ETV Bharat / state

ಹೊಸ ಮಗ್ಗುಲಿಗೆ ಹೊರಳುವುದೇ 'ರಾಜ್ಯ'ಕಾರಣ : ಜನತಾ ಪರಿವಾರ ಒಗ್ಗೂಡಿಸಲು ಇಬ್ರಾಹಿಂ ಗಜ ಪ್ರಸವ ಯತ್ನ! - ಜೆಡಿಎಸ್​ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು

ಈ ಮಧ್ಯೆ ರಾಜಕೀಯವಾಗಿ ಜನತಾ ಪರಿವಾರ ಮೇಲೆದ್ದು ನಿಂತರೆ ಜನಪರ ರಾಜಕಾರಣ ಮಾಡುವ ಇಚ್ಛೆಯಿರುವ ಬಹುತೇಕರಿಗೆ ನೆಲೆ ಸಿಕ್ಕಂತಾಗುತ್ತದೆ ಎಂಬ ಇಬ್ರಾಹಿಂ ಮಾತಿಗೆ ಹಲವರು ಸಹಮತ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ರಾಜ್ಯ ರಾಜಕಾರಣ ಹೊಸ ಮಗ್ಗುಲಿಗೆ ಹೊರಳಿದಂತಾಗಿದೆ..

cm Ibrahim tries  to rivival  janatha parivar
ಹೊಸ ಮಗ್ಗುಲಿಗೆ ಹೊರಳುತ್ತಿರುವ ರಾಜ್ಯ ರಾಜಕಾರಣ
author img

By

Published : Jan 8, 2021, 7:53 PM IST

ಬೆಂಗಳೂರು : ರಾಜ್ಯದಲ್ಲಿ ಜನತಾ ಪರಿವಾರವನ್ನು ಮರಳಿ ಕಟ್ಟುವ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಅವರ ಪ್ರಯತ್ನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಶಾಸಕರು, ಮಾಜಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದು, ಸೂಕ್ತ ಕಾಲದಲ್ಲಿ ಮೂರನೇ ಶಕ್ತಿಯ ಜತೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಮುಂದಾಗಿರುವ ಸಿ ಎಂ ಇಬ್ರಾಹಿಂ ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಶಾಸಕರು, ಮಾಜಿ ಶಾಸಕರನ್ನು ಸಂಪರ್ಕಿಸಿದ್ದು, ಈ ಪೈಕಿ ಹಲವರು ಜನತಾ ಪರಿವಾರವನ್ನು ಕಟ್ಟುವ ಯತ್ನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಜನತಾಪರಿವಾರದಲ್ಲಿದ್ದು ಹೊರಗೆ ಹೋಗಿರುವ ಹಲವರು ಈ ಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ತಮ್ಮ ಜೆಡಿಎಸ್ ಸೇರ್ಪಡೆ ಸಂಬಂಧ ರಾಜ್ಯಾದ್ಯಂತ ಇರುವ ತಮ್ಮ ಬೆಂಬಲಿಗರ ಜತೆ ಮಾತುಕತೆ ನಡೆಸುತ್ತಿರುವ ಸಿ ಎಂ ಇಬ್ರಾಹಿ, ಅದೇ ಕಾಲಕ್ಕೆ ಜನತಾ ಪರಿವಾರವನ್ನು ಒಂದುಗೂಡಿಸುವ ಪ್ರಯತ್ನದ ಕುರಿತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ವಿವರಿಸುತ್ತಲೇ ಇದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಜನತಾ ಪರಿವಾರ ಎದ್ದು ನಿಲ್ಲದಿದ್ದರೆ ಜನ ಭ್ರಮನಿರಸನಗೊಳ್ಳುವ ಸ್ಥಿತಿ ಬರುತ್ತದೆ ಎಂಬ ಇಬ್ರಾಹಿಂ ಮಾತಿಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಡಳಿತರೂಢ ಬಿಜೆಪಿಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಯಶ ಕಾಣುತ್ತಿಲ್ಲ.

ಬದಲಿಗೆ ಅದು ವಿಪಕ್ಷಗಳ ನಾಯಕರನ್ನೇ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಅಡುಗೆ ಅನಿಲದಿಂದ ಹಿಡಿದು ದಿನಬಳಕೆಯ ಎಲ್ಲ ಸಾಮಾಗ್ರಿಗಳ ದರ ಗಗನಕ್ಕೇರಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಯುತ್ತಲೇ ಇಲ್ಲ.

ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ಅಡುಗೆ ಅನಿಲದ ಸಿಲಿಂಡರ್ ಬೆಲೆ 5 ರೂ. ಏರಿದ್ರೂ ದೊಡ್ಡ ಪ್ರತಿಭಟನೆ ನಡೆಯುತ್ತಿತ್ತು. ಈಗ ಸಿಲಿಂಡರ್​ಗೆ 50 ರೂ. ಹೆಚ್ಚಿಸಿದ್ರೂ ಪರಿಣಾಮಕಾರಿ ಹೋರಾಟವೇ ನಡೆಯುತ್ತಿಲ್ಲ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಒಂದೇ ಸಮನೆ ಏರಿಕೆಯಾಗುತ್ತಿದ್ದರೂ ಜನರ ನೋವನ್ನು ಕೇಳುವವರೇ ಇಲ್ಲ. ಪರಿಸ್ಥಿತಿ ಹೇಗಿದೆ ಅಂದರೆ ಜನತಾಪರಿವಾರ ಮೇಲೆದ್ದು ನಿಲ್ಲದಿದ್ದರೆ ಸರ್ಕಾರಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗುತ್ತದೆ.

ಈ ಮಧ್ಯೆ ರಾಜಕೀಯವಾಗಿ ಜನತಾ ಪರಿವಾರ ಮೇಲೆದ್ದು ನಿಂತರೆ ಜನಪರ ರಾಜಕಾರಣ ಮಾಡುವ ಇಚ್ಛೆಯಿರುವ ಬಹುತೇಕರಿಗೆ ನೆಲೆ ಸಿಕ್ಕಂತಾಗುತ್ತದೆ ಎಂಬ ಇಬ್ರಾಹಿಂ ಮಾತಿಗೆ ಹಲವರು ಸಹಮತ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ರಾಜ್ಯ ರಾಜಕಾರಣ ಹೊಸ ಮಗ್ಗುಲಿಗೆ ಹೊರಳಿದಂತಾಗಿದೆ.

ಉನ್ನತ ಮೂಲಗಳ ಪ್ರಕಾರ, ರಾಜ್ಯದಲ್ಲಿ ಜನತಾ ಪರಿವಾರವನ್ನು ಮರಳಿ ಕಟ್ಟಬೇಕೆಂಬ ಪ್ರಯತ್ನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್​ನ ಕೆಲ ಶಾಸಕರು ಸೇರಿದಂತೆ ನಲವತ್ತಕ್ಕೂ ಹೆಚ್ಚು ಮಂದಿ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ.

ಈ ಪೈಕಿ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯ ಅಂಕುಶವಿರುವುದರಿಂದ ಸೂಕ್ತ ಕಾಲದಲ್ಲಿ ಜನತಾ ಪರಿವಾರದ ಜತೆ ಕೈ ಜೋಡಿಸುವುದಾಗಿ ಹೇಳಿದ್ದು, ಉಳಿದಂತೆ ಹಲವರು ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ಸೇರ್ಪಡೆ ಆಗುವ ಕಾಲದಲ್ಲಿ ಜತೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ 'ಸಂಕಲ್ಪ' ಯಾತ್ರೆ : ಡಿಕೆಶಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.