ETV Bharat / state

7 ರಿಂದ 8 ಜನ ಸಂಪುಟಕ್ಕೆ ಸೇರಿಕೊಳ್ಳುತ್ತಿದ್ದಾರೆ, ಅವರಿಗೆಲ್ಲರಿಗೂ ತಿಳಿಸಿದ್ದೇನೆ: ಸಿಎಂ - cabinet expansion updates

cm-bsy-statement-on-cabinet-expansion
ಸಿಎಂ ಬಿಎಸ್​ವೈ
author img

By

Published : Jan 12, 2021, 5:00 PM IST

Updated : Jan 12, 2021, 5:29 PM IST

16:57 January 12

ನಾಳೆ 7 ರಿಂದ 8 ಜನ ಸಚಿವ ಸಂಪುಟಕ್ಕೆ ಸೇರಿಕೊಳ್ಳುತ್ತಿದ್ದಾರೆ. ಅವರಿಗೆಲ್ಲರಿಗೂ ಈ ಕುರಿತು ತಿಳಿಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ಬಿಎಸ್​ವೈ ಹೇಳಿಕೆ

ಬೆಂಗಳೂರು: ಸಚಿವ ಸಂಪುಟಕ್ಕೆ 7 ರಿಂದ 8 ಜನ ಶಾಸಕರು ಸೇರುವುದು ಪಕ್ಕಾ ಆಗಿದ್ದು, ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಮೊದಲು 7 - 8 ಜನ ಸಂಪುಟಕ್ಕೆ ಸೇರುತ್ತಾರೆ. ನಾಳೆ ಮಧ್ಯಾಹ್ನ 3.30 ಕ್ಕೆ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನಕ್ಕೆ ನಾಳೆ ಮಧ್ಯಾಹ್ನ 3.30 ಕ್ಕೆ ಬರಲು ಆ ಶಾಸಕರಿಗೆ ಸೂಚನೆ ಕೊಟ್ಟಿದ್ದೇನೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಪಟ್ಟಿ ಬಿಡುಗಡೆ ಆಗುತ್ತೆ ಎಂದರು.  

ಇದನ್ನೂ ಓದಿ:ನಾಳೆ ಸಂಪುಟ ವಿಸ್ತರಣೆ: ಕೆಲವರಿಗೆ ಕೋಕ್ ನೀಡಿ ಸ್ಥಾನ ಖಾಲಿ ಉಳಿಸಿಕೊಳ್ಳಲು ಸಿಎಂ‌ ಚಿಂತನೆ!?

Last Updated : Jan 12, 2021, 5:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.