ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಕವಿ ಕೆ.ಎಸ್. ನಿಸಾರ್ ಅಹ್ಮದ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆ.ಎಸ್.ನಿಸಾರ್ ಅಹ್ಮದ್ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಸಂತಾಪ ಸೂಚಿಸಿದ್ದಾರೆ. ಮನಸು ಗಾಂಧಿಬಜಾರು ಕವನ ಸಂಕಲನ, ಬೆಣ್ಣೆ ಕದ್ದ ನಮ್ಮ ಕೃಷ್ಣದಂತಹ ಕವನ ನಮಗೆ ಕೊಟ್ಟು, ಜೋಗದ ಸಿರಿ ಬೆಳಕಿನ ಮೂಲಕ ನಿತ್ಯೋತ್ಸವವನ್ನು ವರ್ಣಿಸಿದ ಶ್ರೇಷ್ಠ ಕವಿ ಕೆ.ಎಸ್ ನಿಸಾರ್ ಅಹಮದ್ ಅವರ ನಿಧನದ ಸುದ್ದಿ ನನಗೆ ಅತ್ಯಂತ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ,ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.
ಮರೆಯಾದ ನಿತ್ಯೋತ್ಸವ ಕವಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಕಂಬನಿ ಮಿಡಿದಿದ್ದಾರೆ."ಕುರಿಗಳು ಸಾರ್ ||ಸಾಗಿದ್ದೇ ಗುರಿಗಳುಮಂದೆಯಲ್ಲಿ ಒಂದಾಗಿ ಸ್ವಂತತೆಯೇ ಬಂದಾಗಿಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿದನಿ ಕುಗ್ಗಿಸಿ ತಲೆ ತಗ್ಗಿಸಿ ಅಂಡಲೆಯುವ ನಾವು ನೀವು"ಜೋಗದ ಸಿರಿ ಬೆಳಕಿನಲ್ಲಿ" ಎಂದು ನಿತ್ಯೋತ್ಸವನ್ನು ಸಾಹಿತ್ಯದ ಮೂಲಕ ಹರಸಿ ನಾಡಿನ ಮನ-ಮನೆಗಳಲ್ಲಿ ನೆಲೆಸಿದ್ದ ನಿತ್ಯೋತ್ಸವ ಕವಿ ಡಾ.ನಿಸಾರ್ ಅಹ್ಮದ್ ಅವರ ನಿಧನ ಕನ್ನಡ ಸಾರಸ್ವತ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ನಿಸರ್ಗದ ರಮಣೀಯತೆಯನ್ನು ಸ್ವಚ್ಛ ಕನ್ನಡದಲ್ಲಿ ವರ್ಣಿಸುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಉಣಬಡಿಸಿದ್ದ ಸಾಹಿತ್ಯ ಶ್ರೇಷ್ಠರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೂ,ಸ್ನೇಹಿತರಿಗೂ, ಸಾಹಿತ್ಯಾಸಕ್ತರಿಗೂ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶ ಕಳಿಸಿದ್ದಾರೆ.