ETV Bharat / state

ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಸಹಕಾರ, ಅನುದಾನ ನೀಡಲಿದೆ: ಸಿಎಂ ಸಿದ್ದರಾಮಯ್ಯ - etv bharat karnataka

ಕೃಷಿ ಸಂಶೋಧನೆಯಿಂದ ಸಿದ್ಧವಾಗಿರುವ ಎಲ್ಲಾ ತಳಿಗಳು ರೈತರಿಗೆ ತಲುಪಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

cm-siddaramaiah-addresses-desi-conference-in-bengaluru
ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಸಹಕಾರ ಹಾಗೂ ಅಗತ್ಯ ಅನುದಾನ ನೀಡಲಿದೆ: ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Oct 18, 2023, 3:36 PM IST

Updated : Oct 18, 2023, 5:02 PM IST

ದೇಸಿ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ

ಬೆಂಗಳೂರು: ಕೃಷಿ ಕ್ಷೇತ್ರ ಬೆಳವಣಿಗೆಯಾದಾಗ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ಹಾಗೂ ಅಗತ್ಯ ಅನುದಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಹೈದರಾಬಾದ್​ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್) ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ಜಿಕೆವಿಕೆಯಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜನೆ ಮಾಡಿದ್ದ ದೇಸಿ ಸಮ್ಮೇಳನಕ್ಕೆ ಸಿಎಂ ಚಾಲನೆ ನೀಡಿ, ನವೆಂಬರ್ 17 ರಿಂದ 20 ರವರೆಗೆ ನಡೆಯಲಿರುವ ಕೃಷಿ ಮೇಳದ ಲಾಂಛನ ಬಿಡುಗಡೆ ಮಾಡಿದರು. ಬಳಿಕ ವಿವಿಯಿಂದ ಸಿಎಂ ಸಿದ್ದರಾಮಯ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಂತರ ಮಾತನಾಡಿದ ಸಿಎಂ, ಭಾರತ ಕೃಷಿ ಪ್ರಧಾನ ದೇಶ. ಹಳ್ಳಿಗಾಡಿನ ದೇಶ. ಹಳ್ಳಿಗಾಡಿನ ಬಹುತೇಕ ಜನರು ಕೃಷಿ ಮೇಲೆ ಅವಲಂಭಿಸಿದ್ದಾರೆ. ಕೃಷಿ ಮಾಡಿ ದೇಶದ ಜನರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಜನಸಂಖ್ಯೆ ಬೆಳೆಯುತ್ತಿದೆ. ಜಗತ್ತಿನಲ್ಲಿ ನಾವು ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಬಂದಿದ್ದೇವೆ. ಅಭಿವೃದ್ಧಿ, ಜಿಡಿಪಿ, ತಲಾ ಆದಾಯದಲ್ಲಿ ಚೀನಾ ಮುಂದಿದೆ. ಜನಸಂಖ್ಯೆ ಹೆಚ್ಚಾದಂತೆ ಅದಕ್ಕೆ ಪೂಕರವಾಗಿ ಆಹಾರ ಉತ್ಪಾದನೆ ಹೆಚ್ಚಾಗಬೇಕು. ಎಲ್ಲ ಜನರಿಗೆ ಆಹಾರ ನೀಡಬೇಕು. ದೇಶ ಆಹಾರದಲ್ಲಿ ಸ್ವಾವಲಂಬಿಯಾಗಬೇಕು. ಅದಕ್ಕೆ ಕೃಷಿ ವಿವಿ ಪಾತ್ರ ಮುಖ್ಯ ಎಂದರು.

ರಾಜಸ್ಥಾನ ಬಿಟ್ಟರೆ ಕರ್ನಾಟಕ ಹೆಚ್ಚಿನ ಖುಷ್ಕಿ ಜಮೀನು ಹೊಂದಿದೆ. ಮಳೆ ಆಧಾರಿತ ಕೃಷಿ ಮಾಡಬೇಕಿದೆ. ಇದರ ಜತೆ ಐದು ವರ್ಷಕ್ಕೊಮ್ಮೆ ಅತಿವೃಷ್ಟಿ, ಅನಾವೃಷ್ಟಿ ಬರಲಿದೆ. ಇದರ ಮಧ್ಯೆ ಕೃಷಿ ಮಾಡಬೇಕು. ಇದಕ್ಕೆ ಪೂರಕವಾಗಿ ಸಂಶೋಧನೆಗಳು ಹೆಚ್ಚೆಚ್ಚು ನಡೆಯಬೇಕು. ಖುಷ್ಕಿ ಬೇಸಾಯ, ಹೊಸ ತಳಿ, ಹೊಸ ತಾಂತ್ರಿಕತೆ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಯಾಗಬೇಕು. ಮಳೆ ಕಡಿಮೆಯಾಗಿದೆ, ಬರಗಾಲವಿದೆ, ಕಡಿಮೆ ನೀರಿನಲ್ಲಿ ಯಾವ ಬೆಳೆ ಬೆಳಯಬಹುದು. ಅದರ ಬಗ್ಗೆ ರೈತರಿಗೆ ಮಾಹಿತಿ ಇದೆಯಾ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಮಾಹಿತಿಯನ್ನು ರೈತರಿಗೆ ತಲುಪಿಸಬೇಕು ಎಂದು ಹೇಳಿದರು.

ಲ್ಯಾಬ್ ಟು ಲ್ಯಾಂಡ್, ಲ್ಯಾಂಡ್ ಟು ಲ್ಯಾಬ್ ವಿಷಯಕ್ಕೆ ಆದ್ಯತೆ ನೀಡಿ ಕೆಲಸ ಮಾಡಿದಲ್ಲಿ ಮಾತ್ರ ಆಹಾರದಲ್ಲಿ ಸ್ವಾವಲಂಬನೆ ಕಂಡುಕೊಳ್ಳಲು ಸಾಧ್ಯ. ಇದರಿಂದ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಲಿದೆ. ಕೈಗಾರಿಕೆ, ಕೃಷಿ, ಸೇವಾ ವಲಯ ಬೆಳೆದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಸ್ವಯಂ ಉದ್ಯೋಗವೂ ಇದಕ್ಕೆ ಸಹಕಾರಿಯಾಗಲಿದೆ. ಉದ್ಯೋಗಕ್ಕಾಗಿ ಜನ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಇದರಿಂದ ಸಮಸ್ಯೆ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರಿದ್ದಾರೆ. ಇದರಿಂದ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗಿದೆ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಇಂದು ಬಹಳ ಜನ ಕೃಷಿ ಬಿಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ. ಮಾರುಕಟ್ಟೆ ಸಮಸ್ಯೆ ಇದೆ, ಆ ಕಾರಣದಿಂದ ಕೃಷಿ ಕ್ಷೇತ್ರದ ಬೆಳವಣಿಗೆ ಆಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಗ್ರಾಮಸ್ವರಾಜ್ಯದ ಪರಿಕಲ್ಪನೆ ಗಾಂಧಿ ಕೊಟ್ಟಿದ್ದಾರೆ. ನಾವು ಆ ಕಡೆ ಗಮನ ಹರಿಸಬೇಕು, ಸಂಶೋಧನೆ ಮತ್ತು ವಿಸ್ತರಣೆಗೆ ಸರ್ಕಾರ ಎಲ್ಲ ರೀತಿಯ ಸಹಕಾರ ಕೊಡಲಿದೆ ಎಂದು ಭರವಸೆ ನೀಡಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಇಂದಿನ ಹವಾಮಾನ ಮತ್ತು ಮಳೆ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಿ ರೈತರು ವ್ಯವಸಾಯದಲ್ಲಿ ನಿರಾಸಕ್ತರಾಗುತ್ತಿದ್ದಾರೆ. ಇದರಿಂದ ರೈತರನ್ನು ಹೊರತರುವ ಕೆಲಸವಾಗಬೇಕಿದೆ. ಕೃಷಿ ವಿವಿ ಸಂಶೋಧನೆಗಳು ಈ ನಿಟ್ಟಿನಲ್ಲಿ ನಡೆಯಬೇಕು. ಕೃಷಿ ಪರಿಕರ ತಯಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ನಿರ್ಮಾಣ ಮಾಡುವ ಕೆಲಸ ಆಗಬೇಕಿದೆ, ಇದು ಕೃಷಿ ವಿವಿಯ ಕರ್ತವ್ಯ. ರೈತರಿಗೆ ಸಂಪೂರ್ಣ ಸಹಕಾರ ಕೊಡುವ ಜತೆಗೆ ರೈತರು ಸದೃಢರಾಗಬೇಕು. ಒಂದು ಕುಟುಂಬದ ಒಬ್ಬ ರೈತ ಸದೃಢವಾದರೆ ನೂರಾರು ಜನರಿಗೆ ಆತನೇ ಉದ್ಯೋಗ ನೀಡಬಲ್ಲ. ಹಾಗಾಗಿ ರೈತನ ಸದೃಢಕ್ಕೆ ಸರ್ಕಾರ ಆದ್ಯತೆ ನೀಡಲಿದೆ ಎಂದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕೃಷಿ ಒಂದು ರೀತಿ ಬಹಳ ಸಮಯದಿಂದ ಸಂಕಷ್ಟದಲ್ಲೇ ಸಾಗುತ್ತಿದೆ. ನಮ್ಮ ದೇಶದ ರೈತರು, ಕೃಷಿ ವಲಯದ ಅಭಿವೃದ್ಧಿ ಆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ದಿನೇ ದಿನೇ ಭೂ ಇಡುವಳಿ ಕಡಿಮೆಯಾಗುತ್ತಿದೆ. ಸರಾಸರಿ ಒಂದೆರಡು ಎಕರೆಗೆ ತಲುಪಿದ್ದಾರೆ ಇಷ್ಟು ಕಡಿಮೆ ಭೂಮಿಯಲ್ಲಿ ರೈತ ಏನೂ ಮಾಡಲು ಸಾಧ್ಯವಿಲ್ಲ. ಶೇ.60 ಕ್ಕಿಂತ ಹೆಚ್ಚಿನ ರೈತರು 5 ಎಕರೆಗೂ ಕಡಿಮೆ ಭೂಮಿ ಹೊಂದಿದ್ದಾರೆ. ಕಡಿಮೆ ಭೂಮಿಯಲ್ಲಿ ಹಣ ಗಳಿಕೆ ಕಷ್ಟ, ನೆರೆ ಒಂದು ಕಡೆ ಬರ ಮತ್ತೊಂದು ಕಡೆ, ಎಲ್ಲ ಸರಿಯಾಗಿದೆ ಎಂದರೆ ಒಳೆಗೆ ಉತ್ತಮ ಬೆಲೆ ಸಿಕ್ಕಲ್ಲ, ಇದರ ನಡುವೆ ನಮ್ಮನ್ನು ಕೃಷಿಯಲ್ಲಿ ಸುಸ್ಥಿರತೆ ಕಂಡುಕೊಳ್ಳಲು ತಂತ್ರಜ್ಞಾನದ ಸಹಕಾರ ಅಗತ್ಯವಿದೆ. ಹಾಗಾಗಿ ತಂತ್ರಜ್ಞಾನದ ತರಬೇತಿ ನೀಡಲು ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಇದನ್ನೂ ಓದಿ: ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಗಳ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ: ಸಿಎಂ ಸಿದ್ದರಾಮಯ್ಯ ಭರವಸೆ

Last Updated : Oct 18, 2023, 5:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.