ETV Bharat / state

ಐಟಿ ಮುಖ್ಯಸ್ಥರು ಪ್ರಾಮಾಣಿಕರಾ? ಮುಂಬೈನಲ್ಲಿ ಫ್ಲಾಟ್​ ಖರೀದಿಸಿರೋದು ಗೊತ್ತು: ಹೆಚ್​ಡಿಕೆ

ಸಾಂಕೇತಿಕ ಪ್ರತಿಭಟನೆ ದೇಶದ ಒಕ್ಕೂಟ ಬಲಪಡಿಸುವ ಕೆಲಸ ಇದಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರ ತನಿಖಾ ಸಂಸ್ಥೆಗಳನ್ನೇ ದುರುಪಯೋಗ ಪಡಿಸುವ ಕೆಲಸ ಮಾಡಿವೆ. ಇದೊಂದು ಕೆಟ್ಟ ರೀತಿಯ ಸಂಸ್ಕೃತಿಯನ್ನು ಹುಟ್ಟು ಹಾಕಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Mar 28, 2019, 5:54 PM IST

Updated : Mar 28, 2019, 6:22 PM IST

ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಯವರು ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಹರಿಶ್ಚಂದ್ರನ ಮಕ್ಕಳಾ? ಇವರೇನು ದೇವಲೋಕದಿಂದ ಇಳಿದು ಬಂದಿದ್ದಾರಾ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ‌ ಖಾರವಾಗಿ ಪ್ರಶ್ನಿಸಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡಿರುವುದು ಸರಿಯಲ್ಲ. ಬಿಜೆಪಿ ಹಿಂದಿ‌ನ ಐದು ವರ್ಷಗಳ ಆಧಿಕಾರ ಅವಧಿಯಲ್ಲಿ ಮಾಡಿದ ಕೊಟ್ಯಂತರ ರೂ. ಲೂಟಿ ನಮಗೆ ಗೊತ್ತಿಲ್ಲವೇ. ಅಲ್ಲದೇ ಐಟಿ ಆಧಿಕಾರಿಗಳೇನು‌ ದೇವಲೋಕದಿಂದ ಇಳಿದು ಬಂದಿಲ್ಲ. ರೇಡ್ ಮಾಡಿ ಅವರು ಕೊಟ್ಯಂತರ ರೂ.ಆಸ್ತಿ ಸಂಪಾದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್.ಡಿ. ಕುಮಾರಸ್ವಾಮಿ

ಸಾಂಕೇತಿಕ ಪ್ರತಿಭಟನೆ ದೇಶದ ಒಕ್ಕೂಟ ಬಲಪಡಿಸುವ ಕೆಲಸ ಇದಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರ ತನಿಖಾ ಸಂಸ್ಥೆಗಳನ್ನೇ ದುರುಪಯೋಗ ಮಾಡಿಕೊಂಡಿದೆ. ಇದೊಂದು ಕೆಟ್ಟ ಸಂಸ್ಕೃತಿ. ಐಟಿ ಇಲಾಖೆಯ ನಿರ್ದೇಶಕ ಪ್ರಾಮಾಣಿಕ ಅಧಿಕಾರಿನಾ? ಬಾಂಬೆಯಲ್ಲಿ ಅಕ್ರಮವಾಗಿ ಫ್ಲಾಟ್ ಖರೀದಿಸಿರುವುದು ನಮಗೆ ಗೊತ್ತಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸಾಮಾನ್ಯವಾಗಿ ದಾಳಿ ಮಾಡುವ ವೇಳೆ ಐಟಿ ಸ್ಥಳೀಯ ಪೊಲೀಸರ ನೆರವು ಪಡೆಯುತ್ತೆ. ಅದರೆ, ನಿನ್ನೆ ನಡೆದ ದಾಳಿಯಲ್ಲಿ ಸಿಆರ್​ಪಿಎಫ್ ಪೊಲೀಸರ ಸಹಕಾರದಿಂದ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೇಂದ್ರದ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ದಾಳಿಯಿಂದ ನಾನೇನು ಭಯ ಬೀಳಲ್ಲ. ವಿರೋಧ ಪಕ್ಷಗಳನ್ನು ಸೋಲಿಸುವುದಕ್ಕೆ ಬಿಜೆಪಿ ಕೀಳುಮಟ್ಟದ ರಾಜಕಾರಣ ನಡೆಸುತ್ತಿದೆ. ಕರ್ನಾಟಕದಿಂದ ಬಿಜೆಪಿಯ ಪತನ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.

Intro:Body:

ಐಟಿ ಅಧಿಕಾರಿಗಳು ದೇವರ ಲೋಕದಿಂದ ಇಳಿದು ಬಂದಿಲ್ಲ... ಎಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು:  ಬಿಜೆಪಿಯವರು ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಹರಿಶ್ಚಂದ್ರ ಮಕ್ಕಳಾ.. ಇವರೇನು ದೇವಲೋಕದಿಂದ ಇಳಿದುಬಂದಿದ್ದಾರಾ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ‌ ಖಾರವಾಗಿ ಪ್ರಶ್ನಿಸಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡಿರುವುದು ಸರಿಯಲ್ಲ.. ಬಿಜೆಪಿ ಹಿಂದಿ‌ನ ಐದು ವರ್ಷಗಳ ಆಧಿಕಾರ ಅವಧಿಯಲ್ಲಿ ಕೊಟ್ಯಂತರ ರೂ. ಲೂಟಿ ನಮಗೆ ಗೊತ್ತಿಲ್ಲವೇ ಪ್ರಶ್ನಿಸಿದರು. ಅಲ್ಲದೇ ಐಟಿ ಆಧಿಕಾರಿಗಳೇನು‌ ದೇವಲೋಕದಿಂದ ಇಳಿದು ಬಂದಿಲ್ಲ. ರೈಡ್ ಮಾಡಿ ಅವರು ಕೊಟ್ಯಂತರ ರೂ.ಆಸ್ತಿ ಸಂಪಾದಿಸಿದ್ದಾರೆ ನಮಗೆ ಗೊತ್ತಿಲ್ಲವೇ ಪ್ರಶ್ನಿಸಿದರು.

ಬಿಜೆಪಿ ಐದು ವರ್ಷಗಳ ಅಧಿಕಾರಿ ಅವಧಿಯಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆದಿದ್ದಾರೆ. ಹೀಗಾಗಿ ಪರಿವರ್ತನೆ ರೂಪವಾಗಿ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮನ್ನು ಆರ್ಶೀವಾದ ಮಾಡುವ‌ ಮೂಲಕ ನಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ಸಾಂಕೇತಿಕ ಪ್ರತಿಭಟನೆ ದೇಶದ ಒಕ್ಕೂಟ ಬಲಪಡಿಸುವ ಕೆಲಸ ಇದಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರ ತನಿಖಾ ಸಂಸ್ಥೆಗಳನ್ನೇ ದುರುಪಯೋಗ ಪಡಿಸುವ ಕೆಲಸ ಮಾಡಿವೆ. ಇದೊಂದು ಕೆಟ್ಟ ರೀತಿಯ ಸಂಸ್ಕೃತಿಯನ್ನು ಹುಟ್ಟು ಹಾಕಿದೆ. ಐಟಿ ಇಲಾಖೆಯ ನಿರ್ದೇಶಕರೊಬ್ಬರು ಪ್ರಾಮಾಣಿಕ ಅಧಿಕಾರಿನಾ? ಬಾಂಬೆಯಲ್ಲಿ ಅಕ್ರಮವಾಗಿ ಫ್ಲಾಟ್ ಖರೀದಿಸಿರುವುದು ನಮಗೆ ಗೊತ್ತಿಲ್ಲವೇ.. ಎಂದು ವಾಗ್ದಾಳಿ‌ ನಡೆಸಿದರು.

ಸಾಮಾನ್ಯವಾಗಿ ಐಟಿ ದಾಳಿ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆಯುತ್ತೆ. ಅದರೆ ನಿನ್ನೆ ನಡೆದ ದಾಳಿಯಲ್ಲಿ ಸಿಆರ್ ಪಿಎಫ್ ಪೊಲೀಸರ ಸಹಕಾರದಿಂದ  ದಾಳಿ ರಾಜಕೀಯ ಪ್ರೇರಿತವಾಗಿದೆ

ಇದೇ ಪರಿಸ್ಥಿತಿ ಮುಂದುವರೆದರೆ ಕೇಂದ್ರದ ವಿರುದ್ಧ ಸಂಘರ್ಷ ಉಂಟಾಗುತ್ತದೆ. ದಾಳಿಯಿಂದ ನಾನೇನು ಭಯ ಬೀಳಲ್ಲ. ವಿರೋಧ ಪಕ್ಷಗಳನ್ನು ಸೋಲಿಸುವುದಕ್ಕೆ ಬಿಜೆಪಿ ಕೀಳುಮಟ್ಟದ ರಾಜಕಾರಣ ನಡೆಸುತ್ತಿದೆ. ಕರ್ನಾಟಕಯಿಂದ ಬಿಜೆಪಿಯ ಪತನ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.

Conclusion:
Last Updated : Mar 28, 2019, 6:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.