ETV Bharat / state

ಕುಮಾರಸ್ವಾಮಿಯ ಮಾಸ್ಟರ್​ ಪ್ಲಾನ್​: ವಿದೇಶದಲ್ಲಿದ್ದುಕೊಂಡೇ ಅತೃಪ್ತರ ನಿಯಂತ್ರಣ

ಅತೃಪ್ತ ಶಾಸಕರು ಹಾಗೂ ರಾಜೀನಾಮೆ ನೀಡಿದ ಶಾಸಕರ ಚಲನವಲನವನ್ನು ಸರಿಪಡಿಸಲು ಸಿಎಂ ಕುಮಾರಸ್ವಾಮಿ ಗುಪ್ತಚರ ಇಲಾಖೆಯನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆನಂದ ರಾವ್ ವೃತ್ತ ಸಮೀಪದ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿಯನ್ನು ಕೂಡ ಹೆಚ್​ಡಿಕೆಗೆ ಗುಪ್ತಚರ ಇಲಾಖೆಯೇ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕುಮಾರಸ್ವಾಮಿ, ಸಿಎಂ
author img

By

Published : Jul 4, 2019, 12:17 PM IST

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾದ ಗೊಂದಲವನ್ನು ವಿದೇಶದಲ್ಲಿಯೇ ಕುಳಿತು ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಿಭಾಯಿಸುತ್ತಿದ್ದಾರೆ ಎಂಬ ಮಹತ್ವದ ಮಾಹಿತಿ ದೊರಕಿದೆ.

10 ದಿನದ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿರುವ ಕುಮಾರಸ್ವಾಮಿ, ಅಲ್ಲಿ ಕಾಲಭೈರವೇಶ್ವರ ದೇವಸ್ಥಾನಕ್ಕೆ ಅಡಿಗಲ್ಲು ಹಾಕಿದ್ದು, ಜತೆಗೆ ಮೂರು ದಿನಗಳ ವಿಶ್ವ ಒಕ್ಕಲಿಗರ ಸಮಾವೇಶದಲ್ಲಿ ಕೂಡ ಭಾಗಿಯಾಗಿದ್ದಾರೆ.

ಇನ್ನೂ ನಾಲ್ಕೈದು ದಿನ ಅವರು ಅಲ್ಲಿಯೇ ಇರಲಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಮೇಲೆ ವಿಶೇಷ ನಿಗಾ ವಹಿಸಲಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆತಂಕವನ್ನು ಅವರು ಅಲ್ಲಿಂದಲೇ ಗಮನಿಸಿ ಸಮಸ್ಯೆಗೆ ಪರಿಹಾರ ಹುಡುಕುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

cm-using-intelligence-department
ಕುಮಾರಸ್ವಾಮಿಯ ಮಾಸ್ಟರ್​ ಪ್ಲಾನ್​ : ವಿದೇಶದಲ್ಲಿದ್ದೇ ಅತೃಪ್ತರ ಮೇಲೆ ನಿಗಾ

ಗುಪ್ತಚರ ಇಲಾಖೆ ಬಳಕೆ

ಅತೃಪ್ತ ಶಾಸಕರು ಹಾಗೂ ರಾಜೀನಾಮೆ ನೀಡಿದ ಶಾಸಕರ ಚಲನವಲನವನ್ನು ಸರಿಪಡಿಸಲು ಸಿಎಂ ಕುಮಾರಸ್ವಾಮಿ ಗುಪ್ತಚರ ಇಲಾಖೆಯನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಎರಡು ದಿನದ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆನಂದರಾವ್ ವೃತ್ತ ಸಮೀಪದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿಯನ್ನು ಕೂಡ ಎಚ್ಡಿಕೆಗೆ ಗುಪ್ತಚರ ಇಲಾಖೆಯೇ ನೀಡಿತ್ತು. ಅದನ್ನು ಮಾಧ್ಯಮಗಳಿಗೆ ತಲುಪಿಸುವ ವ್ಯವಸ್ಥಿತ ಕಾರ್ಯವನ್ನು ಅವರು ಮಾಡಿದ್ದರು. ಈ ಮೂಲಕ ಅತೃಪ್ತ ಶಾಸಕರನ್ನು ಸೆಳೆಯುವ ಹಾಗೂ ಅವರೊಂದಿಗೆ ಸಭೆ ನಡೆಸುವ ಅವಕಾಶವನ್ನು ತಪ್ಪಿಸಿದ್ದರು.

ಗುಪ್ತಚರ ಇಲಾಖೆ ಮೊದಲು ಸಿಎಂಗೆ ನೀಡಿದ ಮಹತ್ವದ ಮಾಹಿತಿ ಏನೆಂದರೆ, ಬಿಜೆಪಿ ಆಪರೇಷನ್ ಕಮಲವನ್ನು ಆರಂಭಿಸಿದ್ದು, ನಾಲ್ವರು ಜೆಡಿಎಸ್ ಹಾಗೂ ಏಳು ಮಂದಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದೆ. ಒಬ್ಬರ ಹಿಂದೆ ಒಬ್ಬರು ರಾಜೀನಾಮೆ ನೀಡಲಿದ್ದಾರೆ ಎಂದು ವಿವರಿಸಿತ್ತು ಎನ್ನಲಾಗ್ತಿದೆ. ಇದರಿಂದ ಕೂಡಲೇ ಎಚ್ಚೆತ್ತ ಸಿಎಂ ಮೊದಲು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ಪಡೆದರು. ನಂತರ ಕಾಂಗ್ರೆಸ್ ಪಕ್ಷದಲ್ಲಿ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ತಮ್ಮ ಆಪ್ತರನ್ನು ಸಂಪರ್ಕಿಸಿ ಅಧಿಕಾರ ನೀಡುವ ಭರವಸೆ ಕೊಟ್ಟಿದ್ದಾರೆ. ಜೆಡಿಎಸ್ ಹಿರಿಯ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಕೂಡ ಪಕ್ಷ ಬಿಡುವವರ ಪಟ್ಟಿಯಲ್ಲಿದ್ದರು. ಅದರಿಂದ ಅವರಿಗೆ ಇಂದು ರಾಜ್ಯಾಧ್ಯಕ್ಷ ಪಟ್ಟ ಕೊಟ್ಟು ಸಮಾಧಾನಪಡಿಸುವ ಕಾರ್ಯ ಆಗುತ್ತಿದೆ. ಉಳಿದ ಮೂವರು ಶಾಸಕರಲ್ಲಿ ಹೆಚ್. ವಿಶ್ವನಾಥ್ ಅವರ ಹೆಸರು ಕೂಡ ಇದ್ದು, ಎಲ್ಲರನ್ನೂ ಮಾತನಾಡಿ ಮನವೊಲಿಸುವಲ್ಲಿ ಸಫಲವಾಗಿದ್ದು, ಇದೀಗ ಕಾಂಗ್ರೆಸ್ ಶಾಸಕರತ್ತಲೂ ಸಿಎಂ ಗಮನ ಹರಿಸಿದ್ದಾರೆ ಎನ್ನಲಾಗ್ತಿದೆ.

ಒಂದು ಹಂತದಲ್ಲಿ ಸಿಎಂಗೆ ಯಶಸ್ಸು

ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯವರ ಮೇಲೆ ವಿಶೇಷ ಗಮನ ಹರಿಸಿದ್ದು, ಅವರು ಯಾರನ್ನು ಭೇಟಿಯಾಗುತ್ತಾರೆ?, ಯಾರ ಜತೆ ಸಮಾಲೋಚಿಸುತ್ತಾರೆ ಎನ್ನುವ ಬಗ್ಗೆಯೂ ವಿದೇಶದಿಂದಲೇ ನಿಯಂತ್ರಣ ಸಾಧಿಸಿದ್ದಾರೆ. ವಿದೇಶದಲ್ಲಿದ್ದುಕೊಂಡೇ ಇದೆಲ್ಲ ಬೆಳವಣಿಗೆಯನ್ನು ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದಾರೆ. ಅತೃಪ್ತರು ಚಾಪೆ ಕೆಳಗೆ ತೂರಿದರೆ, ಸಿಎಂ ರಂಗೋಲಿ ಕೆಳಗೆ ತೂರಿರುವುದು ಇಲ್ಲಿ ಕಾಣಸಿಗುತ್ತಿದೆ.

ಒಟ್ಟಾರೆ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಹರಸಾಹಸವನ್ನು ಕುಮಾರಸ್ವಾಮಿ ನಡೆಸಿದ್ದಾರೆ. ಇದಕ್ಕೆ ಅತೃಪ್ತರು ಕೂಡ ಪ್ರತಿತಂತ್ರ ಹೂಡಿದ್ದು, ತಮ್ಮ ಪ್ರತಿಷ್ಠೆಯನ್ನು ಕೂಡ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಹೋರಾಟದಲ್ಲಿ ಸದ್ಯ ಸಿಎಂಗೆ ಗೆಲುವಾಗಿದ್ದು, ಎದುರಾಳಿಗಳು ಯಾವ ಹೊಸ ಬಾಣ ಬಿಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Intro:newsBody:ಗುಪ್ತಚರ ಇಲಾಖೆ ಬಳಸಿ ವಿದೇಶದಲ್ಲೇ ಕುಳಿತು ಅತೃಪ್ತರ ನಡೆ ನಿಯಂತ್ರಿಸುತ್ತಿರುವ ಎಚ್ಡಿಕೆ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾದ ಗೊಂದಲವನ್ನು ವಿದೇಶದಲ್ಲಿಯೇ ಕುಳಿತು ಸಿಎಂ ಎಚ್.ಡಿ. ಕುಮಾರಸ್ವಾಮಿ ನಿಭಾಯಿಸುತ್ತಿದ್ದಾರೆ ಎಂಬ ಮಹತ್ವದ ಮಾಹಿತಿ ದೊರಕಿದೆ.
10 ದಿನದ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ತೆರಳಿರುವ ಕುಮಾರಸ್ವಾಮಿ ಅಲ್ಲಿ ಕಾಲಭೈರವೇಶ್ವರ ದೇವಸ್ಥಾನಕ್ಕೆ ಅಡಿಗಲ್ಲು ಹಾಕಿದ್ದು, ಜತೆಗೆ ಮೂರು ದಿನಗಳ ವಿಶ್ವ ಒಕ್ಕಲಿಗರ ಸಮಾವೇಶದಲ್ಲಿ ಕೂಡ ಭಾಗಿಯಾಗಿದ್ದಾರೆ. ಇನ್ನೂ ನಾಲ್ಕೈದು ದಿನ ಅವರು ಅಲ್ಲಿಯೇ ಇರಲಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಮೇಲೆ ವಿಶೇಷ ನಿಗಾ ಹೊಂದಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆತಂಕವನ್ನು ಅವರು ಅಲ್ಲಿಂದಲೇ ಗಮನಿಸಿ ಸಮಸ್ಯೆಗೆ ಪರಿಹಾರ ಹುಡುಕುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗುಪ್ತಚರ ಇಲಾಖೆ ಬಳಕೆ
ಸಿಎಂ ಎಚ್ಡಿಕೆ ರಾಜ್ಯದ ರಾಜಕೀಯ ಅಸ್ಥಿರತೆಯನ್ನು ಸರಿಪಡಿಸಲು ಗುಪ್ತಚರ ಇಲಾಖೆಯನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದ್ದು, ಅತೃಪ್ತ ಶಾಸಕರು, ರಾಜೀನಾಮೆ ನೀಡಿದ ಶಾಸಕರ ಚಲನವಲನವನ್ನು ಪರಿಶೀಲಿಸಲು ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು, ಇಲಾಖೆಯನ್ನು ಬಳಸಿಕೊಂಡಿದ್ದಾರೆ. ಎರಡು ದಿನ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆನಂದ್ರಾವ್ ವೃತ್ತ ಸಮೀಪದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿಯನ್ನು ಕೂಡ ಎಚ್ಡಿಕೆಗೆ ಗುಪ್ತಚರ ಇಲಾಖೆಯೇ ನೀಡಿತ್ತು. ಅದನ್ನು ಮಾಧ್ಯಮಗಳಿಗೆ ತಲುಪಿಸುವ ವ್ಯವಸ್ಥಿತ ಕಾರ್ಯವನ್ನು ಅವರು ಮಾಡಿದ್ದರು. ಈ ಮೂಲಕ ಅತೃಪ್ತ ಶಾಸಕರನ್ನು ಸೆಳೆಯುವ ಹಾಗೂ ಅವರೊಂದಿಗೆ ಸಭೆ ನಡೆಸುವ ಅವಕಾಶವನ್ನು ತಪ್ಪಿಸಿದ್ದರು.
ಗುಪ್ತಚರ ಇಲಾಖೆ ಮೊದಲು ಸಿಎಂಗೆ ನೀಡಿದ ಮಹತ್ವದ ಮಾಹಿತಿ ಏನೆಂದರೆ, ಬಿಜೆಪಿ ಆಪರೇಷನ್ ಕಮಲವನ್ನು ಆರಂಭಿಸಿದ್ದು, ನಾಲ್ವರು ಜೆಡಿಎಸ್ ಹಾಗೂ ಏಳು ಮಂದಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದೆ. ಒಬ್ಬರ ಹಿಂದೆ ಒಬ್ಬರು ರಾಜೀನಾಮೆ ನೀಡಲಿದ್ದಾರೆ ಎಂದು ವಿವರಿಸಿತ್ತು. ಇದರಿಂದ ಕೂಡಲೇ ಎಚ್ಚೆತ್ತ ಸಿಎಂ ಮೊದಲು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ಪಡೆದರು ನಂತರ ಕಾಂಗ್ರೆಸ್ ಪಕ್ಷದಲ್ಲಿ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಆಪ್ತರನ್ನು ಸಂಪರ್ಕಿಸಿ ಅಧಿಕಾರ ನೀಡುವ ಭರವಸೆ ಕೊಟ್ಟಿದ್ದಾರೆ. ಜೆಡಿಎಸ್ ಹಿರಿಯ ಶಾಸಕ ಎಚ್.ಕೆ. ಕುಮಾರಸ್ವಾಮಿ ಕೂಡ ಪಕ್ಷ ಬಿಡುವವರ ಪಟ್ಟಿಯಲ್ಲಿದ್ದರು. ಅದರಿಂದ ಅವರಿಗೆ ಇಂದು ರಾಜ್ಯಾಧ್ಯಕ್ಷ ಪಟ್ಟ ಕೊಟ್ಟು ಸಮಾಧಾನಪಡಿಸುವ ಕಾರ್ಯ ಆಗುತ್ತಿದೆ. ಉಳಿದ ಮೂವರು ಶಾಸಕರಲ್ಲಿ ಎಚ್.ವಿಶ್ವನಾಥ್ ಅವರ ಹೆಸರು ಕೂಡ ಇದ್ದು, ಎಲ್ಲರನ್ನೂ ಮಾತನಾಡಿ ಮನವೊಲಿಸುವಲ್ಲಿ ಸಫಲವಾಗಿದ್ದು, ಇದೀಗ ಕಾಂಗ್ರೆಸ್ ಶಾಸಕರತ್ತಲೂ ಗಮನ ಹರಿಸಿದ್ದಾರೆ.
ಒಂದು ಹಂತದಲ್ಲಿ ಸಿಎಂಗೆ ಯಶಸ್ಸು
ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯವರ ಮೇಲೆ ವಿಶೇಷ ಗಮನ ಹರಿಸಿದ್ದು, ಅವರು ಯಾರನ್ನು ಭೇಟಿಯಾಗುತ್ತಾರೆ, ಯಾರ ಜತೆ ಸಮಾಲೋಚಿಸುತ್ತಾರೆ ಎನ್ನುವ ಬಗ್ಗೆ ವಿದೇಶದಿಂದಲೇ ನಿಯಂತ್ರಣ ಸಾಧಿಸಿದ್ದಾರೆ. ಅಲ್ಲಿ ತೆರಳಿದ ನಂತರ ಆರಂಭವಾದ ಬೆಳವಣಿಗೆಯನ್ನು ಅಲ್ಲಿಂದ ವಾಪಾಸಾಗದೇ, ಅಲ್ಲಿದ್ದುಕೊಂಡೇ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದಾರೆ. ಅತೃಪ್ತರು ಚಾಪೆ ಕೆಳಗೆ ತೂರಿದರೆ, ಸಿಎಂ ರಂಗೋಲಿ ಕೆಳಗೆ ತೂರಿರುವುದು ಇಲ್ಲಿ ಕಾಣಸಿಗುತ್ತಿದೆ. ಇದರಿಂದಲೇ ಕಾಂಗ್ರೆಸ್ ನಾಯಕರು ಕೂಡ ಸಾಕಷ್ಟು ನಿರಾಳರಾದಂತೆ ಕಂಡುಬರುತ್ತಿದ್ದಾರೆ.
ಒಟ್ಟಾರೆ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಹರಸಾಹಸವನ್ನು ಕುಮಾರಸ್ವಾಮಿ ನಡೆಸಿದ್ದಾರೆ. ಇದಕ್ಕೆ ಅತೃಪ್ತರು ಕೂಡ ಪ್ರತಿತಂತ್ರ ಹೂಡಿದ್ದು, ತಮ್ಮ ಪ್ರತಿಷ್ಠೆಯನ್ನು ಕೂಡ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಹೋರಾಟದಲ್ಲಿ ಸದ್ಯ ಸಿಎಂಗೆ ಗೆಲುವಾಗಿದ್ದು, ಎದುರಾಳಿಗಳು ಯಾವ ಹೊಸ ಬಾಣ ಬಿಡುತ್ತಾರೆ ಎನ್ನುವುದನ್ನು ಕಾದುನೋಡಲಾಗುತ್ತಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.