ETV Bharat / state

ಕೊರೊನಾ ನಂತರ ತವರು ಜಿಲ್ಲೆಗೆ ಸಿಎಂ ಮೊದಲ ಭೇಟಿ: ಸೆ. 2ರಂದು ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ - ಭದ್ರೆಗೆ ಬಾಗಿನ

ಕೊರೊನಾ ಕಾಣಿಸಿಕೊಂಡ ನಂತರ ತವರು ಜಿಲ್ಲೆ ಶಿವಮೊಗ್ಗಕ್ಕೆ ಸೆ. 2ರಂದು ಸಿಎಂ ಇದೇ ಮೊದಲ ಬಾರಿಗೆ ತೆರಳುತ್ತಿದ್ದಾರೆ. ಭರ್ತಿಯಾಗಿರುವ ಭದ್ರೆಯ ಒಡಲಿಗೆ ಬಾಗಿನ ಅರ್ಪಿಸಲಿರುವ ಸಿಎಂ ಅಂದು 1.45ಕ್ಕೆ ಭದ್ರಾ ಜಲಾಶಯದಿಂದ ನಿರ್ಗಮಿಸಲಿದ್ದು, ಇತರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

CM BS Yeduyurappa go to Shimoga
ಕೊರೊನಾ ನಂತರ ತವರು ಜಿಲ್ಲೆಗೆ ಸಿಎಂ ಮೊದಲ ಭೇಟಿ
author img

By

Published : Aug 31, 2020, 8:52 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ತವರು ಜಿಲ್ಲೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಭರ್ತಿಯಾಗಿರುವ ಭದ್ರೆಗೆ ಬಾಗಿನ ಅರ್ಪಿಸಲಿದ್ದಾರೆ.

ತವರು ಜಿಲ್ಲೆ ಶಿವಮೊಗ್ಗಕ್ಕೆ ಸೆ. 2ರಂದು ಸಿಎಂ ತೆರಳುತ್ತಿದ್ದಾರೆ. ಅಂದು 11 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 12.15ಕ್ಕೆ ಲಕ್ಕವಳ್ಳಿಯ ಭದ್ರಾ ಜಲಾಶಯದ ಹೆಲಿಪ್ಯಾಡ್​​ಗೆ ಬಂದಿಳಿಯಲಿದ್ದಾರೆ. ಭರ್ತಿಯಾಗಿರುವ ಭದ್ರೆಯ ಒಡಲಿಗೆ ಬಾಗಿನ ಅರ್ಪಿಸಲಿರುವ ಸಿಎಂ 1.45ಕ್ಕೆ ಭದ್ರಾ ಜಲಾಶಯದಿಂದ ನಿರ್ಗಮಿಸಲಿದ್ದು, ಇತರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿಗೆ ಆನ್​ಲೈನ್ ಮೂಲಕ ಗೃಹ ಕಚೇರಿ ಕೃಷ್ಣಾದಿಂದಲೇ ಚಾಲನೆ ನೀಡಿದ್ದ ಸಿಎಂ, ಇತರ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೂ ಹೋಗಲು ಸಾಧ್ಯವಾಗಿರಲಿಲ್ಲ. ಇದೀಗ 6 ತಿಂಗಳ ನಂತರ ತವರು ಜಿಲ್ಲೆಗೆ ಸಿಎಂ ತೆರಳುತ್ತಿದ್ದು, ಸಿಎಂ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.