ಬೆಂಗಳೂರು: ರಾಜಕೀಯ ಕಾರಣಕ್ಕೆ ಬಂದ್ ಮಾಡೋದು ಸರಿಯಲ್ಲ. ಭಾರತದಲ್ಲಿ ಎಲ್ಲೂ ಬಂದ್ ಯಶಸ್ವಿಯಾಗಿಲ್ಲ, ಬೆಂಗಳೂರಿನಲ್ಲಿ ಕೂಡ ಯಶಸ್ವಿಯಾಗಿಲ್ಲ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ:ನಿಷೇಧಾಜ್ಞೆ ಮಧ್ಯೆಯೂ ವಿಧಾನಸೌಧ ಆವರಣದಲ್ಲಿ 'ಕೈ' ನಾಯಕರ ಪ್ರತಿಭಟನೆ
ಕಾಂಗ್ರೆಸ್ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಕಾಂಗ್ರೆಸ್ ಮುಳುಗಿ ಹೋಗ್ತಾ ಇರೋ ಹಡಗು'. ಅವರು ಕಪ್ಪು ಪಟ್ಟಿಯಾದ್ರೂ ಧರಿಸಲಿ, ಬಿಳಿ ಬಟ್ಟೆಯಾದ್ರೂ ಧರಿಸಲಿ, ಅವರನ್ನು ಯಾರು ಕೇಳ್ತಾರೆ ಎಂದು ಕಿಡಿಕಾರಿದರು.