ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಕ್ರಾ ಅಂತಾರಾಷ್ಟ್ರೀಯ ಆಸ್ಪತ್ರೆಯ ವತಿಯಿಂದ ಹೊರ ತಂದಿರುವ ರೊಬೋಟಿಕ್ ಬದಲಿ ಮೊಣಕಾಲು ಶಸ್ತ್ರಚಿಕಿತ್ಸಾ ಯಂತ್ರವನ್ನು ಬಿಡುಗಡೆ ಮಾಡಿದರು.
ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದ ಸಕ್ರಾ ಅಂತಾರಾಷ್ಟ್ರೀಯ ಆಸ್ಪತ್ರೆ ಸಿಇಒ ಲವಕೇಶ್, ಹಿರಿಯ ಸಮಾಲೋಚಕ ಡಾ. ಚಂದ್ರಶೇಖರ್, ಕ್ಯುವಿಸ್ ಜಾಯಿಂಟ್ ಸಂಸ್ಥೆಯ ಜೀನ್ ಚೊ ಯಡಿಯೂರಪ್ಪ ಅವರನ್ನು ಭೇಟಿಯಾದರು. ಈ ವೇಳೆ ಸಕ್ರಾ ಆಸ್ಪತ್ರೆ ಹೊರತಂದಿರುವ ರೊಬೋಟಿಕ್ ಯಂತ್ರದ ಕುರಿತು ವಿವರಣೆ ನೀಡಿದರು.
ಓದಿ: ರಾಜ್ಯದಲ್ಲಿಂದು 1,203 ಕೊರೊನಾ ಕೇಸ್ ಪತ್ತೆ: 11 ಮಂದಿ ಸಾವು
ಈ ಯಂತ್ರದಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಗತಿ ಹೆಚ್ಚಾಗುವ ಕುರಿತು ಸಿಎಂಗೆ ಭರವಸೆ ನೀಡಿದರು. ಆಸ್ಪತ್ರೆಯ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಸಿಎಂ, ರೊಬೋಟಿಕ್ ಬದಲಿ ಮೊಣಕಾಲು ಶಸ್ತ್ರಚಿಕಿತ್ಸಾ ಯಂತ್ರ ಬಿಡುಗಡೆ ಮಾಡಿದರು.