ETV Bharat / state

6 ಗಂಟೆಗಳ ಕಾಲ ಮಹಾ ಸಿಎಂ ಜೊತೆ ಬಿಎಸ್​ವೈ ಚರ್ಚೆ.. ಕುತೂಹಲ ಮೂಡಿಸಿದೆ ನಾಳಿನ ಮೀಟಿಂಗ್​! - ಬಿಎಸ್​ವೈ

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಹ್ವಾನದ ಮೇರೆಗೆ ನಾಳೆ‌ ಮಹಾರಾಷ್ಟ್ರಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿ, ಅವರ ಮನೆಯ ಗಣೇಶ ಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಪ್ರವಾಹ ಪರಿಸ್ಥಿತಿ ಹಾಗೂ ಇತರೆ ರಾಜಕೀಯ ವಿಚಾರಗಳನ್ನೂ ಚರ್ಚಿಸಲಿದ್ದಾರೆ.

ಸಿಎಂ ಬಿಎಸ್​ವೈ
author img

By

Published : Sep 2, 2019, 5:13 PM IST

Updated : Sep 2, 2019, 10:56 PM IST

ಬೆಂಗಳೂರು: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಹ್ವಾನದ ಮೇರೆಗೆ ನಾಳೆ‌ ಮಹಾರಾಷ್ಟ್ರಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಮಹಾ ಸಿಎಂ ನಿವಾಸದಲ್ಲಿ ನಡೆಯಲಿರುವ ಗಣಪತಿ ಹಬ್ಬದಲ್ಲಿ ಭಾಗಿಯಾಗುತ್ತಿದ್ದಾರೆ.

ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಆಹ್ವಾನ ಪರಿಗಣಿಸಿ ಫಡ್ನವೀಸ್ ನಿವಾಸಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಬಿಎಸ್​ವೈ ಭಾಗಿಯಾಗುತ್ತಿದ್ದಾರೆ. ಸಿಎಂ ಮಹರಾಷ್ಟ್ರ ಪ್ರವಾಸಕ್ಕೆ ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ‌ ಸಾಥ್ ನೀಡಲಿದ್ದಾರೆ.

letter
ನಾಳಿನ ಸಿಎಂ ಪ್ರವಾಸದ ವಿವರ

ನಾಳೆ ಬೆಳಗ್ಗೆ 8.50 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಬೆಳಗ್ಗೆ 10.40 ಕ್ಕೆ ಮುಂಬೈ ತಲುಪಲಿರುವ ಸಿಎಂ ನೇರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿವಾಸಕ್ಕೆ ತೆರಳಲಿದ್ದಾರೆ. ಮಹಾ ಸಿಎಂ ನಿವಾಸದಲ್ಲಿ ಗಣಪತಿ‌ ಹಬ್ಬದಲ್ಲಿ ಭಾಗಿಯಾಗಿ ಸಂಜೆವರೆಗೂ ಅಲ್ಲಿಯೇ ಇರಲಿದ್ದಾರೆ. ಸಂಜೆ 5.25 ರ ವಿಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ‌ ಹೊರಟು ಸಂಜೆ 7.15 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೂ ಹೆಚ್ಚು ಕಡಿಮೆ‌ 6 ಗಂಟೆಗಳ ಕಾಲ ಮಹಾರಾಷ್ಟ್ರ ಸಿಎಂ ಜೊತೆ ಯಡಿಯೂರಪ್ಪ ಇರಲಿದ್ದು ಇಷ್ಟೊಂದು ದೀರ್ಘಾವದಿ ಸಮಯದಲ್ಲಿ ಈ ವೇಳೆ ಏನೆಲ್ಲಾ ಚರ್ಚೆ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ. ಮಹಾದಾಯಿ ವಿವಾದ, ಕೋಯ್ನಾ ಜಲಾಶಯದಿಂದ ಏಕಾಏಕಿ ನೀರು ಹರಿಸುತ್ತಿರುವ ವಿಷಯ, ಪ್ರವಾಹ ಪರಿಸ್ಥಿತಿ ಜೊತೆಗೆ ರಾಜಕೀಯ ವಿಷಯ ಕೂಡ ಚರ್ಚೆಗೆ ಬರಲಿದೆ. ಹಬ್ಬಕ್ಕೆ ತೆರಳುತ್ತಿರುವ ಸಿಎಂ ಬರುವಾಗ ಏ‌ನೆಲ್ಲಾ ಸುದ್ದಿ ತರಲಿದ್ದಾರೆ ಎನ್ನುವ ಕೌತುಕ ಮನೆ ಮಾಡಿದೆ.

Intro:

ಬೆಂಗಳೂರು:ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಹ್ವಾನದ ಮೇರೆಗೆ ನಾಳೆ‌ ಮಹಾರಾಷ್ಟ್ರಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡುತ್ತಿದ್ದ ಮಹಾ ಸಿಎಂ ನಿವಾಸದಲ್ಲಿ ನಡೆಯಲಿರುವ ಗಣಪತಿ ಹಬ್ಬದಲ್ಲಿ ಭಾಗಿಯಾಗುತ್ತಿದ್ದಾರೆ.

ದೇವೇಂದ್ರ ಪಡ್ನವೀಸ್ ನಿವಾಸದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಆಹ್ವಾನ ಪರಿಗಣಿಸಿ ಪಡ್ನವೀಸ್ ನಿವಾಸಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಬಿಎಸ್ ವೈ ಭಾಗಿಯಾಗುತ್ತಿದ್ದು,ಸಿಎಂ ಬಿಎಸ್ ವೈ ಮಹರಾಷ್ಟ್ರ ಪ್ರವಾಸಕ್ಕೆ ಡಿಸಿಎಂ ಡಾ.ಅಶ್ವಥನಾರಾಯಣ‌ ಸಾಥ್ ನೀಡಲಿದ್ದಾರೆ.

ಪ್ರವಾಹ ಪರಿಸ್ಥಿತಿ, ಇತರೇ ರಾಜಕೀಯ ವಿಚಾರಗಳನ್ನು ಚರ್ಚಿಸಲಿರುವ ಸಿಎಂ ಯಡಿಯೂರಪ್ಪ ಕೊಯ್ನಾ ಜಲಾಶಯದಿಂದ ದಿಢೀರ್ ಕೃಷ್ಣಾ ನದಿಗೆ ನೀರು ಹರಿಸಿದ ವಿಚಾರವೂ ಪ್ರಸ್ತಾಪಿಸಲಿದ್ದಾರೆ. ಸಿಎಂ ಮುಂದಿನ ಸಲ ಕೋಯ್ನಾದಿಂದ ನೀರು ಹರಿಸುವ ಮುನ್ನ ಮುನ್ಸೂಚನೆ ಕೊಡುವ ಬಗ್ಗೆಯೂ ಮನವಿ ಮಾಡಲಿದ್ದಾರೆ.
Body:.Conclusion:
Last Updated : Sep 2, 2019, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.