ಬೆಂಗಳೂರು: ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಾಬು ಜಗಜೀವನ್ ರಾಂ ಪುಣ್ಯತಿಥಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಳೆಯಿಂದ ಕೆಲ ಕಡೆಗಳಲ್ಲಿ ಹಾನಿಯಾಗಿದೆ. ಡಿಸಿಗಳ ಜೊತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ತುರ್ತು ಗಮನ ಹರಿಸಿ ಪರಿಹಾರ ಕಾರ್ಯ ನಡೆಸಲು ಅಗತ್ಯ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣ ವೈಯಕ್ತಿಕ ದ್ವೇಷ. ಇಂದಿನ ಯುವಕರ ಮನಸ್ಥಿತಿಯಿಂದ ಕೆಲವು ಹತ್ಯೆಯಾಗುತ್ತಿದೆ. ಕಾನೂನು ಸುವ್ಯವಸ್ಥೆ ಲೋಪ ಅಲ್ಲ. ಮನಸ್ಥಿತಿಗಳನ್ನು ಸರಿಮಾಡಬೇಕಿದೆ. ಆದರೂ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು: ಕಡಲ್ಕೊರೆತಕ್ಕೆ ಬಟಪಾಡಿ ರಸ್ತೆ ಸಮುದ್ರಪಾಲು, ಮೂಡಬಿದಿರೆಯಲ್ಲಿ ಧರೆ ಕುಸಿತ