ಬೆಂಗಳೂರು: ಇಸ್ರೇಲ್ನ ಎಂಎಜೆಡ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅಕಿಬಾ ಪೆನ್ಕರ್ ಹಾಗೂ ಸಿಂಬಾ ಗ್ರೂಪ್ ಸಂಸ್ಥೆಯ ನಿರ್ವಹಣಾ ಪಾಲುದಾರರಾದ ಅಮಿ ಮೆಸಿಕಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದರು.
ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಇಸ್ರೇಲ್ ಕಂಪನಿಗಳ ಪ್ರತಿನಿಧಿಗಳು ಪಿಆರ್ಆರ್ (ಪೆರಿಫೆರಲ್ ರಿಂಗ್ ರೋಡ್) ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಈ ವೇಳೆ ಅಕಿಬಾ ಹಾಗೂ ಅಮಿ ಮೆಸಿಕಾ ಅವರೊಂದಿಗೆ ಸಿಎಂ ಆತ್ಮೀಯವಾಗಿ ಸಂಭಾಷಣೆ ನಡೆಸಿದರು. ಸರ್ಕಾರದಿಂದ ಅಗತ್ಯ ಸಹಕಾರದ ಅಭಯ ನೀಡಿದರು.
ಇದನ್ನೂ ಓದಿ: ನೂತನ ಶಿಕ್ಷಣ ನೀತಿ ಕಾರ್ಯರೂಪಕ್ಕೆ ತರಲು ಕಮಿಟಿ ರಚನೆ