ ಪ್ರತಿನಿತ್ಯ ಕರ್ತವ್ಯಕ್ಕೆ ಹಾಜರಾಗುತ್ತಾ ವೈದ್ಯಕೀಯ ಸೇವೆಯಲ್ಲಿ‌ ತೊಡಗಿರುವ ತವರು ಜಿಲ್ಲೆಯ ನರ್ಸ್​ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಜೊತೆಗೆ ಇಂದಿನಿಂದಲೇ ವಿಶ್ರಾಂತಿ ಪಡೆಯಲು‌ ಸೂಚನೆ ನೀಡಿದ್ದಾರೆ.

ನರ್ಸ್​ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಾಹೇಬರು..

9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ‌ನಿರ್ವಹಿಸುತ್ತಿರುವ ರೂಪ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಮಾತನಾಡಿಸಿದರು. ನಿಮ್ಮ ಶ್ರಮ ನೋಡಿ ಆಶ್ಚರ್ಯ ಆಗುತ್ತಿದೆ. ನಮ್ಮ ಜಿಲ್ಲೆಯವರಾಗಿ ಇಷ್ಟೊಂದು ಶ್ರಮ ಹಾಕುತ್ತಿದ್ದೀರಿ ಇಂದಿನಿಂದಲೇ ವಿಶ್ರಾಂತಿ ಪಡೆಯಿರಿ ಎಂದು ಸೂಚನೆ ನೀಡಿದರು.

ನಾವು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ ಸರ್.. ಎನ್ನುವ ವಿನಮ್ರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಮುಂದೆ ಏನು ಮಾಡಬೇಕು ಮಾಡೋಣ ಈಗ ವಿಶ್ರಾಂತಿ ಪಡೆಯಿರಿ ಎಂದರು. ಆಗ ನರ್ಸ್‌ ರೂಪ ಅವರು ಸಿಎಂಗೆ ಧನ್ಯವಾದಗಳು ಸರ್‌ ಅಂದರು.

ಶಿವಮೊಗ್ಗದ ಗಾಜನೂರು ಗ್ರಾಮದಿಂದ 60 ಕಿ.ಮೀ ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್​ನಲ್ಲೇ ಪ್ರಯಾಣಿಸಿ ರೂಪ ಅವರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ತುಂಬು ಗರ್ಭಿಣಿಯಾಗಿದ್ರೂ ಪ್ರತಿದಿನ ಸುಮಾರು 120 ಕಿ.ಮೀ ಪ್ರಯಾಣ ಮಾಡುವ ಇವರು ಕೊರೊನಾ ವಾರಿಯರ್ಸ್ ಏನು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.