ETV Bharat / state

ಇಂದು 500 ಕೋಟಿ ಮೊತ್ತದ‌ ಎರಡನೇ ಪ್ಯಾಕೇಜ್ ಘೋಷಣೆ ಸಾಧ್ಯತೆ! - ವಿಶೇಷ ಪ್ಯಾಕೇಜ್ ಘೋಷಣೆ

ಇಂದು ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಲಿರುವ ಸಿಎಂ ಯಡಿಯೂರಪ್ಪ, 500 ಕೋಟಿ ರೂ.ಗಳ ಎರಡನೇ ಪ್ಯಾಕೇಜ್ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. 1610 ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ನಂತರ ಅದರಲ್ಲಿ ಬಿಟ್ಟು ಹೋಗಿರುವ ಕೆಲ ವರ್ಗಗಳನ್ನು ಇದರಲ್ಲಿ ಪರಿಗಣಿಸಲಾಗಿದೆ ಎನ್ನಲಾಗುತ್ತಿದೆ.

CM meeting at 12.30: Announcement of second package
ಮಧ್ಯಾಹ್ನ 12.30ಕ್ಕೆ‌ ಸಿಎಂ ಸುದ್ದಿಗೋಷ್ಟಿ: 500 ಕೋಟಿ ಮೊತ್ತದ‌ ಎರಡನೇ ಪ್ಯಾಕೇಜ್ ಘೋಷಣೆ ಆಗುತ್ತಾ?
author img

By

Published : May 15, 2020, 10:32 AM IST

ಬೆಂಗಳೂರು: ಕೊರೊನಾ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ.

ಇಂದು ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಲಿರುವ ಸಿಎಂ, 500 ಕೋಟಿ ರೂ.ಗಳ ಎರಡನೇ ಪ್ಯಾಕೇಜ್ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. 1610 ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ನಂತರ ಅದರಲ್ಲಿ ಬಿಟ್ಟು ಹೋಗಿರುವ ಕೆಲ ವರ್ಗಗಳ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ಪ್ಯಾಕೇಜ್​ನಲ್ಲಿ ನಮ್ಮ ವರ್ಗವನ್ನೂ ಸೇರಿಸಬೇಕು ಎಂದು ಮನವಿ ಮಾಡಿದ್ದವು. ಅರ್ಚಕ, ಸಮಿತಾ ಸಮಾಜ, ವಾದ್ಯ ನುಡಿಸುವವರು ಹೀಗೆ ಹಲವು ವರ್ಗಗಳು ಸಿಎಂಗೆ ಮನವಿ ಮಾಡಿದ್ದವು. ಅದನ್ನೆಲ್ಲಾ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತು ಸಿಎಂ ಭರವಸೆ ನೀಡಿದ್ದರು.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡನೇ ಪ್ಯಾಕೇಜ್ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ, ಹಣ್ಣು ಬೆಳೆಗಾರರನ್ನು ಆರ್ಥಿಕ ಪ್ಯಾಕೇಜ್ ವ್ಯಾಪ್ತಿಗೆ ಸೇರಿಸಿ 137 ಕೋಟಿ ನೆರವನ್ನು ಹೆಚ್ಚುವರಿಯಾಗಿ ಪ್ಯಾಕೇಜ್​ಗೆ ಸೇರಿಸುವ ನಿರ್ಧಾರ ಪ್ರಕಟವಾಯಿತು. ಆದರೆ ತಮ್ಮನ್ನೂ ಪ್ಯಾಕೇಜ್​ಗೆ ಪರಿಗಣಿಸಲಾಗುತ್ತದೆ ಎನ್ನುವ ಹಲವು ವರ್ಗಗಗಳ ಜನರ ನಿರೀಕ್ಷೆ ಹುಸಿಯಾಯಿತು.

ಸದ್ಯ ಇಂದು ಮಧ್ಯಾಹ್ನ 12.30ಕ್ಕೆ ವಿಧಾನಸೌಧದ ಕೊಠಡಿ ಸಂಖ್ಯೆ‌ 334 ರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ಕರೆದಿದ್ದು, ಇಂದು ಹೊಸದಾಗಿ 500 ಕೋಟಿ ರೂಪಾಯಿಗಳ ಎರಡನೇ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ ಎಪಿಎಂಸಿ ಕಾಯ್ದೆ, ಅಕ್ರಮ ಸಕ್ರಮ ಕಾಯ್ದೆ ಸಂಬಂಧ ಜನರಲ್ಲಿ ಇರುವ ಗೊಂದಲಕ್ಕೆ ಸಿಎಂ ಬಿಎಸ್​ವೈ ಸ್ಪಷ್ಟೀಕರಣ ನೀಡಿ ತೆರೆ ಎಳೆಯಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.