ಬೆಂಗಳೂರು : ಸದಾ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಇದೀಗ ಕಾರ್‌ವೊಂದನ್ನ ಖರೀದಿಸಿ ಮತ್ತೆ ಸುದ್ದಿಯಾಗಿದ್ದಾರೆ.
ರಾಜಕಾರಣಿಗಳು ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿ ಮಾಡುವುದು ಸಾಮಾನ್ಯ. ಆದರೆ, ರೇಣುಕಾಚಾರ್ಯ ಎಂಜಿ ಕಂಪನಿಯ ನೂತನ ಎಂಜಿ ಗ್ಲೋಸ್ಟರ್ ಕಾರನ್ನು ಖರೀದಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಷೋರೂಂನವರಿಂದ ಕಾರನ್ನು ಡೆಲಿವರಿ ತೆಗೆದುಕೊಂಡ ಸಂದರ್ಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆದರೆ, ಆತ್ಮನಿರ್ಭರ ಭಾರತ ಕೇವಲ ಕಾರ್ಯಕರ್ತರಿಗೆ, ಜನರಿಗೆ ಮಾತ್ರವೇ? ನಾಯಕರಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 'ವೋಕಲ್ ಫಾರ್ ಲೋಕಲ್' ಎಲ್ಲಿ ಹೋಯಿತು?. ಟಾಟಾ ಕಾರು ಇರಲಿಲ್ಲವೇ, ಚೀನಾ ಕಾರೇ ಬೇಕಿತ್ತಾ? ರೇಣುಕಾಚಾರ್ಯ ವಿರುದ್ಧ ಕೆಂಡ ಕಾರಿದ್ದಾರೆ.
ಸರ್ಕಾರದ ಭಾಗವಾಗಿ ನೀವೇ ವಿದೇಶಿ ಅದೂ ಕೂಡ ಚೀನಾ ಮೂಲದ ವ್ಯಕ್ತಿಯ ಒಡೆತನ ಹೊಂದಿರುವ ಕಂಪನಿ ಕಾರು ಖರೀದಿ ಮಾಡಿದ್ದೀರಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಇದ್ಯಾವುದಕ್ಕೂ ರೇಣುಕಾಚಾರ್ಯ ಮಾತ್ರ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
ಇದನ್ನೂ ಓದಿ:ಮೊದಲನೇ ಹಂತದ ಗ್ರಾಪಂ ಚುನಾವಣೆ : ಶಿವಮೊಗ್ಗದಲ್ಲಿ 4,111 ನಾಮಪತ್ರ ಸಲ್ಲಿಕೆ