ETV Bharat / state

ಪೊಲೀಸ್ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಗೆ ಸಿಎಂ ಭರವಸೆ: ರವಿಕುಮಾರ್ - ಪೊಲೀಸ್ ಪೇದೆಗಳ ನೇಮಕಾತಿ

ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿ
author img

By

Published : Oct 31, 2019, 10:52 PM IST

ಬೆಂಗಳೂರು: ಎಸ್​ಐ ಮತ್ತು ಪೊಲೀಸ್ ಪೇದೆಗಳ ನೇಮಕಾತಿ ವಯೋಮಾನ ಸಡಿಲಿಕೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ 16 ಸಾವಿರ ಎಸ್​ಐ ಮತ್ತು ಪೊಲೀಸ್ ಪೇದೆಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಈ ಸಂಬಂಧ ಬಿಜೆಪಿ ನಿಯೋಗ ಸಿಎಂ‌ ಮತ್ತು ಗೃಹ ಸಚಿವರಿಗೆ ಭೇಟಿ ಮಾಡಿ ವಯೋಮಿತಿ ಸಡಿಲಿಕೆ ಮಾಡಲು ಮನವಿ ಸಲ್ಲಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೆ ಬೇರೆ ಬೇರೆ ವಯೋಮಿತಿ‌ ನಿಗದಿ ಇದೆ. ನಮ್ಮ ರಾಜ್ಯದಲ್ಲಿ ಸಾಮಾನ್ಯ ವರ್ಗಕ್ಕೆ 25, ಒಬಿಸಿ - 27, ಎಸ್ಸಿ ಎಸ್ಟಿ ವರ್ಗಕ್ಕೆ 27 ವಯೋಮಿತಿ‌ ಇದೆ ‌ಹೀಗಾಗಿ ವಯೋಮಿತಿ ಹೆಚ್ಚಳ ಮಾಡಲು ನಮ್ಮ ನಿಯೋಗ ಮನವಿ ಮಾಡಿಕೊಂಡಿದೆ. ಸಾಮಾನ್ಯ 28, ಒಬಿಸಿ ಮತ್ತು ಎಸ್ಸಿ ಎಸ್ಟಿ ವರ್ಗಗಳಿಗೆ 33 ವರ್ಷ ವಯೋಮಿತಿ ನಿಗದಿಗೆ ಮನವಿ ಮಾಡಿದ್ದು, ವಯೋಮಿತಿ ಹೆಚ್ಚಳಕ್ಕೆ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.

ಟಿಪ್ಪು‌ ಜಯಂತಿ, ಪಠ್ಯ ಕುರಿತ ವಿವಾದ ಕುರಿತು ಪ್ರತಿಕ್ರಿಯಿಸಿದ ರವಿಕುಮಾರ್ ಅವರು, ಟಿಪ್ಪು ಓರ್ವ ಮತಾಂಧ, ಕ್ರೂರಿ, ಕೇರಳ, ಕೊಡಗು ಕಡೆಗಳಲ್ಲಿ ಟಿಪ್ಪು ಜಯಂತಿಗೆ ವಿರೋಧ ಇದೆ. ಆದರೂ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಿಸಿಕೊಂಡು ಬಂದಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಇದೆ. ಹಾಗಾಗಿ ಟಿಪ್ಪು ಜಯಂತಿ ರದ್ದಾಗಿದೆ. ಈ ಸಂಬಂಧ ಸಿಎಂ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ರವಿಕುಮಾರ್ ಹೇಳಿದರು.

ಸಿದ್ದುಗೆ ಸಾವರ್ಕರ್ ಪುಸ್ತಕ ರವಾನೆ: ಮಹಾತ್ಮ ಗಾಂಧಿ ಹತ್ಯೆಯಲ್ಲಿ ವೀರ ಸಾವರ್ಕರ್ ಕೈವಾಡವಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯಗೆ ಸಾವರ್ಕರ್ ಕುರಿತ ಪುಸ್ತಕ ಕಳಿಸಿಕೊಡುತ್ತಿದ್ದೇನೆ ಎಂದು ಆತ್ಮಾಹುತಿ‌ ಹೆಸರಿನ ಪುಸ್ತಕವನ್ನು ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡಿದ ರವಿಕುಮಾರ್ ನಂತರ ಪೋಸ್ಟ್ ಮೂಲಕ‌ ಸಿದ್ದರಾಮಯ್ಯಗೆ ಕಳುಹಿಸಿಕೊಟ್ಟರು.

Intro:

ಬೆಂಗಳೂರು:ಎಸ್ ಐ ಮತ್ತು ಪೊಲೀಸ್ ಪೇದೆಗಳ ನೇಮಕಾತಿ ವಯೋಮಾನ ಸಡಿಲಿಕೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ 16 ಸಾವಿರ ಎಸ್ ಐ ಮತ್ತು ಪೊಲೀಸ್ ಪೇದೆಗಳ ನೇಮಾಕಾತಿ ಮಾಡಿಕೊಳ್ಳಲಿದೆ ಈ ಸಂಬಂಧ ಬಿಜೆಪಿ ನಿಯೋಗ ಸಿಎಂ‌ ಮತ್ತು ಗೃಹ ಸಚಿವರಿಗೆ ಭೇಟಿ ಮಾಡಿ ವಯೋಮಿತಿ ಸಡಿಲಿಕೆ ಮಾಡಲು ಮನವಿ ಸಲ್ಲಿಸಿದೆ ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೆ ಬೇರೆ ಬೇರೆ ವಯೋಮಿತಿ‌ ನಿಗದಿ ಇದೆ ಬೇರೆ ಬೇರೆ ವರ್ಗಗಳಿಗೆ‌ ಬೇರೆ ಬೇರೆ ವಯೋಮಿತಿ ಇದೆ ನಮ್ಮ‌ ರಾಜ್ಯದಲ್ಲಿ ಸಾಮಾನ್ಯ - 25, ಒಬಿಸಿ - 27, ಎಸ್ಸಿ ಎಸ್ಟಿ ವರ್ಗಕ್ಕೆ 27 ವಯೋಮಿತಿ‌ ಇದೆ ‌ಹೀಗಾಗಿ ವಯೋಮಿತಿ ಹೆಚ್ವಳ ಮಾಡಿಕೊಳ್ಳಲು ನಮ್ಮ ನಿಯೋಗ ಮನವಿ ಮಾಡಿಕೊಂಡಿದೆ ಸಾಮಾನ್ಯ-28, ಒಬಿಸಿ ಮತ್ತು ಎಸ್ಸಿ ಎಸ್ಟಿ ವರ್ಗಗಳಿಗೆ 33 ವರ್ಷ ವಯೋಮಿತಿ ನಿಗದಿಗೆ ಮನವಿ ಮಾಡಿದ್ದು, ವಯೋಮಿತಿ ಹೆಚ್ಚಳಕ್ಕೆ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.

ಟಿಪ್ಪು ವಿಷಯ ಪಠ್ಯದಿಂದ ತೆಗೆಯುವುದು ಸ್ವಾಗತಾರ್ಹ:

ಟಿಪ್ಪು‌ಜಯಂತಿ, ಪಠ್ಯ ಕುರಿತ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್ ಟಿಪ್ಪು ಒಬ್ಬ ಮತಾಂಧ, ಕ್ರೂರಿ, ಕೇರಳ, ಕೊಡಗು ಕಡೆಗಳಲ್ಲಿ ಟಿಪ್ಪು ಜಯಂತಿಗೆ ವಿರೋಧ ಇದೆ ಆದರೂ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಣೆ ಮಾಡಿಕೊಂಡು ಬಂದಿತ್ತು ಆದರೆ ಈಗ ಬಿಜೆಪಿ ಸರ್ಕಾರ ಇದೆ ಹಾಗಾಗಿ ಟಿಪ್ಪು ಜಯಂತಿ ರದ್ದಾಗಿದೆ ಈ ಸಂಬಂಧ ಸಿಎಂ ನಿರ್ಧಾರ ಸ್ವಾಗತಾರ್ಹ ಎಂದರು.

ಟಿಪ್ಪು ಕುರಿತ ಪಠ್ಯಗಳನ್ನೂ ತೆಗೆಯುವುದು ಸೂಕ್ತ ಇತಿಹಾಸದಲ್ಲಿ ಟಿಪ್ಪು ಕುರಿತ ಪಠ್ಯ ಇರಬಾರದು ಕಾಂಗ್ರೆಸ್ ನಾಯಕರು ನಿಜವಾದ ಇತಿಹಾಸ ಓದಿಕೊಳ್ಳಲಿ ಕಾಂಗ್ರೆಸ್ ನವರು ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನವರು ತುಷ್ಟೀಕರಣ ನೀತಿ ಅನುಸರಿಸ್ತಿದ್ದಾರೆ ಟಿಪ್ಪು ನಿಜವಾದ ಮನಸ್ಸಿಂದ ದೇವಸ್ಥಾನಗಳಿಗೆ ನೆರವು ಕೊಟ್ಟಿಲ್ಲ ಕಾಂಗ್ರೆಸ್ ನವರು ವಾಸ್ತವ ಅರ್ಥ ಮಾಡಿಕೊಳ್ಳುವುದು ಒಳಿತು ಎಂದು ಕೈ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಸಿದ್ದುಗೆ ಸಾವರ್ಕರ್ ಪುಸ್ತಕ ರವಾನೆ:

ವೀರ ಸಾವರ್ಕರ್ ಮಹಾತ್ಮ ಗಾಂಧಿ ಕೊಂದವನು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ ಈ ಹಿನ್ನೆಲೆ ಸಿದ್ದರಾಮಯ್ಯಗೆ ಸಾವರ್ಕರ್ ಕುರಿತ ಪುಸ್ತಕ ಕಳಿಸಿಕೊಡುತ್ತಿದ್ದೇನೆ ಎಂದು ಆತ್ಮಾಹುತಿ‌ ಹೆಸರಿನ ಪುಸ್ತಕವನ್ನು ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡಿದ ರವಿಕುಮಾರ್ ನಂತರ ಪೋಸ್ಟ್ ಮೂಲಕ‌ ಸಿದ್ದರಾಮಯ್ಯಗೆ ಸಾವರ್ಕರ್ ಪುಸ್ತಕ ಕಳುಹಿಸಿಕೊಟ್ಟರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.