ETV Bharat / state

’ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ’ ಪುಸ್ತಕ ಬಿಡುಗಡೆ ಮಾಡಲಿರುವ ಸಿಎಂ - CM release book

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸರ್ಕಾರದ ಸಾಧನೆಗಳ ಕುರಿತು ಮುದ್ರಿಸಿರುವ 116 ಪುಟಗಳ ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ ಎನ್ನುವ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಿಡುಗಡೆ ಮಾಡಲಿದ್ದಾರೆ.

Banglore
ಸವಾಲುಗಳ ವರ್ಷ ಪರಿಹಾರದ ಸ್ಪರ್ಶ ಪುಸ್ತಕ ಬಿಡುಗಡೆ ಮಾಡಲಿರುವ ಸಿಎಂ
author img

By

Published : Jul 27, 2020, 9:52 AM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದು, ವರ್ಷದ ಸಾಧನೆಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಜನರ ಮುಂದಿಡಲಿದ್ದಾರೆ.

Banglore
ಸವಾಲುಗಳ ವರ್ಷ ಪರಿಹಾರದ ಸ್ಪರ್ಶ ಪುಸ್ತಕ ಬಿಡುಗಡೆ ಮಾಡಲಿರುವ ಸಿಎಂ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸರ್ಕಾರದ ಸಾಧನೆಗಳ ಕುರಿತು ಮುದ್ರಿಸಿರುವ 116 ಪುಟಗಳ ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ ಎನ್ನುವ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಿಡುಗಡೆಗೊಳಿಸಲಿದ್ದಾರೆ. ನಂತರ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ ಪುಸ್ತಕವನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.

ಪುಸ್ತಕದಲ್ಲಿನ ಮಾಹಿತಿ: 116 ಪುಟದ ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ ಪುಸ್ತಕದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿ 3 ಪುಟಗಳ ಮುನ್ನುಡಿ ಬರೆಯಲಾಗಿದೆ. ನಂತರ ಪ್ರತಿ ಇಲಾಖೆಯಲ್ಲಿನ ಕಾರ್ಯಕ್ರಮಗಳ ಅನುಷ್ಠಾನ, ಪ್ರಗತಿಯ ವಿವರ ಹಾಗೂ ಖರ್ಚು ಮಾಡಿರುವ ಹಣಕಾಸಿನ ಮಾಹಿತಿಯನ್ನು ಪ್ರತ್ಯೇಕವಾಗಿ ವಿವರಣೆ ನೀಡಲಾಗಿದೆ.

ಅಲ್ಲದೇ ಕೊರೊನಾ ಸಂದರ್ಭದಲ್ಲಿ ಕೈಗೊಂಡ ಕ್ರಮ, ನೆರೆ ಹಾನಿ ವೇಳೆ ಕೈಗೊಂಡ ಕ್ರಮಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.