ETV Bharat / state

ಯಾರಿಗೆ ಯಾವ ಖಾತೆ? ರಾಜಭವನಕ್ಕೆ ಸಚಿವರ ಪಟ್ಟಿ ರವಾನೆ! - ರಾಜ್ಯ ಸಚಿವ ಸಂಪುಟ

ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ರಾಜ್ಯಪಾಲರಿಗೆ ಪಟ್ಟಿ ರವಾನೆ ಆಗಿದೆ.

CM BS Yediyurappa cabinet
CM BS Yediyurappa cabinet
author img

By

Published : Jan 21, 2021, 5:27 AM IST

Updated : Jan 21, 2021, 8:45 AM IST

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಡಲಾಗಿದ್ದು, ಕೆಲ ಸಚಿವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದುಬಂದಿದೆ..

ನೂತನ ಸಚಿವರ ಖಾತೆ:

ಆನಂದ್ ಸಿಂಗ್ - ಸಣ್ಣನೀರಾವರಿ
ಉಮೇಶ್ ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಸರಬರಾಜು
ಎಸ್ ಅಂಗಾರ - ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
ಅರವಿಂದ ಲಿಂಬಾವಳಿ- ಅರಣ್ಯ ಇಲಾಖೆ
ಮುರುಗೇಶ್ ನಿರಾಣಿ - ಗಣಿ ಮತ್ತು ಭೂವಿಜ್ಞಾನ
ಎಂಟಿಬಿ ನಾಗರಾಜ್ -ಅಬಕಾರಿ ಇಲಾಖೆ
ಆರ್ ಶಂಕರ್ - ಪೌರಾಡಳಿತ ಇಲಾಖೆ

ಓದಿ:'ಜೂನ್'ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟ

ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿದ್ದ ಬಿಎಸ್​ವೈ ಖಾತೆ ಹಂಚಿಕೆ ವಿಚಾರವಾಗಿ ಎಲ್ಲವೂ ರೆಡಿ ಇದೆ. ಬೆಳಿಗ್ಗೆ 8 ಗಂಟೆಯೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ನಿನ್ನೆ ತಿಳಿಸಿದ್ದರು. ವಿಧಾನಸೌಧದಲ್ಲಿ ಮಾತನಾಡಿದ್ದ ಅವರು, ಇಂದು ಸಂಜೆ ಮಂತ್ರಿ ಮಂಡಲ ಸಭೆ ಇದೆ. ಅಷ್ಟರೊಳಗೆ ಖಾತೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಎಸ್​ವೈ ಸಂಪುಟದಲ್ಲಿ ಹೊಸದಾಗಿ ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂಟಿಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ. ನಿನ್ನೆ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದ್ದರು.

Last Updated : Jan 21, 2021, 8:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.