ETV Bharat / state

ಅವಿಶ್ವಾಸ ನಿರ್ಣಯದ ಮೂಲಕ ನನಗೆ ಪ್ರತಿಪಕ್ಷದವರು ವಿಶ್ವಾಸ ಮೂಡಿಸುತ್ತಿದ್ದಾರೆ: ಸಿಎಂ ತಿರುಗೇಟು

ವಿಧಾನಸೌಧಲ್ಲಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ, ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್​​ನವರು ಹೀಗೆ ಅವಿಶ್ವಾಸ ನಿರ್ಣಯ ಕೈಗೊಳ್ಳುತ್ತಿರಲಿ. ಹೀಗೆ ಮಾಡೋದರಿಂದ ನನಗೆ ಆರು ತಿಂಗಳ ಕಾಲ ಹೆಚ್ಚು ವಿಶ್ವಾಸ ಬರುತ್ತದೆ ಎಂದು ತಿರುಗೇಟು ನೀಡಿದ್ದಾರೆ.

CM BSY reaction on congress decision
ಅವಿಶ್ವಾಸ ನಿರ್ಣಯ ಮೂಲಕ ನನಗೆ ವಿಶ್ವಾಸ ಮೂಡಿಸುತ್ತಿದ್ದಾರೆ: ಸಿಎಂ ಬಿಎಸ್​ವೈ ತಿರುಗೇಟು
author img

By

Published : Sep 25, 2020, 12:17 PM IST

Updated : Sep 25, 2020, 12:25 PM IST

ಬೆಂಗಳೂರು: ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್​​ನವರು ಹೀಗೆ ಅವಿಶ್ವಾಸ ನಿರ್ಣಯ ಕೈಗೊಳ್ಳುತ್ತಿರಲಿ. ಹೀಗೆ ಮಾಡೋದರಿಂದ ನನಗೆ ಆರು ತಿಂಗಳ ಕಾಲ ಹೆಚ್ಚು ವಿಶ್ವಾಸ ಬರುತ್ತದೆ ಎನ್ನುವ ಮೂಲಕ ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಪ್ರತಿಪಕ್ಷ ಕಾಂಗ್ರೆಸ್​ಗೆ​ ತಿರುಗೇಟು ನೀಡಿದ್ದಾರೆ.

ಸಿಎಂ ಬಿಎಸ್​​ ಯಡಿಯೂರಪ್ಪ

ವಿಧಾನಸೌಧಲ್ಲಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಕಾಂಗ್ರೆಸ್​ ನಾಯಕರು ಮಾಡುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್!

ರೈತರ ಹೋರಾಟ ವಿಚಾರವಾಗಿ ಮಾತನಾಡಿದ ಸಿಎಂ, ಇಂದು ರೈತರನ್ನು ಕರೆದು ಅವರ ಜೊತೆ ಚರ್ಚೆ ಮಾಡುತ್ತೇನೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ತೊಂದರೆಯಾಗುವುದಿಲ್ಲ. ನೀರಾವರಿ ಜಮೀನು ಖರೀದಿ ಮಾಡಿದವರು ಅದನ್ನು ನೀರಾವರಿಗೆ ಬಳಸಬೇಕು ಅಂತಾ ಷರತ್ತು ಹಾಕಿದ್ದೇವೆ. ಕೈಗಾರಿಕೆಗಳಿಗೋಸ್ಕರ ನಮ್ಮ ರಾಜ್ಯದಲ್ಲಿ ಬಳಸಿರೋದು ಕೇವಲ ಶೇ.2 ರಷ್ಟು ಜಮೀನು ಮಾತ್ರ ಎಂದು ಸ್ಪಷ್ಟಪಡಿಸಿದರು.

Last Updated : Sep 25, 2020, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.