ಬೆಂಗಳೂರು: ಕೊನೆಗೂ ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜಭವನಕ್ಕೆ ರವಾನೆಯಾಗಿದೆ. ಗೃಹ ಕಚೇರಿ ಕೃಷ್ಣಾದಿಂದ ನೂತನ ಸಚಿವರ ಪಟ್ಟಿಯನ್ನು ಸಿಎಂ ರವಾನಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನೂತನವಾಗಿ ಸಂಪುಟಕ್ಕೆ ಸೇರ್ಪಡೆಯಾದ 17 ಸಚಿವರಿಗೆ ಯಾವ ಖಾತೆ ಅನ್ನೋ ವಿವರವುಳ್ಳ ಪಟ್ಟಿಗೆ ಸಹಿ ಹಾಕಿದ ಸಿಎಂ, ಬಳಿಕ ರಾಜಭವನಕ್ಕೆ ಪಟ್ಟಿ ರವಾನೆ ಮಾಡಿದ್ದಾರೆ. ಸಂಜೆಗೆ ಪಟ್ಟಿ ಕಳಿಸುವ ಯೋಚನೆ ಮಾಡಿದ್ದ ಸಿಎಂ ಮತ್ತಷ್ಟು ಗೊಂದಲ ಆಗುತ್ತದೆ ಎನ್ನುವ ಕಾರಣಕ್ಕೆ ಈಗಲೇ ಪಟ್ಟಿ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗೃಹ ಕಚೇರಿ ಕೃಷ್ಣಾದಿಂದ, ಸಿಎಂ ಧವಳಗಿರಿ ನಿವಾಸಕ್ಕೆ ತೆರಳಿದ ಬೆನ್ನಲ್ಲೇ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಹಿಂಬಾಲಿಸಿದ್ದು, ಸಚಿವ ಸ್ಥಾನದ ಆಕಾಂಕ್ಷಿ ರಾಜುಗೌಡ ಸಿಎಂ ಜೊತೆ ಕಾರಲ್ಲೇ ತೆರಳಿದರು