ETV Bharat / state

ಅಂಕಿ-ಅಂಶ ಸರಿ ಇಲ್ಲ ಅಂದರೆ ರಾಜೀನಾಮೆ ಕೊಟ್ಟು ಹೋಗ್ತೇನೆ: ಬಿಎಸ್​​ವೈ ಗುಡುಗು - ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಕಲ್ಯಾಣ ಕರ್ನಾಟಕ ಭಾಗಕ್ಕೆ ಒತ್ತು ಕೊಡುತ್ತಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಸ್​ವೈ, ಕಲ್ಯಾಣ ಕರ್ನಾಟಕಕ್ಕೆ ಇದುವರೆಗೆ 1131 ಕೋಟಿ ರೂ. ಕ್ರಿಯಾ ಯೋಜನೆಗೆ ಮಂಜೂರಾತಿ ಕೊಡಲಾಗಿದೆ. 692 ಕೋಟಿ ರೂ. ಬಿಡುಗಡೆಯಾಗಿದೆ. ಈ ಮಾಹಿತಿ ಸುಳ್ಳು ಎಂದು ಸಾಬೀತುಪಡಿಸಿದರೆ ನಾನು ರಾಜೀನಾಮೆ ಕೊಟ್ಟು ಹೋಗಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

cm-bs-yadiyurappa-talk-about-grants-isssue
ಬಿಎಸ್​​ವೈ ಗುಡುಗು
author img

By

Published : Feb 3, 2021, 6:37 PM IST

ಬೆಂಗಳೂರು: ನಾನು ಕೊಟ್ಟಿರುವ ಅಂಕಿ-ಅಂಶಗಳು ಸರಿ ಇಲ್ಲ ಅಂದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಯಡಿಯೂರಪ್ಪ ಗುಡುಗಿದ್ದಾರೆ.

ಓದಿ: ಸಾರಿಗೆ ಇಲಾಖೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ: ಡಿಸಿಎಂ ಲಕ್ಷ್ಮಣ ಸವದಿ

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಕಲ್ಯಾಣ ಕರ್ನಾಟಕ ಭಾಗಕ್ಕೆ ಒತ್ತು ಕೊಡುತ್ತಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಲ್ಯಾಣ ಕರ್ನಾಟಕಕ್ಕೆ ಇದುವರೆಗೆ 1131 ಕೋಟಿ ರೂ. ಕ್ರಿಯಾ ಯೋಜನೆಗೆ ಮಂಜೂರಾತಿ ಕೊಡಲಾಗಿದೆ.

692 ಕೋಟಿ ರೂ. ಬಿಡುಗಡೆಯಾಗಿದೆ. ಈ ಮಾಹಿತಿ ಸುಳ್ಳು ಎಂದು ಸಾಬೀತುಪಡಿಸಿದರೆ ನಾನು ರಾಜೀನಾಮೆ ಕೊಟ್ಟು ಹೋಗಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂಕಷ್ಟಕ್ಕೆ ಸಿಲುಕಿ ತೆರಿಗೆ ಸಂಗ್ರಹವಾಗಿಲ್ಲ. ನನ್ನ ಸ್ಥಾನದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ರಿ? ಕೊರೊನಾ ಸಂಕಷ್ಟ ಇರುವುದು ನಿಮಗೂ ಗೊತ್ತಿದೆ. ಸಂಕಷ್ಟದ ಸಮಯದಲ್ಲಿ ಸಾರಿಗೆ ನೌಕರರು ಸೇರಿದಂತೆ ಎಲ್ಲಾ ನೌಕರರಿಗೆ ಸಂಬಳ ಬಿಡುಗಡೆ ಮಾಡಿದ್ದೇವೆ. ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ, ನೀವು ಇದ್ದರೂ ಏನೂ ಮಾಡೋಕೆ ಆಗ್ತಿರಲಿಲ್ಲ. ನಾವೇನು ನೋಟ್ ಪ್ರಿಂಟ್ ಮಾಡ್ತೀವಾ?. ನೀವೂನು ನೋಟ್ ಪ್ರಿಂಟ್ ಮಾಡ್ತೀರಾ? ಎಂದು ಕಿಡಿಕಾರಿದರು.

ಹಣ ಬಿಡುಗಡೆ ಮಾಡಲಾಗಿದ್ದು, ನಿಮ್ಮ ಭಾಗದಲ್ಲಿ ಕೆಲಸ ಶುರು ಮಾಡಿಕೊಳ್ಳಿ. ಹಾಗೇನಾದರೂ ಅಧಿಕಾರಿಗಳು ಅಡ್ಡಿಪಡಿಸಿದರೆ ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಸಿಎಂ ಆಗಿದ್ದರೆ ಪಿಎಂ ಮನೆ ಮುಂದೆ ಧರಣಿ ಮಾಡುತ್ತಿದ್ದೆ:

ನಾನು ಸಿಎಂ ಆಗಿದ್ದರೆ ಕೇಂದ್ರ ಸರ್ಕಾರದ ಮುಂದೆ ಧರಣಿ ಮಾಡುತ್ತಿದ್ದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ ಸ್ವರ್ಗ ಎನ್ನುತ್ತಿದ್ದರು. ಈಗ ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ ನರಕವಾಗಿದೆ. ಅದೆಲ್ಲಾ ಕೇಳೋಕೆ ಮಾತ್ರ ಚೆಂದ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.