ಬೆಂಗಳೂರು : ಸಿಎಂ ಯಡಿಯೂರಪ್ಪ ನಿವಾಸಕ್ಕೆ ಕೆಲಸ ಕೇಳಿಕೊಂಡು ಮಡಿಕೇರಿಯಿಂದ ಬಂದ ವಿಕಲಚೇತನ ಮಗನ ತಾಯಿಗೆ ಸಿಎಂ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಶಾರದಮ್ಮ ಎಂಬುವರು ಸಿಎಂರನ್ನು ಭೇಟಿಯಾಗಲು ಬಂದಿದ್ದರು. ಸಾರ್ವಜನಿಕರ ಭೇಟಿಯ ಸಮಯದಲ್ಲಿ ಶಾರದಮ್ಮನವರನ್ನು ಸಿಎಂ ಭೇಟಿಯಾಗಿದ್ದಾರೆ. ನಂತರ ತನ್ನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ಈ ಟಿವಿ ಭಾರತ್ ಜೊತೆ ಮಾತಾನಾಡಿದ ಶಾರದಮ್ಮ, ನಿನ್ನೆ ರಾತ್ರಿ ಮಡಿಕೇರಿಯಿಂದ ಬೆಂಗಳೂರಿಗೆ ಬಂದ್ದಿದ್ದೇನೆ. ನನಗೆ ನಾಲ್ವರು ಮಕ್ಕಳಿದ್ದು, ಅದರಲ್ಲಿ ಮೂವರು ವಿಕಲಚೇತನಾರಾಗಿದ್ದಾರೆ. ಅದ್ರಲ್ಲೀಗ ಇಬ್ವರು ಸಾವನ್ನಪ್ಪಿದ್ದಾರೆ. ಹಾಗೆ ಈಗ ಉಳಿದಿರುವ ಒಂದು ಗಂಡು ಮಗು ವಿಕಲಚೇತನವಾಗಿದ್ದು, ಕುಟುಂಬಕ್ಕೆ ಆಸರೆಯಾಗಿರುವ ಮಗಳ ಗಂಡನಿಗೆ ಕೆಲಸ ನೀಡಬೇಕೆಂದು ಮನವಿ ಮಾಡಿದ್ದೇನೆ. ಸಿಎಂ ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾರದಮ್ಮ ತಿಳಿಸಿದರು.