ETV Bharat / state

ವರಿಷ್ಠರು ಸಮಯ ನೀಡ್ತಿದ್ದಂತೆ ದೆಹಲಿಗೆ ಸಿಎಂ.. ಒಪ್ಪಿಗೆ ಸಿಕ್ರೇ ಸಂಪುಟಕ್ಕೆ ಮುಹೂರ್ತ - cabinete Expansion Date

ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಆರ್​​ಆರ್​​ ನಗರ ಹಾಗೂ ಶಿರಾ ಉಪ ಚುನಾವಣೆ ಘೋಷಣೆಯಾಗಿದೆ. ಆರ್​​ಆರ್​​ ನಗರದಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ಟಿಕೆಟ್​​ಗೆ ಪೈಪೋಟಿ ಇದೆ..

CM BS Yedyyurappa talks on Cabinet extension
ಸಿಎಂ ಬಿಎಸ್​ ಯಡಿಯೂರಪ್ಪ
author img

By

Published : Sep 30, 2020, 4:38 PM IST

ಬೆಂಗಳೂರು : ಇನ್ನೆರಡು ಅಥವಾ ಮೂರು ದಿನದಲ್ಲಿ ಹೈಕಮಾಂಡ್ ನಾಯಕರನ್ನು ಸಂಪರ್ಕಿಸಿ ಸಮಯಾವಕಾಶ ಕೋರಲಿದ್ದೇನೆ. ವರಿಷ್ಠರ ಸಮ್ಮತಿ ಸಿಗುತ್ತಿದ್ದಂತೆ ಸಂಪುಟ ವಿಸ್ತರಣೆ ಕುರಿತ ಚರ್ಚೆಗೆ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಎರಡ್ಮೂರು ದಿನದಲ್ಲಿ ನಮ್ಮ ನಾಯಕರನ್ನು ಸಂಪರ್ಕಿಸಿ ಭೇಟಿಗೆ ಸಮಯಾವಕಾಶ ಕೋರಲಿದ್ದೇನೆ. ಸಂಪುಟ ವಿಸ್ತರಣೆ ಸೇರಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ಮಾಡಬೇಕಿದೆ. ಕೇಂದ್ರದ ನಾಯಕರು ಯಾವಾಗ ಸಮಯಾವಕಾಶ ನೀಡಲಿದ್ದಾರೋ ಆಗ ದೆಹಲಿಗೆ ತೆರಳಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಂಪುಟ ವಿಸ್ತರಣೆ ಕುರಿತು ಸಿಎಂ ಬಿಎಸ್​ವೈ ಪ್ರತಿಕ್ರಿಯೆ

ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಆರ್​​ಆರ್​​ ನಗರ ಹಾಗೂ ಶಿರಾ ಉಪ ಚುನಾವಣೆ ಘೋಷಣೆಯಾಗಿದೆ. ಆರ್​​ಆರ್​​ ನಗರದಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ಟಿಕೆಟ್​​ಗೆ ಪೈಪೋಟಿ ಇದೆ. ಅವರನ್ನೆಲ್ಲಾ ಕರೆದು ಮಾತನಾಡುತ್ತೇನೆ, ಎಲ್ಲವನ್ನೂ ಸರಿಪಡಿಸಲಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.