ETV Bharat / state

ಸಚಿವರೊಂದಿಗೆ ಸಿಎಂ ಮಹತ್ವದ ಸಭೆ: ಕೋವಿಡ್ ನಿರ್ವಹಣೆ ಕುರಿತು ಸಮಾಲೋಚನೆ

ಕೊರೊನಾ ನಿರ್ವಹಣೆ ಸಂಬಂಧ ಇಂದು ಸಿಎಂ ಯಡಿಯೂರಪ್ಪ ಸಚಿವರುಗಳ ಜೊತೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಹಾಗೆ ಸಚಿವರುಗಳು ಕೂಡ ಸಿಎಂಗೆ ರಾಜ್ಯದಲ್ಲಿ ಕೊರೊನಾ ಸಂಬಂಧ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ ಎನ್ನಲಾಗ್ತಿದೆ.

CM meeting with minister
ಸಚಿವರೊಂದಿಗೆ ಸಿಎಂ ಸಭೆ
author img

By

Published : May 5, 2021, 7:13 PM IST

ಬೆಂಗಳೂರು: ರಾಜ್ಯದಲ್ಲಿನ ಕೊರೊನಾ ನಿರ್ವಹಣೆ, ಕೇಂದ್ರ ಸಚಿವ ಸಂಪುಟದ ಮಾಹಿತಿ ನಂತರದ ಬೆಳವಣಿಗೆಗಳ ಕುರಿತು ಸಚಿವರು ಹಾಗು ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ ನಡೆಸುತ್ತಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ್, ಸಚಿವರಾದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಸುಧಾಕರ್, ಆರ್. ಅಶೋಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗು ಅಧಿಕಾರಿಗಳು ಭಾಗಿಯಾಗಿದ್ದಾರೆ.

ನಿನ್ನೆಯಷ್ಟೇ ಕೊರೊನಾ ನಿರ್ವಹಣೆ ಜವಾಬ್ದಾರಿಯನ್ನು ಡಾ.ಸುಧಾಕರ್ ಹೊರತುಪಡಿಸಿ ಇತರ ಐವರಿಗೆ ಹಂಚಿಕೆ ಮಾಡಿದ್ದು, ಈ ಸಂಬಂಧ ಸಿಎಂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಎಲ್ಲಾ ಸಚಿವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿದ್ದು, ಅದರ ವಿವರವನ್ನು ಸಿಎಂಗೆ ನೀಡುತ್ತಿದ್ದಾರೆ.

ಆಮ್ಲಜನಕ ಸರಬರಾಜು ನಿರ್ವಹಣೆ, ಸ್ಥಳೀಯವಾಗಿ ಆಕ್ಸಿಜನ್ ಉತ್ಪಾದನೆ ಮತ್ತು ಪೂರೈಕೆದಾರರೊಂದಿಗಿನ ಮಾತುಕತೆ ವಿವರವನ್ನು ಸಚಿವ ಜಗದೀಶ್ ಶೆಟ್ಟರ್ ಅವರು ಸಿಎಂಗೆ ನೀಡಿದರು. ರೆಮ್​ಡಿಸಿವಿರ್ ಕೊರತೆಯಾಗದಂತೆ ಸಮಪರ್ಕ ರೀತಿಯ ವಿತರಣೆ, ಔಷಧ ದಾಸ್ತಾನು, ಅಗತ್ಯತೆ ಮತ್ತು ಬಳಕೆ ಕುರಿತು ಮಾಹಿತಿಯನ್ನು ಡಿಸಿಎಂ ಅಶ್ವತ್ಥನಾರಾಯಣ್ ವಿವರಿಸಿದರು.

ಬೆಡ್ ಗಳ ಸಮಸ್ಯೆ, ಕೊರತೆಯಾಗದಂತೆ ಕೈಗೊಳ್ಳುತ್ತಿರುವ ಕುರಿತ ಕ್ರಮಗಳ ವಿವರವನ್ನು ಕಂದಾಯ ಸಚಿವ ಆರ್.ಅಶೋಕ್ ಒದಗಿಸಿದರು. ಬಹುಮುಖ್ಯ ಸಮಸ್ಯೆ ವಾರ್ ರೂಂ ನಲ್ಲಿ ಕಂಡುಬಂದಿದ್ದು ಈ ಸಂಬಂಧ ಸಮಸ್ಯೆ ಪರಿಹಾರ ಕುರಿತು ಸಭೆ ನಡೆಸಿದ್ದು, ಅದರ ವಿವರವನ್ನು ಸಚಿವ ಅರವಿಂದ ಲಿಂಬಾವಳಿ ಸಿಎಂಗೆ ನೀಡಿದರು. ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ, ಕಠಿಣ ಕರ್ಫ್ಯೂ ನಂತರ ಕೊರೊನಾ ಸ್ಥಿತಿಗತಿ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ವಿವರವನ್ನು ನೀಡಿದ್ದಾರೆ ಎನ್ನಲಾಗ್ತಿದೆ.

ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯ ಕೆಲ ಮಾಹಿತಿಗಳ ಆಧಾರದಲ್ಲಿ ಸಿಎಂ ಯಡಿಯೂರಪ್ಪ ಸಮಾಲೋಚನೆ ನಡೆಸುತ್ತಿದ್ದಾರೆ. ಕೇಂದ್ರದ ಅಭಿಪ್ರಾಯ ಏನಿದೆ ಎನ್ನುವ ಆಧಾರದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂದು ಚರ್ಚೆ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.