ETV Bharat / state

ವಿಶ್ವಾಸಮತ ಯಾಚಿಸಲು ಮುಂದಾದ ಸಿಎಂ ಕುಮಾರಸ್ವಾಮಿ! - ಹೆಚ್.ಡಿ. ಕುಮಾರಸ್ವಾಮಿ

ಅನೇಕ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ವಿಶ್ವಾಸಮತ ಯಾಚಿಸಲು ನಾನು ಬಯಸಿದ್ದೇನೆ. ಹೀಗಾಗಿ ನನಗೆ ವಿಶ್ವಾಸಮತ ಯಾಚನೆ ಮಾಡಲು ಸಮಯಾವಕಾಶ ನೀಡಿ ಎಂದು ಸಿಎಂ ಕುಮಾರಸ್ವಾಮಿ ಅವರು ಸ್ಪೀಕರ್​ಗೆ ಮನವಿ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ
author img

By

Published : Jul 12, 2019, 2:44 PM IST

Updated : Jul 12, 2019, 2:49 PM IST

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದ ಗೊಂದಲದ ಗೂಡಾಗಿರುವ ರಾಜ್ಯ ರಾಜಕೀಯಕ್ಕೆ ಇಂದು ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಒಂದೆಡೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲು ಮುಂದಾಗಿದ್ದಾರೆ.

ಇನ್ನೊಂದೆಡೆ ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸುವ ಕುರಿತಂತೆ ನಡೆದ ವಿಚಾರಣೆ ವೇಳೆ ಮಂಗಳವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಸರ್ಕಾರದ ಭವಿಷ್ಯ ಇನ್ನೂ ತೂಗುಯ್ಯಾಲೆಯಲ್ಲಿ ಮುಂದುವರಿದಿದೆ. ಅದೇ ಕಾಲಕ್ಕೆ ಸಣ್ಣ ಗೊಂದಲವಾದರೂ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಶುರುವಾಗಬಹುದು ಎಂಬ ಆತಂಕ ಕಾಣಿಸಿಕೊಂಡಿದೆ.

ಜುಲೈ 11ರ ಸಂಜೆಯೊಳಗೆ ಸ್ಪೀಕರ್​ ರಮೇಶ್​ ಕುಮಾರ್​ ಎದುರು ಹಾಜರಾಗುವಂತೆ ಸುಪ್ರೀಂಕೋರ್ಟ್​ ಅತೃಪ್ತ ಶಾಸಕರಿಗೆ ಸೂಚಿಸಿತ್ತು. ಅಲ್ಲದೆ, ರಾಜೀನಾಮೆ ಕುರಿತಂತೆ ತೀರ್ಮಾನ ಕೈಗೊಳ್ಳುವಂತೆ ಸ್ಪೀಕರ್​ ಅವರಿಗೂ ತಿಳಿಸಲಾಗಿತ್ತು. ಹೀಗೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದ ರಾಜ್ಯ ರಾಜಕಾರಣಕ್ಕೆ ಇಂದು ಮೊದಲು ತಿರುವು ನೀಡಿದ್ದು ಸುಪ್ರೀಂಕೋರ್ಟ್. ಇಂದು ನಿಗದಿಯಂತೆ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠ ಒಂದು ಗಂಟೆಗೂ ಹೆಚ್ಚು ಕಾಲ ಪರ-ವಿರೋಧ ವಾದವನ್ನು ಆಲಿಸಿತು. ವಿಚಾರಣೆಯ ನಂತರ ತೀರ್ಪು ನೀಡಿದ ನ್ಯಾಯಾಲಯ ಮಂಗಳವಾರದವರೆಗೆ ಯಥಾ ಸ್ಥಿತಿಯನ್ನು ಕಾಪಾಡುವಂತೆ ಆದೇಶಿಸಿದ್ದಲ್ಲದೆ ಅಲ್ಲಿಯವರೆಗೆ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಅವರಿಗೆ ಸಲ್ಲಿಕೆಯಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ.

ನ್ಯಾಯಾಲಯದ ಈ ಆದೇಶ ಏಕಕಾಲಕ್ಕೆ ಸರ್ಕಾರಕ್ಕೆ ತಾತ್ಕಾಲಿಕ ಜೀವದಾನ ನೀಡಿದರೆ, ಮತ್ತೊಂದೆಡೆ ಅನರ್ಹಗೊಳ್ಳುವ ಭೀತಿಯಲ್ಲಿದ್ದ ಶಾಸಕರಿಗೂ ತಾತ್ಕಾಲಿಕ ರಿಲೀಫ್ ನೀಡಿದಂತಾಗಿದೆ. ಹೀಗೆ ಒಂದು ಕಡೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆಯೇ ಮತ್ತೊಂದೆಡೆ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು, ಸರ್ಕಾರದ ಭವಿಷ್ಯವನ್ನು ನಿರ್ಧರಿಸಲು ವಿಶ್ವಾಸಮತ ಯಾಚಿಸಲು ಅವಕಾಶ ನೀಡುವಂತೆ ಸ್ಪೀಕರ್ ಅವರನ್ನು ಕೋರಿದ್ದಾರೆ.

ಶಾಸಕರ ರಾಜೀನಾಮೆಯ ನಂತರ ಸರ್ಕಾರ ಸುಭದ್ರವಾಗಿಲ್ಲ ಎಂಬ ಭಾವನೆ ಇದೆ. ಈ ಗೊಂದಲವನ್ನು ಪರಿಹರಿಸುವ ಅಗತ್ಯವೂ ಇದೆ. ಹೀಗೆ ಗೊಂದಲವನ್ನು ಇರಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯುವ ಅಗತ್ಯ ನನಗಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅನೇಕ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ವಯಂಪ್ರೇರಣೆಯಿಂದ ವಿಶ್ವಾಸಮತ ಯಾಚಿಸಲು ನಾನು ಬಯಸಿದ್ದೇನೆ. ಹೀಗಾಗಿ ನನಗೆ ವಿಶ್ವಾಸಮತ ಯಾಚನೆ ಮಾಡಲು ಸಮಯಾವಕಾಶ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ವಿಧಾನಮಂಡಲ ಕಲಾಪ ಆರಂಭವಾದ ಮೊದಲ ದಿನವಾದ ಇಂದು ಸದನದಲ್ಲಿ ಕೇವಲ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಅಜೆಂಡಾ ನಿಗದಿಯಾಗಿತ್ತು. ಆದರೆ ಈ ಅಜೆಂಡಾದಡಿ ಮಾತನಾಡಲು ಅವಕಾಶ ಪಡೆದ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೆ ಸಮಯಾವಕಾಶ ಕೋರಿದರು.

ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸಮತ ಯಾಚನೆ ಮಾಡಲು ಅವಕಾಶ ನೀಡಿದರೂ ಚರ್ಚೆಯ ಆಧಾರದ ಮೇಲೆ ಸರ್ಕಾರದ ವಿರುದ್ಧ 13 ಶಾಸಕರು ಮತ ಚಲಾಯಿಸಿದರೆ ಮಂಗಳವಾರದವರೆಗೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ. ಒಂದು ವೇಳೆ ಅವರು ಸದನಕ್ಕೆ ಗೈರು ಹಾಜರಾದರೂ ಮಂಗಳವಾರದವರೆಗೆ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತಿಲ್ಲ.

ಒಟ್ಟಾರೆ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದು, ಶಾಸಕರ ರಾಜೀನಾಮೆ ಎಂಬ ಹೈಡ್ರಾಮಾ ಹಲವು ತಿರುವುಗಳೊಂದಿಗೆ ಇನ್ನಷ್ಟು ದಿನ ಮುಂದುವರಿಯುವುದು ನಿಶ್ಚಿತವಾಗಿದೆ.

Intro:ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆಯಿಂದ ಗೊಂದಲದ ಗೂಡಾಗಿರುವ ರಾಜ್ಯ ರಾಜಕೀಯಕ್ಕೆ ಇಂದು ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಒಂದೆಡೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲು ಮುಂದಾಗಿದ್ದರೆ, ಮಂಗಳವಾರದವರೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.Body:ಹೀಗಾಗಿ ಸಿಎಂ ಕುಮಾರಸ್ವಾಮಿ ಸರ್ಕಾರದ ಭವಿಷ್ಯ ಇನ್ನೂ ತೂಗುಯ್ಯಾಲೆಯಲ್ಲಿ ಮುಂದುವರಿದಿದ್ದು ಅದೇ ಕಾಲಕ್ಕೆ ಸಣ್ಣ ಗೊಂದಲವಾದರೂ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಶುರುವಾಗಬಹುದು ಎಂಬ ಆತಂಕ ಕಾಣಿಸಿಕೊಂಡಿದೆ.
ಸರ್ಕಾರದ ಭವಿಷ್ಯವನ್ನು ತೀರ್ಮಾನಿಸಲು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದರೂ ಇದರ ಆಳದಲ್ಲಿ ಸ್ಪೀಕರ್ ಹಾಗೂ ನ್ಯಾಯಾಂಗದ ನಡುವೆ ಸಂಘರ್ಷ ಉದ್ಭವಿಸುವ ಲಕ್ಷಣಗಳೂ ಕಾಣಿಸಿಕೊಂಡಿವೆ.
ಜುಲೈ ಹನ್ನೊಂದರ ಸಂಜೆ ಒಳಗೆ ಶಾಸಕರ ರಾಜೀನಾಮೆ ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಮಾನ್ಯ ಮಾಡದ ಸ್ಪೀಕರ್ ರಮೇಶ್ ಕುಮಾರ್, ನನ್ನ ಕಾರ್ಯವ್ಯಾಪ್ತಿಯೊಳಗೆ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಲು ಬರುವುದಿಲ್ಲ ಎಂದಿದ್ದರು.
ಹೀಗೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದ ರಾಜ್ಯ ರಾಜಕಾರಣಕ್ಕೆ ಇಂದು ಮೊದಲು ತಿರುವು ನೀಡಿದ್ದು ಸುಪ್ರೀಂಕೋರ್ಟ್. ಇಂದು ನಿಗದಿಯಂತೆ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠ ಒಂದು ಗಂಟೆಗೂ ಹೆಚ್ಚು ಕಾಲ ಪರ-ವಿರೋಧ ವಾದವನ್ನು ಆಲಿಸಿತು.
ವಿಚಾರಣೆಯ ನಂತರ ತೀರ್ಪು ನೀಡಿದ ನ್ಯಾಯಾಲಯ ಮಂಗಳವಾರದವರೆಗೆ ಯಥಾ ಸ್ಥಿತಿಯನ್ನು ಕಾಪಾಡುವಂತೆ ಆದೇಶಿಸಿದ್ದಲ್ಲದೆ ಅಲ್ಲಿಯವರೆಗೆ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಅವರಿಗೆ ಸಲ್ಲಿಕೆಯಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿತು.
ನ್ಯಾಯಾಲಯದ ಈ ಆದೇಶ ಏಕಕಾಲಕ್ಕೆ ಸರ್ಕಾರಕ್ಕೆ ತಾತ್ಕಾಲಿಕ ಜೀವದಾನ ನೀಡಿದರೆ,ಮತ್ತೊಂದೆಡೆ ಅನರ್ಹಗೊಳ್ಳುವ ಭೀತಿಯಲ್ಲಿದ್ದ ಶಾಸಕರಿಗೂ ತತ್ಕಾಲಕ್ಕೆ ರಿಲೀಫ್ ನೀಡಿದಂತಾಯಿತು.
ಹೀಗೆ ಒಂದು ಕಡೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆಯೇ ಮತ್ತೊಂದು ಕಡೆ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು,ಸರ್ಕಾರದ ಭವಿಷ್ಯವನ್ನು ನಿರ್ಧರಿಸಲು ವಿಶ್ವಾಸಮತ ಯಾಚಿಸಲು ಅವಕಾಶ ನೀಡುವಂತೆ ಸ್ಪೀಕರ್ ಅವರನ್ನು ಕೋರಿಕೊಂಡರು.
ಶಾಸಕರ ರಾಜೀನಾಮೆಯ ನಂತರ ಸರ್ಕಾರ ಸುಭದ್ರವಾಗಿಲ್ಲ ಎಂಬ ಬಾವನೆ ಇದೆ.ಈ ಗೊಂದಲವನ್ನು ಪರಿಹರಿಸುವ ಅಗತ್ಯವೂ ಇದೆ.ಹೀಗೆ ಗೊಂದಲವನ್ನು ಇರಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯುವ ಅಗತ್ಯ ನನಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಶಾಸಕರನೇಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ವಪ್ರೇರಣೆಯಿಂದ ವಿಶ್ವಾಸಮತ ಯಾಚಿಸಲು ನಾನು ಬಯಸಿದ್ದೇನೆ.ಹೀಗಾಗಿ ನನಗೆ ವಿಶ್ವಾಸಮತ ಯಾಚನೆ ಮಾಡಲು ಸಮಯಾವಕಾಶ ನೀಡಿ ಎಂದು ಅವರು ಮನವಿ ಮಾಡಿಕೊಂಡರು.
ವಿಧಾನಮಂಡಲ ಕಲಾಪ ಆರಂಭವಾದ ಮೊದಲ ದಿನವಾದ ಇಂದು ಸದನದಲ್ಲಿ ಕೇವಲ ಅಗಲಿ ಹೋದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಅಜೆಂಡಾ ನಿಗದಿಯಾಗಿತ್ತು.ಆದರೆ ಈ ಅಜೆಂಡಾದಡಿ ಮಾತನಾಡಲು ಅವಕಾಶ ಪಡೆದ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲು ಸಮಯಾವಕಾಶ ಕೋರಿದರು.
ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸಮತ ಯಾಚನೆ ಮಾಡಲು ಅವಕಾಶ ನೀಡಿದರೂ ಚರ್ಚೆಯ ಆಧಾರದ ಮೇಲೆ ಸರ್ಕಾರದ ವಿರುದ್ಧ ಹದಿಮೂರು ಶಾಸಕರು ಮತ ಚಲಾಯಿಸಿದರೆ ಮಂಗಳವಾರದವರೆಗೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ.
ಒಂದು ವೇಳೆ ಅವರು ಸದನಕ್ಕೆ ಗೈರು ಹಾಜರಾದರೂ ಮಂಗಳವಾರದವರೆಗೆ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತಿಲ್ಲ.
ಹೀಗಾಗಿ ರಾಜ್ಯ ರಾಜಕಾರಣದಲ್ಲಿನ ಗೊಂದಲ ಮುಂದುವರಿಯಲಿದ್ದು ಮೇಲ್ನೋಟಕ್ಕೆ ಇದು ಸರ್ಕಾರ ಹಾಗೂ ಅತೃಪ್ತ ಶಾಸಕರ ನಡುವಣ ಸಂಘರ್ಷದಂತೆ ಕಂಡರೂ ಮುಂದಿನ ದಿನಗಳಲ್ಲಿ ಇದು ಸ್ಪೀಕರ್ ವರ್ಸಸ್ ಕೋರ್ಟ್ ಎಂಬ ಸ್ವರೂಪಕ್ಕೆ ತಿರುಗಬಹುದು ಎಂಬ ಅನುಮಾನ ಕಾಣಿಸಿಕೊಂಡಿದೆ.
ಹಾಗೇನಾದರೂ ಆದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಬಹುದು ಎಂಬ ಆತಂಕ ಶುರುವಾಗಿದ್ದು ಶಾಸಕರ ರಾಜೀನಾಮೆ ಎಂಬ ಹೈಡ್ರಾಮಾ ಹಲವು ತಿರುವುಗಳೊಂದಿಗೆ ಇನ್ನಷ್ಟು ದಿನ ಮುಂದುವರಿಯುವುದು ನಿಶ್ಚಿತವಾಗಿದೆ.
Conclusion:
Last Updated : Jul 12, 2019, 2:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.