ETV Bharat / state

ಸಂಜೆ 5 ಗಂಟೆಗೆ ಸಿಎಂ ಬಿಎಸ್​ವೈ ಸುದ್ದಿಗೋಷ್ಠಿ: 2ನೇ ಪ್ಯಾಕೇಜ್ ಘೋಷಿಸುವ ಸಾಧ್ಯತೆ - ಕೋವಿಡ್ ಪ್ಯಾಕೇಜ್

ಇಂದು ಸಂಜೆ ಸಿಎಂ ಬಿಎಸ್​ವೈ ಸುದ್ದಿಗೋಷ್ಠಿ ಕರೆದಿದ್ದು, ಲಾಕ್​ಡೌನ್​ ವಿಸ್ತರಣೆ ಮತ್ತು ವಿಶೇಷ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

CM BSY Press meet
ಸಿಎಂ ಬಿಎಸ್​ವೈ ಸುದ್ದಿಗೋಷ್ಠಿ
author img

By

Published : Jun 3, 2021, 1:07 PM IST

ಬೆಂಗಳೂರು: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆಲ ವರ್ಗಗಳಿಗೆ ಮತ್ತೊಂದು ಆರ್ಥಿಕ ಪ್ಯಾಕೇಜ್ ಇಂದು ಸಂಜೆ ಘೋಷಣೆಯಾಗಲಿದೆ. ಎರಡನೇ ಪ್ಯಾಕೇಜ್​ಅನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮೇ ತಿಂಗಳಲ್ಲಿ ಲಾಕ್​ಡೌನ್ ಜಾರಿ ಮಾಡಿದ ಬಳಿಕ 1,200 ಕೋಟಿ ರೂ.ಗಳ ಮೊದಲ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಚಾಲಕರು, ಕಾರ್ಮಿಕರು, ಹೂವು ಬೆಳೆಗಾರರು ಸೇರಿದಂತೆ ಹಲವು ವರ್ಗದ ಜನರಿಗೆ ಈ ಪ್ಯಾಕೇಜ್​ನಲ್ಲಿ ಸಹಾಯಧನ ನೀಡಲಾಗಿದೆ. ಇಂದು ಎರಡನೇ ಪ್ಯಾಕೇಜ್ ಘೋಷಣೆಯಾಗಲಿದೆ. ಸುಮಾರು 500-600 ಕೋಟಿ ರೂ. ಮೊತ್ತದ ಪ್ಯಾಕೇಜ್ ಸಿಎಂ ಪ್ರಕಟಿಸುವ ಸಾಧ್ಯತೆಯಿದೆ.

ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸುದ್ದಿಗೋಷ್ಠಿ ಕರೆದಿದ್ದು, ಅಲ್ಲಿ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ. ಲಾಕ್​ಡೌನ್ ವಿಸ್ತರಣೆ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.