ETV Bharat / state

ಸ್ವಗ್ರಾಮದತ್ತ ಸಿ.ಎಂ.ಉದಾಸಿ ಪಾರ್ಥಿವ ಶರೀರ: ಸಂಜೆ ಅಂತ್ಯಕ್ರಿಯೆ

author img

By

Published : Jun 9, 2021, 7:10 AM IST

ಮಧ್ಯಾಹ್ನ ಒಂದು ಗಂಟೆಯ ನಂತರ ಹಾನಗಲ್‌ ಪಟ್ಟಣದ ವಿರಕ್ತಮಠದ ಆವರಣದಲ್ಲಿ ಸಿ.ಎಂ ಉದಾಸಿಯವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ.

cm-udasi-funeral-will-assist-at-hunagal
ಸ್ವಗ್ರಾಮದತ್ತ ಸಿ.ಎಂ.ಉದಾಸಿ ಪಾರ್ಥಿವ ಶರೀರ

ಆನೇಕಲ್: ಬಿಜೆಪಿ ಹಿರಿಯ ಶಾಸಕ, ಮಾಜಿ ಸಚಿವ ಸಿ.ಎಂ. ಉದಾಸಿ ನಿನ್ನೆ ನಿಧನ ಹೊಂದಿದ್ದು ಇಂದು ಜಿಲ್ಲೆಯ ಹಾನಗಲ್ ಪಟ್ಟಣದ ವಿರಕ್ತಮಠದ ರುದ್ರಭೂಮಿಯಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ‌ ನಡೆಯಲಿದೆ.

ಬೆಂಗಳೂರಿನ ಬೊಮ್ಮಸಂದ್ರದ ಮಜುಂದಾರ್ ಷಾ ಆಸ್ಪತ್ರೆಯಿಂದ ಉದಾಸಿ ಪಾರ್ಥಿವ ಶರೀರವನ್ನು ಪೊಲೀಸ್​ ಬಂದೋಬಸ್ತ್​​ನಲ್ಲಿ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಪುತ್ರ ಶಿವಕುಮಾರ್ ಉದಾಸಿ ಸ್ವಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಇಂದು ಸಂಜೆ 4 ಗಂಟೆಗೆ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಹಾನಗಲ್ ಪಟ್ಟಣಕ್ಕೆ ಮೃತದೇಹ ಬರಲಿದ್ದು, ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಗೌಳಿ ಗಲ್ಲಿಯಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಯ ನಂತರ ಪಟ್ಟಣದ ವಿರಕ್ತಮಠದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಂಜೆ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಆಪ್ತ ಬಿ.ಎಸ್​ ಅಕ್ಕಿವಳ್ಳಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.